Advertisement
ತಮ್ಮ ಪಕ್ಷವನ್ನು ಕಡೆಗಣಿಸುವ ವಿವಿಧ ರಾಜಕೀಯ ಪಕ್ಷಗಳಿಗೆ ಆಮ್ ಆದ್ಮಿ ಪಕ್ಷದ ಪ್ರಚಾರ ಮತ್ತು ಜನಸಂಪರ್ಕ ಸಮಿತಿ ಅಧ್ಯಕ್ಷ “ಮುಖ್ಯಮಂತ್ರಿ’ ಚಂದ್ರು ನೀಡುವ ಎಚ್ಚರಿಕೆ ಇದು.ಭ್ರಷ್ಟಾಚಾರ ಮತ್ತು ಕುಟುಂಬ ರಾಜಕಾರಣ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾ ಗಿದ್ದು, ಸಾಮಾಜಿಕ ವ್ಯವಸ್ಥೆಯಲ್ಲಿ ಇವೆರಡೂ ಮಾರಕ ಎಂದು ಮೂರೂ ಪಕ್ಷಗಳ ನಾಯಕರುಗಳೇ ಹೇಳುತ್ತಾರೆ. ಆದರೆ, ಅಂತಹವರಿಗೇ ಮಣೆಹಾಕುವ ಮೂಲಕ ಪರೋಕ್ಷವಾಗಿ ಅನ್ನು ಪೋಷಿಸುತ್ತಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿಗೆ ಬೇಕಿಲ್ಲ ಎನ್ನುವಂತೆ ಜನರಿಗೂ ಮನದಟ್ಟಾಗಿದ್ದು, ಇದರ ಸುಳಿವು ನಾವು ಮತ್ತು ನಮ್ಮ ಅಭ್ಯರ್ಥಿಗಳು ಮತದಾರರನ್ನು ಭೇಟಿಯಾದಾಗ ದೊರೆ ಯುವ ಸ್ಪಂದನೆಯಿಂದ ಸ್ಪಷ್ಟವಾಗುತ್ತಿದೆ. ಹಾಗಾಗಿ, ಚುನಾ ವಣೆ ಯಲ್ಲಿ ಹೆಚ್ಚು ಸೀಟುಗಳನ್ನು ನಾವು ಗೆಲ್ಲದಿರಬಹುದು. ಆದರೆ, 40-50 ಕಡೆಗಳಲ್ಲಿ ಪ್ರಬಲ ಪೈಪೋಟಿ ನೀಡ ಲಿದ್ದು, 20-25 ಸಾವಿರ ಮತಗಳನ್ನು ಗಳಿ ಸುವ ಮೂಲಕ ಉಳಿದ ಪಕ್ಷಗಳಿಗೆ ಎಚ್ಚರಿಕೆ ಗಂಟೆ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಚುನಾವಣೆ ಪ್ರಚಾರದ ಬ್ಯುಸಿಯಲ್ಲಿದ್ದ ಅವರು “ಉದಯವಾಣಿ’ಯೊಂದಿಗೆ ಕೆಲಹೊತ್ತು ಮಾತುಕತೆ ನಡೆಸಿದರು.
– ಉತ್ತರ ಭಾರತಕ್ಕೆ ಹೋಲಿಸಿದರೆ, ದಕ್ಷಿಣ ಭಾರತ ದಲ್ಲಿ ಅದರಲ್ಲೂ ಗ್ರಾಮೀಣ ಭಾಗಗಳಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿàವಾಲ್ ಅವರನ್ನು ನಾವು ತಲುಪಿಸಿದ್ದೇವೆಯೇ ಎಂಬುದರ ಬಗ್ಗೆ ನನಗೆ ಗುಮಾನಿ ಇದೆ. ಆದರೆ, ಅವರು ಮಾಡಿದ ಕೆಲಸಗಳು ರಾಜ್ಯದ ಜನರನ್ನು ತಲುಪಿವೆ. ಆಡಳಿತ ವ್ಯವಸ್ಥೆಯನ್ನು ಸ್ವತ್ಛಗೊಳಿಸಿದ “ಪೊರಕೆ’ ಜನರ ಮನಸ್ಸಿನಲ್ಲಿದೆ. ಇದರ ಜತೆಗೆ ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. – ರಾಜ್ಯದಲ್ಲಿರುವ ಮೂರೂ ಪ್ರಮುಖ ರಾಜಕೀಯ ಪಕ್ಷಗಳಿಗಿಂತ ಆಪ್ ಹೇಗೆ ಪರ್ಯಾಯ?
– ಈಗಾಗಲೇ ಮೂರೂ ಪಕ್ಷಗಳನ್ನು ಜನ ನೋಡಿ ದ್ದಾರೆ. ಅವುಗಳ ಕೆಸರೆರಚಾಟದಿಂದ ಬೆತ್ತಲಾಗಿವೆ. ಇನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂ ಗಾಣ ಸೇರಿದಂತೆ ನೆರೆ ರಾಜ್ಯಗಳು ಈಗಲೂ ರಾಷ್ಟ್ರೀಯ ಪಕ್ಷಗಳನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ. ಕರ್ನಾಟಕದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಒಂದಿಲ್ಲೊಂದು ಅವಧಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಬಹುಮತಕ್ಕೆ ಪ್ರಾದೇಶಿಕ ಪಕ್ಷವನ್ನೇ ಅವಲಂಬಿಸಿವೆ. ಆ ಪಾತ್ರವನ್ನು ಈ ಬಾರಿ ಆಪ್ ನಿರ್ವಹಿಸುವ ಎಲ್ಲ ಸಾಧ್ಯತೆಗಳೂ ಇವೆ.
Related Articles
– ಮಧ್ಯಮ ಮತ್ತು ಕೆಳಮಧ್ಯಮವರ್ಗಗಳಿಗೆ ಐದು ವರ್ಷಕ್ಕೊಮ್ಮೆ ದರ್ಶನ ನೀಡುವ ರಾಜಕಾರಣಿಗಳ ಫೇಸ್ ಬೇಕಿಲ್ಲ. ಕೈಗೆಟಕುವಂತೆ ಅಡುಗೆ ಅನಿಲ ಮತ್ತು ವಿದ್ಯುತ್, ಶಿಕ್ಷಣ, ಆರೋಗ್ಯ, ರೈತರಿಗೆ ತಮ್ಮ ಬೆಳೆಗಳಿಗೆ ಉತ್ತಮ ಬೆಲೆ, ಕಡಿಮೆ ಬೆಲೆಯಲ್ಲಿ ರಸಗೊಬ್ಬರ ಇತ್ಯಾದಿಗಳೇ ಅವರಿಗೆ ಪ್ರಮುಖ. ಈಗಾಗಲೇ ಇವುಗಳನ್ನು ಕಲ್ಪಿಸುವುದಾಗಿ ಗ್ಯಾರಂಟಿ ಕೊಟ್ಟಾಗಿದೆ. ಅವುಗಳನ್ನು ತಲುಪಿಸುವುದೊಂದೇ ಬಾಕಿ ಇದೆ.
Advertisement
– ನೀವು ಗ್ಯಾರಂಟಿ ಕೊಡ್ತೀರಾ, ಕಾಂಗ್ರೆಸ್ ಕೂಡ ಗ್ಯಾರಂಟಿ ಕೊಡ್ತಿದೆ. ಜನ ಯಾವುದನ್ನು ನಂಬಬೇಕು?– ನಮ್ಮ “ಗ್ಯಾರಂಟಿ ಕಾರ್ಡ್’ ಅನ್ನು ಕಾಂಗ್ರೆಸ್ ನಕಲು ಮಾಡಿದೆ. ಅಷ್ಟಕ್ಕೂ ನಾವು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಆಗಲೇ ಈ ಎಲ್ಲ ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಕಾಂಗ್ರೆಸ್ ತಾನು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈ ಗ್ಯಾರಂಟಿ ಕೊಡಬಹುದಿತ್ತಲ್ಲಾ? – ಎಲ್ಲಿಯೂ ಸಲ್ಲದವರು ಆಪ್‌ಗೆ ಸಲ್ಲುತ್ತಾರೆ ಎಂಬ ಆರೋಪವಿದೆಯಲ್ಲಾ?
– ಹಾಗೇನಿಲ್ಲ, ಎರಡೂ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ವಂಚಿತ 20- 22 ಜನ ಆಪ್ ಸೇರಲು ಸಿದ್ಧರಾಗಿದ್ದರು. ಆದರೆ, ನಮ್ಮಲ್ಲಿ ಹಣ- ಹೆಂಡ ವಿತರಣೆಗೆ ಅವಕಾಶ ಇಲ್ಲ. ಅಭ್ಯರ್ಥಿಗಳಿಗೂ ಪ್ರಚಾರಕ್ಕೆ ಹಣ ನೀಡುವುದಿಲ್ಲ. ಬೇಕಿದ್ದರೆ ಸೆಲೆಬ್ರಿಟಿಗಳು, ಅತಿಥಿಗಳನ್ನು ಕರೆಸುವ ವ್ಯವಸ್ಥೆ, ಪ್ರಚಾರ ಸಾಮಗ್ರಿಗಳನ್ನು ಮಾತ್ರ ನೀಡುತ್ತವೆ. ಹಾಗಾಗಿ, ಅವರು ಮನಸ್ಸು ಮಾಡಲಿಲ್ಲ. ಕೇಜ್ರಿವಾಲ್ ಕರ್ನಾಟಕ ಭೇಟಿ ಬಗ್ಗೆ ಹೇಳಿ…
– ಅರವಿಂದ್ ಕೇಜ್ರಿವಾಲ್ ಕರ್ನಾಟಕಕ್ಕೆ ಬರಲು ಉತ್ಸುಕರಾಗಿದ್ದಾರೆ. ಆದರೆ, ದೆಹಲಿಯಲ್ಲಿ ಅವರನ್ನು ಐಟಿ-ಇಡಿ ಮತ್ತಿತರ ತನಿಖಾ ಸಂಸ್ಥೆಗಳು ವಿವಿಧ ರೀತಿಯ ತಂತ್ರಗಾರಿಕೆಯಿಂದ ಕಟ್ಟಿಹಾಕುವ ಕೆಲಸ ಮಾಡುತ್ತಿದೆ. ಇದರಿಂದ ಸಾಧ್ಯವಾಗುತ್ತಿಲ್ಲ. ಆದಾಗ್ಯೂ ಚುನಾವಣೆ ಅವಧಿಯಲ್ಲಿ ಕನಿಷ್ಠ ಎರಡು-ಮೂರು ಬಾರಿ ಭೇಟಿ ನೀಡಲಿದ್ದಾರೆ. ಈ ವೇಳೆ ಬೆಂಗಳೂರಿಗೂ ಬರುತ್ತಾರೆ. – ವಿಜಯಕುಮಾರ ಚಂದರಗಿ