Advertisement

ಮುಕ್ತಿಧಾಮ ನವೀಕರಣಕ್ಕೆ 25 ಲಕ್ಕ ರೂ.ವೆಚ್ಚ 

04:26 PM Jun 04, 2023 | Team Udayavani |

ಸಕಲೇಶಪುರ: ಶಾಶ್ವತವಾಗಿ ಊರಿಗೆ ಏನಾದರು ಕೊಡುಗೆ ನೀಡಬೇಕೆಂಬ ನಿಟ್ಟಿನಲ್ಲಿ ಲಯನ್ಸ್‌ ಸಂಸ್ಥೆ ವತಿಯಿಂದ ಪಟ್ಟಣದ ಹಿಂದೂ ಮುಕ್ತಿಧಾಮವನ್ನು 25 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು ಕೆಲವೇ ದಿನಗಳಲ್ಲಿ ಗಣ್ಯರಿಂದ ಉದ್ಘಾಟನೆಗೊಳ್ಳಲಿದೆ.

Advertisement

ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಲಯನ್ಸ್‌ ಕ್ಲಬ್‌ ಇಂಟರ್‌ ನ್ಯಾಷನಲ್‌ ಜಿಲ್ಲೆ 317ಡಿ ವತಿಯಿಂದ ಸ್ವತ: ಲಯನ್ಸ್‌ ಸಂಸ್ಥೆ ಸದಸ್ಯರೇ ಹಣ ಹಾಕಿ ಸುಮಾರು 25 ಲಕ್ಷ ರೂ.ವೆಚ್ಚದಲ್ಲಿ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಪಟ್ಟಣದಲ್ಲಿರುವ ಹಿಂದೂ ರುದ್ರ ಭೂಮಿ ಅವ್ಯವಸ್ಥೆಯ ಅಗರವಾಗಿದನ್ನು ಕಂಡು ಲಯನ್ಸ್‌ 317 ಡಿ ರಾಜ್ಯಪಾಲ ಸಂಜೀತ್‌ ಶೆಟ್ಟಿ ಮಾರ್ಗದರ್ಶನದಲ್ಲಿ ರುದ್ರಭೂಮಿಯನ್ನು 25 ಲಕ್ಷ ರೂ.ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಈ ಹಿಂದಿದ್ದ ಸುಮಾರು 3 ರಿಂದ 4 ಕೊಠಡಿಗಳ ಮೇಲೆ ಶೀಟು ಹಾಕಿ ಸುಣ್ಣಬಣ್ಣ ಬಳಿಯಲಾಗಿದೆ. ಅಲ್ಲದೇ ಚಿತಾಗಾರದ ಸಮೀಪ ಒಡೆದು ಹೋಗಿದ್ದ ಶೀಟುಗಳ ಬದಲು ಹೊಸ ಶೀಟುಗಳನ್ನು ಅಳವಡಿಸಲಾಗಿದೆ. ಚಿತಾಗಾರದ ಆವರಣವನ್ನು ಕಾಂಕ್ರೀಟಿ ಕರಣ ಮಾಡಲಾಗುತ್ತಿದೆ. ರುದ್ರಭೂಮಿ ಮಧ್ಯಭಾಗದಲ್ಲಿ ಈಶ್ವರ ಹಾಗೂ ಸತ್ಯಹರಿಶ್ಚಂದ್ರ ಅವರ ಪ್ರತಿಮೆ ನಿರ್ಮಾ ಣ ಮಾಡಲಾಗಿದೆ. ಆವರಣದಲ್ಲಿ ಅಲ್ಲಲ್ಲಿ ಹುಲ್ಲು ಹಾಸು ಹಾಕಲು ಯೋಜಿಸಲಾಗಿದ್ದು ಜೊತೆಗೆ ಹೂವಿನ ಗಿಡಗಳನ್ನು ಸಹ ಹಾಕಲಾಗುತ್ತದೆ.

ಆರೇಳು ತಿಂಗಳಲ್ಲಿ ಕಾಮಗಾರಿ ಪೂರ್ಣ: ಈ ಹಿಂದೆ ರುದ್ರಭೂಮಿಗೆ ಅಂತ್ಯಕ್ರಿಯೆ ಮಾಡಲು ಬರುವವರಿಗೆ ಮೂಲ ಭೂತ ಸೌಕ ರ್ಯ ಕೊರತೆ ಕಾಡುತ್ತಿತ್ತು. ಆದರೆ, ಲಯನ್ಸ್‌ ಸಂಸ್ಥೆ ರುದ್ರ ಭೂಮಿಯನ್ನು ಉದ್ಯಾನವನದ ರೀತಿ ಮಾಡಿದೆ. ಕಳೆದ ವರ್ಷದ ನವೆಂಬರ್‌ ಅಂತ್ಯದಲ್ಲಿ ಆರಂಭಗೊಂಡ ಈ ಕಾಮಗಾರಿ ಇದೀಗ ಮುಕ್ತಾಯಗೊಂಡಿದೆ. ಕೇವಲ ಆರೇಳು ತಿಂಗಳ ಅವಧಿಯಲ್ಲಿ ಕೆಲಸ ಮುಕ್ತಾಯಗೊಳಿಸಲಾಗಿದೆ. ಲಯನ್ಸ್‌ ಸಂಸ್ಥೆ ರುದ್ರಭೂಮಿ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಆದರೆ ರುದ್ರಭೂಮಿ ನಿರ್ವಹಣೆ ಮಾಡಲು ಇರುವ ಸಮಿತಿ ಯಾವ ರೀತಿ ಇದನ್ನು ನಿರ್ವಹಣೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಲಯನ್ಸ್‌ ಸಂಸ್ಥೆ ಊರಿಗೆ ಏನಾದರು ಕೊಡುಗೆ ನೀಡಬೇಕೆಂಬ ನಿಟ್ಟಿನಲ್ಲಿ ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿಪಡಿಸಿರುವ ರೀತಿ ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

Advertisement

ಲಯನ್ಸ್‌ ಸಂಸ್ಥೆ 317 ಡಿ ವತಿಯಿಂದ ಸಕಲೇಶಪುರ ಪಟ್ಟಣದ ಹಿಂದೂ ರುದ್ರಭೂಮಿಯನ್ನು ಮಾದರಿ ರುದ್ರಭೂಮಿಯನ್ನಾಗಿ ಮಾಡಲಾಗುತ್ತಿದೆ. ಅಲ್ಲದೆ ಲಯನ್ಸ್‌ ಸಂಸ್ಥೆ ವತಿಯಿಂದ ಪಟ್ಟಣದ ಕ್ರಾಫ‌ರ್ಡ್‌ ಆಸ್ಪತ್ರೆಗೆ ಐಸಿಯು ಬೆಡ್‌ಗಳನ್ನು ಸಹ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೂಂದು ಡಯಾಲಿಸಿಸ್‌ ಘಟಕ ಹಾಗೂ ಮತ್ತಿತರ ಸಾಮಾಜಿಕ ಕಾರ್ಯಗಳನ್ನು ಸಂಸ್ಥೆ ವತಿಯಿಂದ ಮಾಡಲಾಗುತ್ತದೆ. – ಸಂಜೀತ್‌ ಶೆಟ್ಟಿ, ಲಯನ್ಸ್‌ 317ಡಿ ರಾಜ್ಯಪಾಲ

ಲಯನ್ಸ್‌ ಸಂಸ್ಥೆ  ಹಿಂದೂ ರುದ್ರಭೂಮಿಯನ್ನು ಅಭಿವೃದ್ಧಿ ಪಡಿಸಿರುವ ಕಾರ್ಯ ಶ್ಲಾಘನೀಯ. ಆದರೆ ರುದ್ರಭೂಮಿ ನಿರ್ವಹಣಾ ಸಮಿತಿಯವರು ಸರಿಯಾಗಿ ಇದನ್ನು ನೋಡಿಕೊಳ್ಳ ಬೇಕು. – ಕೌಶಿಕ್‌, ಭಜರಂಗದಳ ಮುಖಂಡ

– ಸುಧೀರ್‌ ಎಸ್‌.ಎಲ್‌

Advertisement

Udayavani is now on Telegram. Click here to join our channel and stay updated with the latest news.

Next