Advertisement

ಮೂಲ್ಕಿ: ಅಸಭ್ಯವಾಗಿ ವರ್ತಿಸಿದವನ ಮೇಲೆ ಹಲ್ಲೆ; ಆರೋಪಿ ಸೇರಿ ನಾಲ್ವರ ಬಂಧನ

03:22 PM Dec 18, 2022 | Team Udayavani |

ಮೂಲ್ಕಿ : ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಆರೋಪಿ ಮತ್ತು ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮೂಲ್ಕಿ ಕೆರೆಕಾಡು ಗ್ರಾಮದಲ್ಲಿ ಡಿ. 13ರಂದು ಆರೋಪಿ ಬೈಕ್‌ನಲ್ಲಿ ಬಾಲಕಿಯನ್ನು ಹಿಂಬಾಲಿಸಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಬಾಲಕಿಯ ತಂದೆಯ ಸ್ನೇಹಿತರಿಬ್ಬರು ಗಮನಿಸಿದ್ದರು. ಶನಿವಾರ ಮತ್ತೆ ಅದೇ ಪ್ರದೇಶದಲ್ಲಿ ಆರೋಪಿ ಕಂಡು ಬಂದ ಹಿನ್ನೆಲೆಯಲ್ಲಿ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದರು.

ಬಾಲಕಿಯ ಪೋಷಕರ ದೂರಿನ ಮೇರೆಗೆ ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಅಲ್ಲದೆ ಆರೋಪಿಯ ದೂರಿನ ಮೇರೆಗೆ ಮೂಲ್ಕಿ ಪೊಲೀಸ್‌ ಠಾಣೆಯಲ್ಲಿ ಹಲ್ಲೆ ಹಾಗೂ ಗಲಭೆ ಪ್ರಕರಣದ ದೂರು ಕೂಡ ದಾಖಲು ಮಾಡಲಾಗಿದೆ.

ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹಲ್ಲೆ ನಡೆಸಿದ ಕೆರೆಕಾಡು ಕೆಂಚನ ಕೆರೆಯ ಮೂವರನ್ನು, ಹಲ್ಲೆಗೊಳಗಾದ ಆರೋಪಿಯನ್ನೂ ಪೋಕ್ಸೋ ಪ್ರಕರಣದಡಿ ಬಂಧಿಸಿ  ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next