Advertisement

ಬರಾದಾರ್‌ ಸತ್ತಿಲ್ಲ, ಬದುಕಿದ್ದಾನೆ!

11:04 PM Sep 14, 2021 | Team Udayavani |

ಕಾಬೂಲ್‌: ನೂತನವಾಗಿ ರಚನೆ­ಯಾಗಿ­ರುವ ತಾಲಿಬಾನ್‌ ಸರಕಾರದ ಉಪ ಪ್ರಧಾನಿಯಾದ ಮುಲ್ಲಾ ಅಬ್ದುಲ್‌ ಘನಿ ಬರಾದಾರ್‌ ಇನ್ನೂ ಜೀವಂತವಾಗಿದ್ದಾನೆ. ಅವರ ಹತ್ಯೆಯಾಗಿಲ್ಲ ಎಂದು ತಾಲಿಬಾನಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಬರಾದಾರ್‌ ಜೀವಂ­ತವಾಗಿದ್ದಾನೆ ಎಂಬುದಕ್ಕೆ ಸಾಕ್ಷಿಯಾಗಿ ಕಂದಹಾರ್‌ನಲ್ಲಿ ಇತ್ತೀಚೆಗೆ ನಡೆದಿದೆಯೆನ್ನಲಾದ ತಾಲಿಬಾನಿಗಳ ಸಭೆಯಲ್ಲಿ ಆತ ಹಾಜರಿರುವ ವೀಡಿಯೋವನ್ನು ಜಾಲತಾಣಗಳಿಗೆ  ಅಪ್‌ಲೋಡ್‌ ಮಾಡಲಾಗಿದೆ.

ಈ ಬಗ್ಗೆ ಧ್ವನಿ ಸಂದೇಶ ಬಿಡುಗಡೆ ಮಾಡಿರುವ ತಾಲಿಬಾನ್‌ ವಕ್ತಾರ ಸಲೈಲ್‌ ಶಹೀನ್‌, “ಬರಾದಾರ್‌ ಸತ್ತಿಲ್ಲ. ಆತ ಇನ್ನೂ ಜೀವಂತವಾಗಿ­ದ್ದಾನೆ.  ಅಧಿಕಾರ ಕಿತ್ತಾಟದ ಹಿನ್ನೆಲೆಯಲ್ಲಿ ಅವನನ್ನು ಹತ್ಯೆಗೈಯ್ಯಲಾಗಿದೆ ಎಂಬ ವದಂತಿಗಳು ಸುಳ್ಳು ಹಾಗೂ ಆಧಾರ ರಹಿತ’ ಎಂದಿದ್ದಾನೆ. ಇನ್ನು, ಅಧಿಕಾರ ಹಂಚಿಕೆ ವಿಚಾರದಲ್ಲಿ ತಾಲಿಬಾನಿಗಳು ಹಾಗೂ ಹಕ್ಕಾನಿ ಗುಂಪಿನ ನಡುವೆ ಹೊಡೆದಾಟ­ವಾಗಿದೆ ಎಂಬ ವಿಚಾರವನ್ನೂ ಅಲ್ಲಗಳೆದಿದ್ದಾನೆ.

ಮಹಿಳೆಯರ ಆನ್‌ಲೈನ್‌ ಅಭಿಯಾನ :

ತಾಲಿಬಾನಿಗಳು ಅಧಿಕಾರಕ್ಕೆ ಬಂದಾಗಿನಿಂದ ಚ್ಯುತಿಯಾಗಿರುವ ತಮ್ಮ ಹಕ್ಕುಗಳನ್ನು ರಕ್ಷಿಸುವುದಕ್ಕೋಸ್ಕರ, ಅಫ್ಘಾನಿಸ್ಥಾನದ ಮಹಿಳೆಯರು ಟ್ವೀಟರ್‌ನಲ್ಲಿ “ಡೋಂಟ್‌ ಟಚ್‌ ಮೈ ಕ್ಲಾತ್ಸ್’ ಎಂಬ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನದಡಿ, ಅಫ್ಘಾನ್‌ ಮಹಿಳೆಯರು ತಮ್ಮ ದೇಶದ ಸಾಂಪ್ರದಾಯಿಕ ಉಡುಗೆಗಳು, ಆಭರಣಗಳನ್ನು ತೊಟ್ಟು, ತಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದ್ದಾರೆ. ಪ್ರಮುಖವಾಗಿ ಈ ಅಭಿಯಾನ, ತಾಲಿಬಾನಿಗಳು ಜಾರಿಗೊಳಿಸಿರುವ ಡ್ರೆಸ್‌ ಕೋಡ್‌ ಅನ್ನು ವಿರೋಧಿಸುವ ಉದ್ದೇಶವನ್ನು ಹೊಂದಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next