Advertisement

ಮೂಲ್ಕಿ ಇನ್ನು ಪ್ಲಾಸ್ಟಿಕ್‌ ಮುಕ್ತ 

12:28 PM Jun 24, 2018 | |

ಮೂಲ್ಕಿ : ರಾಜ್ಯ ಸರಕಾರದ ಪರಿಸರ ಇಲಾಖೆಯಿಂದ ಬಂದಿರುವ ಆದೇಶದಂತೆ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಪ್ಲಾಸ್ಟಿಕ್‌ ಚೀಲಗಳನ್ನು ಬಳಸದಂತೆ ಮೂಲ್ಕಿ ನಗರ ಪಂಚಾಯತ್‌
ನಲ್ಲಿ ನಿರ್ಣಯಿಸಲಾಯಿತು.

Advertisement

ಮೂಲ್ಕಿ ನ.ಪಂ. ಅಧ್ಯಕ್ಷ ಸುನಿಲ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮಾಸಿಕ ಸಭೆ ನಡೆಯಿತು. ಪ್ಲಾಸ್ಟಿಕ್‌ ಬಳಸದಂತೆ ಮೊದಲ ಹಂತದಲ್ಲಿ ಸಾರ್ವಜನಿಕರಿಗೆ ಮಾಹಿತಿ ಕೊಟ್ಟು ಎಚ್ಚರಿಕೆ ನೀಡಲಾಗುವುದು. ಮರುಕಳಿಸಿದರೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ಅಧ್ಯಕ್ಷರು ಸೂಚಿಸಿದರು. ನಗರದ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಶೇ.40 ಪ್ರಮಾಣದಲ್ಲಿ ಪ್ಲಾಸ್ಟಿಕ್‌ ವಸ್ತುಗಳು ಯಾವುದೇ ವರ್ಗೀಕರಣವಿಲ್ಲದೆ ಬರುತ್ತಿವೆ. ಇದು ವಿಲೇವಾರಿ ವ್ಯವಸ್ಥೆಯ ತೊಂದರೆಯಾಗಿರುವುದರಿಂದ ಮುಂದಿನ ಕಾರ್ಯಾಚರಣೆಗೆ ಅಧಿಕಾರಿಗಳಿಗೆ ಸದಸ್ಯರು ಸಹಕಾರ ನೀಡಬೇಕೆಂದರು.

ಕೈಗಾರಿಕಾ ಪ್ರದೇಶದಿಂದ ಗದ್ದೆಗೆ ತ್ಯಾಜ್ಯ
ಕಾರ್ನಾಡು ಕೈಗಾರಿಕಾ ಪ್ರದೇಶಗಳ ಕೆಲವೆಡೆ ಸ್ಥಳೀಯರ ಗದ್ದೆ ಮತ್ತು ಬಾವಿಗೆ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ಈ ಬಗ್ಗೆ ಇಲಾಖೆಗೆ ಪತ್ರ ಬರೆದು ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಮಾಡುವಂತೆ ಸದಸ್ಯ ಪುತ್ತು ಬಾವಾ ಆಗ್ರಹಿಸಿದರು. ಮೂಲ್ಕಿ ಬಸ್‌ ನಿಲ್ದಾಣಕ್ಕೆ ಸರಕಾರದಿಂದ ಹೆದ್ದಾರಿ ಪಕ್ಕದ ನಿವೇಶನವೊಂದನ್ನು ಭೂ ಸ್ವಾಧೀನಕ್ಕೆ ಒಳಪಡಿಸುವ ಪ್ರಕ್ರಿಯೆ ಆರಂಭಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸರಕಾರದಿಂದ ಬಂದಿರುವ 93 ಲಕ್ಷ ರೂ. ಮೊತ್ತದ ಎಸ್‌.ಎಫ್‌.ಸಿ. ಅನುದಾನದ ಬಗ್ಗೆ ಕೆಲವೊಂದು ಕಾಮಗಾರಿಗೆ ಕ್ರಿಯಾ ಯೋಜನೆ ನಡೆಸಲು ಸಭೆ ಮುಂದಾಗಿದ್ದು, ನಗರದ ಪ್ರಮುಖ ಸಮಸ್ಯೆ ನಿವಾರಿಸಲು ಆದ್ಯತೆ ನೀಡಬೇಕೆಂದು ಆಗ್ರಹಿಸಲಾಯಿತು. ಕಾರ್ನಾಡು ಬೈಪಾಸ್‌ ಬಳಿ ಪ್ರಯಾಣಿಕರ ಬಸ್‌ ತಂಗುದಾಣವನ್ನು ನಿರ್ಮಿಸಲು ಕಾರ್ನಾಡು ಯಂಗ್‌ ಸ್ಟಾರ್ ಅಸೋಶಿಯೇಶನ್‌ಗೆ ಸಭೆ ಅನುಮತಿ ನೀಡಿತು.

ಈ ಸಂದರ್ಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್‌ ಅವರನ್ನು ನಗರ ಪಂಚಾಯತ್‌ನ ಆಡಳಿತದ ವತಿಯಿಂದ ಗೌರವಿಸಲಾಯಿತು. ನ.ಪಂ. ಉಪಾಧ್ಯಕ್ಷೆ ರಾಧಿಕಾ ಯಾದವ ಕೋಟ್ಯಾನ್‌ ವಂದಿಸಿದರು. ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿ, ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌ ಉಪಸ್ಥಿತರಿದ್ದರು.

Advertisement

ಅನುಮತಿ ಅಗತ್ಯ
ಇನ್ನು ಮುಂದೆ ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಯಾವುದೇ ನಿವೇಶನಗಳಿಗೆ ಮಣ್ಣು ತುಂಬಿಸಿ ಸಮತಟ್ಟು
ಮಾಡಬೇಕಾದರೆ ನಗರ ಪಂಚಾಯತ್‌ನ ಅಧಿಕಾರಿಗಳು ಸ್ಥಳ ತಪಾಸಣೆ ಮಾಡಿ ವರದಿ ಸಲ್ಲಿಸಿದ ಅನಂತರ ಅನುಮತಿ
ನೀಡಲಾಗುವುದು ಎಂದು ಅಧ್ಯಕ್ಷ ಸುನಿಲ್‌ ಆಳ್ವ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next