Advertisement
ಅವರು ಭಾರತ ಸರಕಾರದ ಮಿನಿಷ್ಟ್ರಿ ಆಫ್ ವಿಮೆನ್ ಆಂಡ್ ಚೈಲ್ಡ್ ಡೆವಲಪ್‌ಮೆಂಟ್, ಚೈಲ್ಡ್ ಲೈನ್ ಕಾಸರಗೋಡು ಹಾಗೂ ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಮುಳ್ಳೇರಿಯ ಶ್ರೀ ಗಣೇಶ ಕಲಾಮಂದಿರ ಏರ್ಪಡಿಸಿದ ಬಾಲೋತ್ಸವ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಾಲಕಾರ್ಮಿಕ ಸಮಸ್ಯೆಯಿಂದ ಮಕ್ಕಳನ್ನು ರಕ್ಷಿಸಿ ಸರಿಯಾದ ವಿದ್ಯಾಭ್ಯಾಸ ದೊರೆಯುವಂತೆ ಮಾಡುವುದು, ಸೆಕ್ಷ್ ರಾಕೆಟ್ ಬಲೆಯಲ್ಲಿ ಸಿಲುಕದಂತೆ ಜಾಗೃತಿ ಮೂಡಿಸುವ ಹಾಗೂ ಭಿಕ್ಷಾಟನಾ ಮಾಫಿಯಾಗಳ ಹಿಡಿತದಿಂದ ಮಕ್ಕಳನ್ನು ದೂರ ಸರಿಸುವ ಉತ್ತಮವಾದ ಕೆಲಸಗಳನ್ನು ಚೈಲ್ಡ್‌ಲೈನ್ ಮಾಡುತ್ತಿದೆ. ಅದಕ್ಕೆ ಜನರ ಸಂಪೂರ್ಣ ಸಹಕಾರ ಎಂದೂ ಇರಬೇಕು ಎಂದು ಕರೆನೀಡಿದರು. ಚೈಲ್ಡ್‌ಲೈನ್ ನಿರ್ದೇಶಕರಾದ ವಿಕಸನ ಅಬ್ದುಲ್ ರಹಮಾನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಂಗನಾಥ ಶೆಣೈ, ಪ್ರಾಂಶುಪಾಲರಾದ ವೇಣುಗೋಪಾಲ್, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಚೈಲ್ಡ್‌ಲೈನ್ ಸಂಚಾಲಕ ಆಯಿಷತ್ ಆಫೀಸ, ಚೈಲ್ಡ್ ಲೈನ್ ಸದಸ್ಯೆ ರಮ್ಯಾ ಎನ್ ಅವರು ಶುಭಾಶಂಸನೆಗೈದರು. ಮೆರವಣಿಗೆಯ ಮೆರುಗು
ಕಾರ್ಯಕ್ರಮದ ಅಂಗವಾಗಿ ಆಕರ್ಷಕ ಮೆರವಣಿಗೆಯು ಸಿಂಗಾರಿ ಮೇಳ, ವಿವಿಧ ಕಲಾರೂಪಗಳು ಹಾಗೂ ಜಾಗೃತಿ ಸಂದೇಶದೊಂದಿಗೆ ಮುಳ್ಳೇರಿಯ ಪೇಟೆಯಲ್ಲಿ ಸಾಗಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಗೆ ಆಗಮಿಸಿತು. ಎನ್‌ಎಸ್‌ಎಸ್ ಯೂನಿಟ್ ಮತ್ತು ಸ್ಕೌಟ್ ಆಂಡ್ ಗೈಡ್ ಜಿವಿಎಚ್‌ಎಸ್‌ಎಸ್ ಮುಳ್ಳೇರಿಯ, ವಿದ್ಯಾಶ್ರೀ ಶಿಕ್ಷಣ ಸಂಸ್ಥೆ ಮುಳ್ಳೇರಿಯ ಹಾಗೂ ಚೈಲ್ಡ್‌ಲೈನ್ ಪದಾಧಿಕಾರಿಗಳು ಹಾಗೂ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು.