ಮೂಲ್ಕಿ: ಕಾರ್ನಾಡು ಸದಾಶಿವ ನಗರ ಕೆ.ಇ.ಬಿ. ಬಳಿಯ ನಿವಾಸಿ ಜಂಶೀರ್ ಹಮೀದ್ (44) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅತಿಯಾದ ಕುಡಿತದ ಚಟವಿದ್ದ ಅವರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಕಾರ್ನಾಡು ಆಶ್ರಯ ಕಾಲನಿ ನಿವಾಸಿ ವಿಟಲ (22) ಅವರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಅತಿಯಾದ ಕುಡಿತದ ಚಟವಿದ್ದ ಅವರು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿದ್ದು, ಜೀನದದಲ್ಲಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಯುವಕ ಆತ್ಮಹತ್ಯೆ
ಸುಳ್ಯ: ಬೇಂಗಮಲೆ ಸಿಆರ್‌ಸಿ ಕಾಲನಿಯ ದೀಪಕ್ (25) ಸೋಮವಾರ ಐವರ್ನಾಡಿನ ಬಾಡಿಗೆ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಅವರು ಕೆಲವು ಸಮಯದ ಹಿಂದೆ ಸುಳ್ಯದ ಶೋ ರೂಂ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದರೆಂದು ತಿಳಿದು ಬಂದಿದೆ.