Advertisement

ಮೂಲ್ಕಿ ನಗರ ಪಂಚಾಯತ್‌ಗೆ ಸರ್ವಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ

01:00 AM Mar 08, 2019 | Harsha Rao |

ಮೂಲ್ಕಿ: ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆಯ ಸ್ವತ್ಛ ಸರ್ವೇಕ್ಷಣೆ -2019 ಅಭಿಯಾನದಡಿ ಜನರೇ ಆಯ್ಕೆ ಮಾಡಿದ ಸ್ವತ್ಛ ನಗರ (25 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ) ಪ್ರಶಸ್ತಿಗೆ ಪಾತ್ರವಾಗಿರುವ ಮೂಲ್ಕಿ ನಗರ ಪಂಚಾಯತ್‌ಗೆ ಸರ್ವಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿಯನ್ನು ಗುರುವಾರ ದಿಲ್ಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಸರಕಾರದ ನಗರಾಭಿವೃದ್ಧಿ ಸಚಿವ ಹರ್ದಿಪ್‌ ಪುರಿ ಸಿಂಗ್‌, ಇಲಾಖೆಯ ಕಾರ್ಯದರ್ಶಿ ದಯಾ ಶಂಕರ್‌ ಮಿಶ್ರಾ ವಿತರಿಸಿದರು. ರಾಷ್ಟ್ರಪತಿ ರಾಮನಾಥ ಕೋವಿಂದ್‌ ಉಪಸ್ಥಿತರಿದ್ದರು.

Advertisement

ಮಂಗಳೂರು ನಗರ ಯೋಜನ ನಿರ್ದೇಶಕರಾದ ಪ್ರಸನ್ನ, ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನಿಲ್‌ ಆಳ್ವ, ಮುಖ್ಯಾಧಿಕಾರಿ ಇಂದು ಎಂ., ಸ್ಥಾಯೀ ಸಮಿತಿಯ ಅಧ್ಯಕ್ಷ ಶೆೈಲೇಶ್‌ ಕುಮಾರ್‌, ಆರೋಗ್ಯ ನಿರೀಕ್ಷಕರಾದ ಲಿಲ್ಲಿ ನಾಯರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next