Advertisement

ಹಸಿರಿ ಗಿರಿಯ ಮೇಲೆ ಮುಳ್ಳಯ್ಯನ ಓಂಕಾರ

07:14 PM Nov 29, 2019 | Lakshmi GovindaRaj |

ಬೆಟ್ಟಗಳು, ಶಿಖರಗಳು ಭೂಮಿಯ ಉತ್ತುಂಗ ತಾಣ. ಆ ತಾಣದಿಂದಲೇ ಬದುಕಿನ ಉತ್ತುಂಗತೆ ಕಂಡುಕೊಳ್ಳುವವರು ಅಧ್ಯಾತ್ಮ ಸಾಧಕರು. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯೂ ಅಂಥದ್ದೇ ಒಂದು ಪುಣ್ಯ ಧ್ಯಾನ ಧಾಮ. ಮುಳ್ಳಯ್ಯ ಎಂಬ ಅಧ್ಯಾತ್ಮ ಸಾಧಕ ಈ ಶಿಖರದ ತುದಿಯಲ್ಲಿ ಬಹಳ ವರ್ಷಗಳ ಕಾಲ ತಪಸ್ಸಿಗೆ ಕುಳಿತಿದ್ದರಂತೆ.

Advertisement

ಜನವಸತಿ ಇಲ್ಲದೆ, ಕೇವಲ ಮುಳ್ಳಯ್ಯ ಮಾತ್ರವೇ ಇಲ್ಲಿ ವಾಸಿಸುತ್ತಿದ್ದರಿಂದ ಮುಳ್ಳಯ್ಯನ ಬೆಟ್ಟ ಅಂತಲೇ ಜನ ಕರೆಯುತ್ತಿದ್ದರಂತೆ. ಕಾಲಕ್ರಮೇಣ ಈ ಬೆಟ್ಟಕ್ಕೆ “ಮುಳ್ಳಯ್ಯನ ಗಿರಿ’ ಎಂಬ ಹೆಸರು ಬಂತು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಈಗಲೂ ಇಲ್ಲಿ ಮುಳ್ಳಯ್ಯ ಸ್ವಾಮಿಯ ದೇಗುಲವನ್ನು ನೋಡಬಹುದು. ದತ್ತಪೀಠದ ಸಾಲಿನಲ್ಲಿ ಬರುವ ಶಿಖರವಿದು.

Advertisement

Udayavani is now on Telegram. Click here to join our channel and stay updated with the latest news.

Next