Advertisement
ಮೂಲ್ಕಿಯಲ್ಲಿ ಒಟ್ಟು 63 ಮತ ಕೇಂದ್ರಗಳನ್ನು ಸುರತ್ಕಲ್ ಮತ್ತು ಬಜಪೆ ಠಾಣೆಯ 16 ಕೇಂದ್ರಗಳನ್ನು ಸೇರಿಸಿ ಕೊಂಡು ನಾಲ್ಕು ಸೆಕ್ಟರ್ ಆಗಿ ಮತ ಕೇಂದ್ರ ಗಳ ರಕ್ಷಣೆಯನ್ನು ವಿಂಗಡಿಸಿದ್ದು, ಅತಿ ಸೂಕ್ಷ್ಮ ಮತಗಟ್ಟೆಗಳಾದ ಲಿಂಗಪ್ಪಯ್ಯ ಕಾಡು ಹಾಗೂ ಹಳೆಯಂಗಡಿ ಪ್ರದೇಶದ ಇಂದಿರಾ ನಗರದಲ್ಲಿ ನ ತಲಾ ಒಂದು ಮತ ಗಟ್ಟೆಗೆ ಈ ಪಡೆಯ ಸಿಪಿಎಂಎಫ್‌ನ ನಾಲ್ವರು ಯೋಧರು ಒಬ್ಬರು ಪೊಲೀಸ್ ಸಿಬಂದಿ ಗಳು ನಿಯೋಜಿಸಲಾಗಿದೆ. ಇಲ್ಲಿನ ಮತದಾನದ ಚಟುವಟಿಕೆಯ ಸಂಪೂರ್ಣ ವೀಡಿಯೋ ಚಿತ್ರೀಕರಣವನ್ನು ಸಹ ಮಾಡಲಾಗುತ್ತದೆ. ಅತಿಸೂಕ್ಷ್ಮ ಮತ ಗಟ್ಟೆಯ ಆಸುಪಾಸಿನ ಮತಗಟ್ಟೆಗಳಿಗೂ ಸಹ ಯೋಧರು ಪ್ರತೀ ಒಂದು ತಾಸಿಗೆ 15 ನಿಮಿಷಗಳ ಕಣ್ಗಾವಲನ್ನು ಸ್ಥಳಕ್ಕೆ (ರೌಂಡ್ಸ್) ಭೇಟಿ ನೀಡುವ ಪರಿಪಾಠ ನಡೆಸಲು ಸೂಚನೆ ನೀಡಲಾಗಿದೆ.
ಮಂಗಳೂರು ಕಮಿಷನರೆಟ್ ವ್ಯಾಪ್ತಿಗೆ ಒಟ್ಟು 20 ಪ್ಲಾಟೂನ್‌ನ 100 ಮಂದಿ ಸಿಪಿಎಂಎಫ್ ಯೋಧರ ನಿಯೋಜ ನೆ ಗೊಂಡಿದ್ದು, ಇವರಲ್ಲಿ ಮಹಿಳಾ ಯೋಧರು ಸಹ ಸೇರಿದ್ದಾರೆ. ಇವರ ಲ್ಲಿನ ಒಂದು ಪ್ಲಟೂನ್ ಮೂಲ್ಕಿಗೆ ಆಗಮಿಸಿದೆ. ಎ. 17ರಂದು ಪೂರ್ವ ಭಾವಿಯಾಗಿ ಯೋಧರು ಹಾಗೂ ಮೂಲ್ಕಿ ಪೊಲೀಸ್ ಸಿಬಂದಿ ಹಳೆಯಂಗಡಿ ಹಾಗೂ ಲಿಂಗಪ್ಪಯ್ಯಕಾಡಿನ ಪ್ರದೇಶದಲ್ಲಿ ರೂಟ್‌ಮಾರ್ಚ್ ನಡೆಸಿದ್ದಾರೆ.