Advertisement

Mulki: ಡಿವೈಡರ್‌ ಏರಿ ಬಂದಿದ್ದ ಲಾರಿ; ಗಾಯಾಳು ಸಾವು

12:27 AM Dec 09, 2023 | Team Udayavani |

ಮೂಲ್ಕಿ: ಗುರುವಾರ ಮುಂಜಾನೆ ಮೂಲ್ಕಿಯಲ್ಲಿ ನಡೆದ ಲಾರಿ ಚಾಲಕನ ಅವಾಂತರದಲ್ಲಿ ಬಲವಾಗಿ ಗಾಯಗೊಂಡಿದ್ದ ಸ್ಕೂಟರ್‌ ಸವಾರ ಸಂಗಪ್ಪ ಮಡಿವಾಳಪ್ಪ ಮದರಿ (57) ಅವರು ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.

Advertisement

ಬಪ್ಪನಾಡು ದೇಗುಲದ ಎದುರಿನ ನೇಚರ್‌ ಟೆಂಪಲ್‌ ವಸತಿ ಸಮುಚ್ಚಯದಲ್ಲಿ ವಾಚ್‌ಮನ್‌ ಆಗಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ ಸಂಗಪ್ಪ ಸಮುಚ್ಚಯದ ಎಲ್ಲ ನಿವಾಸಿಗರ ವಿಶ್ವಾಸದ ವ್ಯಕ್ತಿಯಾಗಿದ್ದರು.
ತನ್ನ ಪುತ್ರಿಯನ್ನು ಕಾಲೇಜಿಗೆ ಬಿಡುವುದಕ್ಕಾಗಿ ಆಕೆಯೊಂದಿಗೆ ಸ್ಕೂಟರ್‌ ಮೂಲಕ ತೆರಳುತ್ತಿದ್ದಾಗ ಹಿಂದಿನಿಂದ ಲಾರಿ ಎರಗಿ ಬಂದಿತ್ತು. ಈ ಸಂದರ್ಭ ರಸ್ತೆಗೆಸೆಯಲ್ಪಟ್ಟಿದ್ದ ಸಂಗಪ್ಪ ತೀವ್ರವಾಗಿ ಗಾಯಗೊಂಡಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಸಂಗಪ್ಪ ಅವರು ಶುಕ್ರವಾರ ಬೆಳಗ್ಗೆ ಮೃತಪಟ್ಟರು.

ಪುತ್ರಿ ಸ್ಕೂಟರ್‌ನಿಂದ ಎಸೆಯಲ್ಪಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಳು. ವಸತಿ ಸಮುಚ್ಚಯದ ಮಾಲಕರು ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ಮಾಡಿ ಮಹಜರು ನಡೆಸಿದ ಅನಂತರ ಸಂಗಪ್ಪನ ಶರೀರವನ್ನು ಯಾದಗಿರಿ ಜಿಲ್ಲೆಯ ಬದಿಯಾಳ್‌ಗೆ ಆ್ಯಂಬುಲೆನ್ಸ್‌ ಮೂಲಕ ಕಳುಹಿಸಿಕೊಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next