Advertisement
ಈ ಕೊಳಚೆ ನೀರು ಸಮೀಪದಲ್ಲೇ ಹರಿಯುವ ಮಳೆ ನೀರು ತೋಡಿಗೆ ಹರಿದು ಮುಲ್ಲಕಾಡು, ಮಂಜಲ್ ಪಾದೆ, ಬಂಗ್ರ ಕೂಳೂರು ಮತ್ತಿತರ ಕಡೆ ದುರ್ನಾತ ಬೀರು ತ್ತಿದೆ. ಇದರಿಂದ ಸ್ಥಳೀಯರು ಸಾಂಕ್ರಾಮಿಕ ರೋಗ ಹರಡುವ ಭೀತಿಗೆ ಒಳಗಾಗಿದ್ದಾರೆ
ಇಲ್ಲಿನ ರೇಚಕ ಸ್ಥಾವರಕ್ಕೆ ಬರುವ ತ್ಯಾಜ್ಯಗಳನ್ನು ಇಲ್ಲಿನ ಡೈಯಿಂಗ್ ಬೆಡ್‌ನಲ್ಲಿ ಎರಡಿಂಚಿನಷ್ಟು ತುಂಬಿಸಿ ಅದರಲ್ಲಿನ ಕಲ್ಮಶಗಳನ್ನು ತೆಗೆದು ಸಂಸ್ಕರಿಸಿ ಎರಡನೇ ಹಂತಕ್ಕೆ ಪೈಪ್ ಮೂಲಕ ಕಳಿಸಬೇಕಾಗುತ್ತದೆ. ಅನಂತರ ಮೂರನೇ ಹಂತದಲ್ಲಿ ಸಂಸ್ಕರಿಸಿ ಎಸ್‌ಇಝಡ್ ನೀರಿನ ಮರುಬಳಕೆಗೆ ಕ್ರಮ ಕೈಗೊಳ್ಳುತ್ತದೆ. ಆದರೆ ಇಲ್ಲಿ ಮೊದಲ ಹಂತದಲ್ಲೇ ಆರಿಂಚಿನಷ್ಟು ಸ್ಲೆಜ್ ತುಂಬಿಸಿದ ಕಾರಣ ತಾಂತ್ರಿಕವಾಗಿ ಸಮಸ್ಯೆಯಾಗಿ ಬೆಡ್‌ಗಳಲ್ಲಿ ನೀರು ನಿಂತು ಪಾಚಿ ಹಿಡಿದಿದೆ. ಇತ್ತ ಸ್ಲೆಜ್‌ಗಳನ್ನು ನೇರವಾಗಿ ತೋಡಿಗೆ ಬಿಡಲಾಗಿದೆ. ಇದರಿಂದ ಸುತ್ತಮುತ್ತ ಅತಿಯಾದ ದುರ್ನಾತ, ಸೊಳ್ಳೆಕಾಟ ಕಂಡು ಬರುತ್ತಿದ್ದು, ಸಾಂಕ್ರಾಮಿಕ ರೋಗ ಬಾ ಧಿಸಿದರೂ ಅಚ್ಚರಿ ಯಿಲ್ಲ. ಮುಲ್ಲಕಾಡು ಜನತೆ ಇಲ್ಲಿನ ರೇಚಕ ಸ್ಥಾವರದಿಂದ ಈಗಾಗಲೇ ನಿತ್ಯ ನರಕಯಾತನೆ ಅನುಭವಿಸುತ್ತಿದ್ದು ಇದೀಗ ಇಲ್ಲಿನ ಮಾಲಿನ್ಯದಿಂದ ಸುತ್ತಮುತ್ತಲಿನ ಬಾವಿನೀರು ಹಾಳಾಗಿ ಪಾಲಿಕೆಯ ಕೊಳವೆ ನೀರನ್ನು ಆಶ್ರಯಿಸಿದ್ದಾರೆ.ಹಲವು ದಿನ ಗಳಿಂದ ಈ ಭಾಗದಲ್ಲಿ ವಾಸವಿರುವ ಕುಟುಂಬ ಗಳಿಗೆ ಕೆಟ್ಟ ವಾಸನೆ ಬೀರುತ್ತಿದ್ದರಿಂದ ಅನು ಮಾನಗೊಂಡು ಏಕಾಏಕೀ ಭೇಟಿ ನೀಡಿ ಪರಿಶೀಲಿಸಿದಾಗ ಶುದ್ಧೀಕರಣಗೊಳಿಸದೆ ಪೈಪ್‌ನಲ್ಲಿ ತ್ಯಾಜ್ಯವನ್ನು ನೇರವಾಗಿ ತೋಟಕ್ಕೆ ಬಿಡುತ್ತಿರುವುದು ಕಂಡು ಆತಂಕವಾಯಿತು. ಈ ರೀತಿ ನಿರ್ಲಕ್ಷ್ಯಮಾಡಿದರೆ ಸ್ಥಳೀಯರು ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಬಹುದು. ಈ ಹಿಂದೆಯೂ ಇಂತಹ ಅಧ್ವಾನಗಳಾದಾಗ ಮರಗಿಡಗಳಲ್ಲಿ ಎಲ್ಲೆಂದರಲ್ಲಿ ನೊಣಗಳು ಕಂಡು ಬಂದು ಸಾರ್ವಜನಿಕರಿಗೆ ತೊಂದರೆಯಾಗಿತ್ತು ಎನ್ನುತ್ತಾರೆ ದೀಪಕ್ ಪೂಜಾರಿ. ಬೆರಳೆಣಿಕೆಯ ಕಾರ್ಮಿಕರು!
ಇಲ್ಲಿನ ರೇಚಕ ಸ್ಥಾವರದ ಡೈಯಿಂಗ್ ಬೆಡ್ ಶುಚಿಗೊಳಿಸಲು ಕನಿಷ್ಠ ಹತ್ತು ಕಾರ್ಮಿಕರ ಆವಶ್ಯಕತೆಯಿದೆ. ಆದರೆ ಬುಧವಾರ ಭೇಟಿ ನೀಡಿದಾಗ ಬೆರಳೆಣಿಕೆಯ ಕಾರ್ಮಿಕರು ಕಂಡು ಬಂದಿದ್ದು ನಿತ್ಯ ಕೆಲಸ ಕಾರ್ಯಕ್ಕೂ ಸಾಲದಾಗಿದೆ. ಈ ಎಲ್ಲ ಸಮಸ್ಯೆಯಿಂದ ಡೈಯಿಂಗ್ ಬೆಡ್ ಶುಚಿಗೊಳಿಸಲಾಗದೆ ನೇರವಾಗಿ ತೋಡಿಗೆ ಬಿಡಲಾಗುತ್ತಿದೆ.
Related Articles
ಮುಲ್ಲಕಾಡು ರೇಚಕ ಸ್ಥಾವರದಲ್ಲಿ ತ್ಯಾಜ್ಯವನ್ನು ನೇರವಾಗಿ ತೋಡಿಗೆ ಬಿಡುತ್ತಿರುವುದರ ಬಗ್ಗೆ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸಲಾಗುವುದು. ತಪ್ಪು ಎಸಗಿದ್ದು ಕಂಡು ಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್ ಶ್ರೀಧರ್, ಆಯುಕ್ತರು, ಮ.ನ.ಪಾ.
Advertisement
ತತ್‌ಕ್ಷಣ ಕ್ರಮ ಕೈಗೊಳ್ಳಿಇಲ್ಲಿನ ಸ್ಥಾವರ ನಿರ್ವಹಣೆಗೆ ಶೇ.70ರಷ್ಟು ಎಸ್‌ಇಝಡ್, ಪಾಲಿಕೆ ಶೇ. 30ರಷ್ಟು ಅಂದರೆ 1.30 ಕೋ.ರೂ. ಗುತ್ತಿಗೆದಾ ರರಿಗೆ ಪಾವತಿಸುತ್ತದೆ. ತತ್‌ಕ್ಷಣ ಎಸ್‌ಇಝಡ್ ಅಧಿಕಾರಿಗಳು, ಪಾಲಿಕೆ ಆರೋಗ್ಯ ವಿಭಾಗ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳಬೇಕು. ಗುತ್ತಿಗೆ ರದ್ದುಪಡಿಸಿ ಗುತ್ತಿಗೆ ದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು.
-ದೀಪಕ್ ಪೂಜಾರಿ,ನಗರ ಯೋಜನೆ, ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷರು,