ಮಂಗಳೂರು: ಎಪ್ಪತ್ತೆಂಟು ವರ್ಷಗಳ ಪರಂಪರೆ ಮತ್ತು ನಂಬಿಕೆಯ ಮುಳಿಯ ಜ್ಯುವೆಲ್ಸ್‌ನಿಂದ ಸೆ.8 ರಿಂದ 11ರ ವರೆಗೆ ಮಂಗಳೂರಿನ ಓಷಿಯನ್ ಪರ್ಲ್‌ನಲ್ಲಿ ಹೋಟೆಲ್‌ನಲ್ಲಿ ಆಯೋಜಿಸಲಾದ ಮುಳಿಯ ಚಿನ್ನಾಭರಣಗಳ ಹಾಗೂ ಕಿಸ್ನ ಡೈಮಂಡ್ ಆಭರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಎಕ್ಸಿಬಿಷನ್ ನಲ್ಲಿ ಇತ್ತೀಚೆಗೆ ಜಾಗತಿಕವಾಗಿ ಅನಾವರಣಗೊಳಿಸಲಾದ ಮತ್ತು ವಿನೂತನ ಶೈಲಿಯ ಆಭರಣಗಳನ್ನು ಸಂಗ್ರಹವಿದೆ. ಮಂಗಳೂರು ಶೈಲಿಯ ವಿವಿದ ವಿನ್ಯಾಸದ ಕರ ಕುಶಲದ ಕರಿಮಣಿಗಳು, ಕೊಡಗಿನ ಮತ್ತು ಕರಾವಳಿಯ ಪರಂಪರಾಗತ ಆಭರಣಗಳು ಇಲ್ಲಿ ಲಭ್ಯ. ಕಿಸ್ನ ಬ್ರ್ಯಾಂಡ್ ಡೈಮಂಡ್ ಆಭರಣಗಳು ಪ್ರದರ್ಶನದ ವಿಶೇಷವಾಗಿದೆ.
ಪ್ರದರ್ಶನದಲ್ಲಿ ಕೊಳ್ಳುವ ಡೈಮಂಡ್ ಆಭರಣಗಳಿಗೆ ಮಾನ್ಯತೆ ಪತ್ರ ಹಾಗೂ ಶೇ.೯೦ ಬೆಲೆಗೆ ಬೈ ಬಾಕ್ ಸೌಲವಿವಿದೆ. ೫ ಸಾವಿರದಿಂದ ೮ ಲಕ್ಷಕ್ಕೂ ಮೇಲಿನ ಡೈಮಂಡ್ ಆಭರಣಗಳು ಲಭ್ಯವಿದೆ. ಮುಳಿಯಯ ಆಭರಣ ಯುನಿಕ್ ಡಿಸೈನ್‌ಗಳಾಗಿದ್ದು, ಕೆಲಸಗಾರರ ಪರ್ಫೆಕ್ಷನ್ ಮತ್ತು ಗ್ರಾಹಕ ಸ್ನೇಹಿ ಮತ್ತು ಪಾರದರ್ಶಕ ವ್ಯವಹಾರವನ್ನೂ ನಂಬಿಕೆಯನ್ನು ಹೆಚ್ಚಿಸಿದೆ.
ನವನಾರಿಗಳಾದ ಡಾ| ಆಶಾ ಜ್ಯೋತಿ ರೈ, ಡಾ| ಮಾಲಿನಿ ಹೆಬ್ಬಾರ್, ದೀಪಾ ಕಾಮತ್, ಕೋಮಲ್ ಪ್ರಭು, ಶುಭಮಣಿ ಶೇಖರ್, ಮಮತಾ, ಚೇತನ, ಸುಮನ ಪೊಳಲಿ, ಪ್ರಜ್ಞಾ ಡಿ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು.
ಈ ವೇಳೆ ಮುಳಿಯ ಸಂಸ್ಥೆಯ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೇಶವ ಪ್ರಸಾದ ಮುಳಿಯ, ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ, ಪ್ರಬಂಧಕ ನಾಮದೇವ ಮಲ್ಯ ಹಾಗೂ ಕಿಸ್ನ ಡೈಮಂಡ್‌ನ ಪ್ರಬಂಧಕ ಪ್ರಕಾಶ ಸಿಂತ್ರೆ, ಸಂಘಟಕ ವೇಣುಶರ್ಮ, ಈಶ ಸುಲೋಚನ ಸೇರಿದಂತೆ ಮುಳಿಯ ಕುಟುಂಬಸ್ಥರು ಇದ್ದರು.