Advertisement

ಮೂಲ್ಕಿ ಸೀಮೆ ಅರಸು ಕಂಬಳ: ಫ‌ಲಿತಾಂಶ

11:22 AM Dec 25, 2017 | |

ಪಡುಪಣಂಬೂರು: ಮೂಲ್ಕಿ ಸೀಮೆ ಅರಸು ಕಂಬಳ ಸಮಿತಿಯ ಅಶ್ರಯದಲ್ಲಿ ಬಾಕಿಮಾರು ಗದ್ದೆಯಲ್ಲಿ ನಡೆದ ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ 6.5 ಕೋಲು ನಿಶಾನೆಗೆ ನೀರು ಹಾಯಿಸಿದ ವಾಮಂಜೂರು ತಿರುವೈಲು ಗುತ್ತು ಅಭಯ ನವೀನ್‌ಚಂದ್ರ ಆಳ್ವ (ಹಲಗೆ ಮೆಟ್ಟಿದವರು: ಬೈಂದೂರು ಭಾಸ್ಕರ ದೇವಾಡಿಗ) ಅವರ ಜೋಡಿ ಕೋಣಗಳು ಪ್ರಶಸ್ತಿ ಪಡೆದುಕೊಂಡಿತು.

Advertisement

ಫಲಿತಾಂಶ
ಹಗ್ಗ ಹಿರಿಯ ವಿಭಾಗ: ಕಾರ್ಕಳ ಜೀವನ್‌ದಾಸ್‌ ಅಡ್ಯಂತಾಯ- ಪ್ರಥಮ, (ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ಪದವು ಕಾನಡ್ಕ ಫ್ರಾನ್ಸಿಸ್‌ಫ್ಲೇವಿ ಡಿ’ಸೋಜಾ -ದ್ವಿತೀಯ, (ಪಣಪೀಲು ಪ್ರವೀಣ್‌ ಕೋಟ್ಯಾನ್‌).  ಹಗ್ಗ ಕಿರಿಯ: ಮೂಡಬಿದಿರೆ ಹೊಸಬೆಟ್ಟು ಎರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್‌- ಪ್ರಥಮ, (ಕೊಳಕೆ ಇರ್ವತ್ತೂರು ಆನಂದ), ಮಾಳ ಆನಂದ ನಿಲಯ ಶೇಖರ್‌ ಎ. ಶೆಟ್ಟಿ – ದ್ವಿತೀಯ (ಅರ್ವ ಆಳದಂಗಡಿ ಸತೀಶ್‌ ದೇವಾಡಿಗ).

ನೇಗಿಲು ಹಿರಿಯ: ಕೌಡೂರು ಬೀಡು ತುಷಾರ್‌ ಮಾರಪ್ಪ ಭಂಡಾರಿ ‘ಎ’ -ಪ್ರಥಮ, (ಹೊಕ್ಕಾಡಿಗೋಳಿ ಹಕ್ಕೇರಿ
ಸುರೇಶ್‌ ಎಂ. ಶೆಟ್ಟಿ ), ಇರುವೈಲು ಪಾಣಿಲಬಾಡ ಪೂಜಾರಿ- ದ್ವಿತೀಯ (ಕೊಳಕೆ ಇರ್ವತ್ತೂರು ಆನಂದ) ನೇಗಿಲು ಕಿರಿಯ: ಮೂಲ್ಕಿ ಮಟ್ಟು ಗಣೇಶ್‌ ಸನಿಲ್‌- ಪ್ರ, (ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ), ಬೋಳದ
ಗುತ್ತು ಸತೀಶ್‌ ಶೆಟ್ಟಿ ‘ಬಿ’-ದ್ವಿತೀಯ (ಮರೋಡಿ ಶ್ರೀಧರ್‌).

ಅಡ್ಡಹಲಗೆ: ಬೋಳಾರ ತ್ರಿಶಾಲ್‌ ಕೆ. ಪೂಜಾರಿ-ಪ್ರಥಮ, (ಬಂಗಾಡಿ ಕುದ್ಮಾನ್‌ ಲೋಕಯ್ಯ ಗೌಡ), ಬೇಲಾಡಿ
ಬಾವ ಅಶೋಕ್‌ ಶೆಟ್ಟಿ ‘ಬಿ’-ದ್ವಿ, (ನಾರಾವಿ ಯುವರಾಜ ಜೈನ್‌) ಬಹುಮಾನ ಗಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next