Advertisement

ನೂರಾರು ಲೋಡ್‌ ಮಣ್ಣು ಹೊತ್ತೂಯ್ದ ಉಪವಲಯಾರಣ್ಯಾಧಿಕಾರಿ

04:33 PM Sep 19, 2019 | Naveen |

ಎಂ.ನಾಗರಾಜಯ್ಯ
ಮುಳಬಾಗಿಲು:
ಅರಣ್ಯ ರಕ್ಷಕ ಸಿಬ್ಬಂದಿ ಮಾತನ್ನು ಲೆಕ್ಕಿಸದೇ ಸಾಮಾಜಿಕ ಅರಣ್ಯ ಇಲಾಖೆ ಉಪ ವಲ ಯಾರಣ್ಯಾಧಿಕಾರಿಯೊಬ್ಬರು ತಮ್ಮ ಇತರೇ ಉದ್ದೇಶಕ್ಕಾಗಿ ನೂರಾರು ಲೋಡ್‌ ಮಣ್ಣನ್ನು ಅಕ್ರಮ ವಾಗಿ ತೆಗೆದುಕೊಂಡು ಹೋಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಸಾಮಾಜಿಕ ಅರಣ್ಯ ಇಲಾಖೆ ಉಪ ವಲಯಾ ರಣ್ಯಾಧಿಕಾರಿ ವಿ.ಹರೀಶ್‌ ಸ್ಥಳೀಯರ ಆರೋಪಕ್ಕೆ ಗುರಿಯಾದವರು. ತಾಲೂಕಿನ ಕಾಶೀಪುರ ಬಿ. ಬ್ಲಾಕ್‌ನ ಕಾಯ್ದಿಟ್ಟ ಅರಣ್ಯದಲ್ಲಿ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೇ ನೂರಾರು ಲೋಡ್‌ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿರುವುದು ಕಾನೂನು ಬಾಹಿರ. ಅವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆ ಭಾಗದ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಪಾರ ಸಂಪತ್ತಿದೆ: ಮುಳಬಾಗಿಲು ತಾಲೂಕಿನಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ವ್ಯಾಪ್ತಿಯ ಅಗರ, ಗೋಕುಂಟೆ, ಹರಪನಾಯಕನಹಳ್ಳಿ, ಓಬಳೇಶ್ವರಬೆಟ್ಟ, ಕಲಿಕರಿ, ಕನ್ನಂಪಲ್ಲಿ, ಕಾಶೀಪುರ, ದೇವರಾಯಸಮುದ್ರ, ಕುರುಡುಮಲೆ, ಟಿ.ನಡುಂಪಲ್ಲಿ, ಘಟ್ಟುಗುಡಿ, ಕುನಿಬಂಡೆ, ಸುನಪಕುಂಟೆ ಸೇರಿದಂತೆ ಸುಮಾರು 8 ಸಾವಿರ ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶವಿದೆ. ಇಲ್ಲಿ, ಹಲಸು, ಜಂಬುನೇರಳೆ, ಹುಣಸೆ, ಹಿಪ್ಪೆ, ಗೋಣಿ, ಅತ್ತಿ, ಹೊಂಗೆ, ಮಹಾಘನಿ, ತೇಗ, ರಕ್ತ ಚಂದನ, ಶ್ರೀಗಂಧ ಸೇರಿದಂತೆ ಅಪಾರ ಸಸ್ಯ ಸಂಪತ್ತಿದೆ. ವನ್ಯ ಜೀವಿಗಳಾದ ನವಿಲು, ಜಿಂಕೆ, ಮೊಲ, ಕೋತಿ, ಹಂದಿ, ಕಾಡು ಬೆಕ್ಕು, ಬಾವಲಿ, ನರಿ, ಹಾವು, ವಿವಿಧ ಬಗೆಯ ಪಕ್ಷಿಗಳೂ ವಾಸವಾಗಿವೆ.

ಅರಣ್ಯ ಇಲಾಖೆ ಪ್ರತಿ ವರ್ಷ ಕೋಟ್ಯಂತರ ರೂ. ವೆಚ್ಚದಲ್ಲಿ ಸಸಿ ನೆಟ್ಟು ಪೋಷಿಸುತ್ತದೆ. ಈ ಸದರಿ ಕಾಯ್ದಿಟ್ಟ ಅರಣ್ಯವನ್ನು ಒಬ್ಬ ವಲಯಾರಣ್ಯಾಧಿಕಾರಿ, ಇಬ್ಬರು ಉಪ ವಲಯಾರಣ್ಯಾಧಿಕಾರಿ, ಮೂವರು ಅರಣ್ಯ ರಕ್ಷಕರು, ನಾಲ್ವರು ಅರಣ್ಯ ವೀಕ್ಷಕರು, 10-15 ಸೂಪರ್‌ನ್ಯೂಮರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅರಣ್ಯ ಸಂಪತ್ತನ್ನು ಉಳಿಸಬೇಕಾದ ಅಧಿಕಾ ರಿಯ ಕಾರ್ಯಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ದ್ದಾರೆ. ಕಾಯ್ದಿಟ್ಟ ಅರಣ್ಯದಲ್ಲಿ ಯಾರೇ ಆಗಲೀ ಅರಣ್ಯ ಉತ್ಪನ್ನಗಳನ್ನು ತೆಗೆಯಲು ಅವಕಾಶ ವಿಲ್ಲ. ಒಂದು ವೇಳೆ ಇಲಾಖೆ ಅಧಿಕಾರಿಗಳೇ ಅರಣ್ಯ ದಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳಬೇಕಾದರೂ ಮತ್ತು ಅರಣ್ಯ ಉತ್ಪನ್ನ ತೆಗೆಯಬೇಕಾದರೂ ಅನುಮತಿ ಕಡ್ಡಾಯ.

ನಿಯಮ ಪಾಲನೆ ಕಡ್ಡಾಯ: ಸದರಿ ಪ್ರಾದೇಶಿಕ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿನ ಅಗರ ವಿಭಾಗದಲ್ಲಿ ಸುಮಾರು 3500 ಎಕರೆ ಕಾದಿಟ್ಟ ಅರಣ್ಯವನ್ನು ಕೆಎಫ್ಡಿಸಿ ಶ್ರೀನಿವಾಸಪುರ ವಲಯಕ್ಕೆ ಮತ್ತು ಕಾಶೀಪುರ ಬಿ, ಬ್ಲಾಕ್‌ನ ಸುಮಾರು 185 ಎಕರೆ ಅರಣ್ಯವನ್ನು ಕೆಎಫ್ಡಿಸಿ ಮಾಲೂರು ವಲಯಕ್ಕೆ 1996ಕ್ಕೂ ಮುಂಚೆ ಹಲವಾರು ವರ್ಷ ಗುತ್ತಿಗೆ ನೀಡಲಾಗಿತ್ತು. ಸದರೀ ಅರಣ್ಯದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಅಗತ್ಯ ಸಸಿಗಳನ್ನು ಬೆಳೆಸಿ ಉತ್ಪನ್ನ ಬೆಳೆಸಿ ಯಾವುದೇ ಲೋಪದೋಷ ಉಂಟಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯೊಂದಿಗೆ ಅವಧಿ ಮುಗಿದ ನಂತರ ಸದರೀ ಅರಣ್ಯ ಪ್ರದೇಶವನ್ನು ಯತಾ ಸ್ಥಿತಿಯಂತೆ ಮೂಲ ವಾರಸುದಾರರಾದ ಪ್ರಾದೇಶಿಕ ಅರಣ್ಯ ಇಲಾ ಖೆಗೆ ವಾಪಸ್‌ ನೀಡಬೇಕು. ಇದರ ನಡುವೆಯೂ ಯಾರೇ ಆಗಲಿ ಅರಣ್ಯದಲ್ಲಿ ಯಾವುದೇ ಲೋಪ ದೋಷ ಉಂಟು ಮಾಡಿದರೆ ನಿಯಮಾನುಸಾರ ಪ್ರಕರಣ ದಾಖಲಿಸುವ ಅಧಿಕಾರವನ್ನೂ ವಲಯಾ ರಣ್ಯಾಧಿಕಾರಿಗೆ ನೀಡಲಾಗಿರುತ್ತದೆ.

Advertisement

ಆದರೆ, ಎರಡು ದಿನಗಳ ಹಿಂದೆ ಕಾಶೀಪುರ ಬಿ, ಬ್ಲಾಕ್‌ನ ಕಾಯ್ದಿಟ್ಟ ಅರಣ್ಯದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಉಪ ವಲಯಾರಣ್ಯಾಧಿಕಾರಿ ವಿ.ಹರೀಶ್‌ 2 ದಿನಗಳ ಹಿಂದೆ ಒಂದು ಜೆಸಿಬಿ ಮತ್ತು 14 ಟ್ರ್ಯಾಕ್ಟರ್‌ಗಳಿಂದ ನೂರಾರು ಲೋಡ್‌ ಮಣ್ಣನ್ನು ದಿನವಿಡೀ ಅಕ್ರಮವಾಗಿ ಸಾಗಣೆ ಮಾಡಿದ್ದಾರೆ. ಇಷ್ಟಾದರೂ ಪ್ರಾದೇಶಿಕ ಅರಣ್ಯ ಇಲಾಖೆ ವಲಯಾರಣ್ಯಾಧಿಕಾರಿ ರವಿಕೀರ್ತಿ ಮತ್ತು ಕೆಎಫ್ಡಿಸಿ ಉಪ ವಲಯಾರಣ್ಯಾಧಿ ಕಾರಿ ವಿಜಯಕುಮಾರ್‌ ಯಾರೊಬ್ಬರೂ ಈ ಕುರಿತು ಕ್ರಮ ತೆಗೆದುಕೊಳ್ಳದೇ ಇರುವುದು ಸಾರ್ವಜನಿಕರಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ.

ಪತ್ರ ಬರೆಯಲಾಗುವುದು
ಕಾಯ್ದಿಟ್ಟ ಅರಣ್ಯದಲ್ಲಿ ಯಾರೇ ಆಗಲೀ ಅರಣ್ಯ ಉತ್ಪನ್ನಗಳನ್ನು ಅಕ್ರಮವಾಗಿ ಸಾಗಣೆ ಮಾಡುವುದು ಕಾನೂನು ಬಾಹಿರ. ಈ ಕುರಿತು ಕ್ರಮ ಕೈಗೊಳ್ಳುವ ಅಧಿಕಾರ ಕೆಎಫ್ಡಿಸಿ ಉಪ ವಲಯಾರಣ್ಯಾಧಿಕಾರಿ ವಿಜಯಕುಮಾರ್‌ ಅವರಿಗೇ ಇತ್ತು. ಆದರೆ ಅವರು ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಜಮೀನಿನ ಮೂಲ ತಮ್ಮ ಇಲಾಖೆಗೆ ಸೇರಿರುವುದರಿಂದ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದೆಂದು ಪ್ರಾದೇಶಿಕ ಅರಣ್ಯ ಇಲಾಖೆ ವಲಯಾರಣ್ಯಾಧಿಕಾರಿ ರವಿಕೀರ್ತಿ ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next