Advertisement

Mulki: ಕೊರಗ ಸಮುದಾಯದಿಂದ ಅಹೋರಾತ್ರಿ ಧರಣಿ

01:30 PM Sep 20, 2024 | Team Udayavani |

ಮೂಲ್ಕಿ: ನಮಗೆ ಬದುಕಲು ಯೋಗ್ಯವಾದ ಭೂಮಿಯ ಹಕ್ಕು ಪತ್ರ ಕೊಡಿ ಎಂದು ಸರಕಾರವನ್ನು ಆಗ್ರಹಿಸಿ ಕರ್ನಾಟಕ -ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಹಾಗೂ ಕಿನ್ನಿಗೋಳಿ ಕೊರಗ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಮೂಲ್ಕಿ ತಾಲೂಕು ಕಚೇರಿಯ ಎದುರು ಕೊರಗ ಸಮುದಾಯ ಮುಖಂಡರು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಎರಡನೇ ದಿನದಲ್ಲಿ ಮುಂದುವರಿದಿದೆ.

Advertisement

20 ವರ್ಷಗಳಿಂದ ಸರಕಾರ ತಮಗೆ ಕೃಷಿ ಭೂಮಿಯನ್ನು ಕೊಡಿಸುವಂತೆ ಸುಮಾರು 30ಕ್ಕೂ ಮಿಕ್ಕಿದ ಕೊರಗ ಕುಟುಂಬಗಳು ಆಗ್ರಹಿಸುತ್ತಾ ಬಂದಿದ್ದರೂ ಸರಕಾರದಿಂದ ಯಾವುದೇ ವಾಸಕ್ಕೆ ಪ್ರಯೋಜನ ಇಲ್ಲದ ಜಾಗವನ್ನು ಕೊಲ್ಲೂರು ಪದವಿನಲ್ಲಿ ಒದಗಿಸಿದ್ದು ಇದನ್ನು ಬದಲಾಯಿಸಿ ಎಳತ್ತೂರು ಗ್ರಾಮದಲ್ಲಿ 7 ಎಕ್ರೆಗೂ ಮಿಕ್ಕಿದ ಜಾಗವನ್ನು ಗುರುತಿಸಿದ್ದು ಆ ಜಾಗವನ್ನು ಸರಕಾರ ಒದಗಿಸುವಂತೆ ಆಗ್ರಹಿಸಿದೆ.

ಕೊರಗ ಸಮುದಾಯದ ಮುಖಂಡರು ನಡೆಸುತ್ತಿರುವ ಪ್ರತಿಭಟನ ಸ್ಥಳಕ್ಕೆ ಐಟಿಡಿಪಿ ಅಧಿಕಾರಿಗಳಾದ ಬಸವರಾಜ್‌ ನಿನ್ನೆ ಚರ್ಚೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದರೂ ಪಟ್ಟು ಹಿಡಿದ ಮುಖಂಡರು ಎರಡನೇ ದಿನದ ಪ್ರತಿಭಟನೆ ಮುಂದುವರಿಸಿದ್ದಾರೆ.

ಮಾತುಕತೆಗೆ ಆಹ್ವಾನ: ಒಪ್ಪದ ಮುಖಂಡರು
ಗುರುವಾರ ಮೂಲ್ಕಿ ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕಾರ್‌, ಉಪ ತಹಶಿಲ್ದಾರ್‌ ದಿಲೀಪ್‌ ರೋಡ್ಕರ್‌, ತಾಲೂಕು ಕಂದಾಯ ಅಧಿಕಾರಿ ದಿನೇಶ್‌ ಪ್ರತಿಭಟನ ನಿರತರನ್ನು ಭೇಟಿ ಮಾಡಿ ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ ಆಹ್ವಾನಿಸಿ ಪರಿಹಾರ ಮಾರ್ಗ ಪ್ರಯತ್ನ ಮಾಡುವ ಭರವಸೆಯಿತ್ತರೂ ಮುಖಂಡರು ಒಪ್ಪದೆ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಸಮುದಾಯದ ರಾಜ್ಯ ಸಂಯೋಜಕ ಕೆ. ಪುತ್ರನ್‌, ಮುಖಂಡರಾದ ಸುಂದರ ಗುತ್ತಕಾಡು, ಸುಶೀಲಾ ಮೊದಲಾದವರು ಪ್ರತಿಭಟನೆ ನಡೆಸುತ್ತಿದ್ದಾರೆ.

ಎಳತ್ತೂರಿನಲ್ಲಿ ಜಾಗ ನೀಡಲು ಆಗ್ರಹ
ಅಧಿಕಾರಿಗಳು ಕೊಲ್ಲೂರು ಪದವಿಗೆ ತೆರಳಿ ಗುರುತಿಸಿದ ಜಾಗ ವಾಸಕ್ಕೆ ಯೋಗ್ಯವಲ್ಲದ ಕಾರಣ ಕೊಲ್ಲೂರು ಪದವಿನ ಜಾಗ ವಾಸಕ್ಕೆ ಯೋಗ್ಯವಲ್ಲದ ಇಳಿಜಾರು ಪ್ರದೇಶವಾಗಿದ್ದು, ಅದನ್ನು ಕೈಬಿಟ್ಟು ನಾವು ಎಳತ್ತೂರಿನಲ್ಲಿ ಗುರುತಿಸಿರುವ ಸರ್ವೇ ನಂಬ್ರ 87ರ 7 ಎಕ್ರೆ 40 ಸೆಂಟ್ಸು ಜಾಗವನ್ನು ಕೊಡಿಸುವ ವರೆಗೆ ಹೋರಾಟ ನಿಲ್ಲದು ಎಂದು ಕೊರಗ ಸಮುದಾಯದ ಮುಖಂಡರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next