Advertisement

ರಜಪೂತ ಸಮಾಜದಿಂದ ಮುಕ್ತಿಧಾಮ ಸ್ವಚ್ಛತಾ ಕಾರ್ಯ

05:33 PM Jan 18, 2022 | Shwetha M |

ತಾಳಿಕೋಟೆ: ಪಟ್ಟಣದ ಡೋಣಿ ನದಿ ತೀರದ ಹತ್ತಿರವಿರುವ ಮುಕ್ತಿಧಾಮದ ಸ್ವತ್ಛತಾ ಕಾರ್ಯವನ್ನು ರಜಪೂತ ಸಮಾಜ ಬಾಂಧವರು ನಡೆಸಿದರು.

Advertisement

ಈ ವೇಳೆ ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್‌ ಮೂಲಿಮನಿ ಮಾತನಾಡಿ, ಮನುಷ್ಯನಿಗೆ ಹುಟ್ಟು ಆಕಸ್ಮಿಕವಾದರೂ ಸಾವು ನಿಶ್ಚಿತವಾದುದ್ದು. ಪ್ರತಿಯೊಬ್ಬರಿಗೂ ಮುಕ್ತಿ ಸಿಗುವುದು ಮುಕ್ತಿಧಾಮದಲ್ಲಿ ಆಗಿದೆ. ಈ ಮೊದಲು ಮುಕ್ತಿಧಾಮದಲ್ಲಿ ಕಸಕಡ್ಡಿ ಅಲ್ಲದೇ ಎಲ್ಲ ರೀತಿಯ ಗಲೀಜು ವಾತಾವರಣವಿತ್ತು. ಅದನ್ನು ಒಂದು ರೂಪಕ್ಕೆ ತರುವಲ್ಲಿ ಮುಕ್ತಿಧಾಮ ಸಮಿತಿ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದರು.

ಮುಕ್ತಿಧಾಮ ಸಮಿತಿಯಲ್ಲಿ ಸರ್ವ ಸಮಾಜದವರನ್ನು ಕೂಡಿಸಿಕೊಂಡು ಅಭಿವೃದ್ಧಿ ಮಾಡಲಾಗುತ್ತಿದೆ. ಸದರಿ ಮುಕ್ತಿಧಾಮದಲ್ಲಿ ಕುಳಿತುಕೊಳ್ಳಲು ಮತ್ತು ಸುಂದರವಾದ ಗಾರ್ಡನ್‌ ನಿರ್ಮಿಸಲಾಗಿದೆ. ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅದರಿ ಮುಕ್ತಿಧಾಮವನ್ನು ಪ್ರತಿ ರವಿವಾರ ಜನಿವಾರ ಸಮಾಜದ ವಿವಿಧ ಸಮಾಜದವರು ಮತ್ತು ಇನ್ನಿತರ ಪರಿಸರ ಪ್ರೇಮಿಗಳು ಕೂಡಿಕೊಂಡು ಸ್ವತ್ಛತೆ ಮಾಡುತ್ತ ಸಾಗಿರುವದು ಒಳ್ಳೆ ಬೆಳವಣಿಗೆ ಎಂದರು.

ಸ್ವಚ್ಛತಾ ಕಾರ್ಯದಲ್ಲಿ ರಜಪೂತ ಸಮಾಜದ ಗೋವಿಂದಸಿಂಗ್‌ ಮೂಲಿಮನಿ, ರತನ ಕೊಕಟನೂರ, ವಿಜಯಸಿಂಗ್‌ ಹಜೇರಿ, ಭರತ ಹಜೆರಿ, ಬಾಬು ಹಜೇರಿ, ವಿಠ್ಠಲ ಹಜೇರಿ, ರಾಜೇಂದ್ರ ವಿಜಾಪುರ, ದಿಲೀಪ್‌ ಹಜೆರಿ, ಅಮಿತ್‌ ಮನಗೂಳಿ, ರಮೇಶ ಗೌಡಗೆರಿ, ಕೆಸರಸಿಂಗ್‌ ಹಜೇರಿ, ಮಾನಸಿಂಗ್‌ ಕೊಕಟನೂರ, ಜೈಸಿಂಗ್‌ ಮೂಲಿಮನಿ, ಬಾಲಾಜಿ ವಿಜಾಪುರ, ಅರುಣ ದಡೇದ, ಗಂಗು, ಸೂರಜ್‌, ರಾಜು, ನವೀನ, ನಿಖೀಲ, ಆಕಾಶ, ಸುನೀಲ, ಅನಿಲ, ಪರಶು, ದೀಪಕ್‌, ಮುಕ್ತಿಧಾಮ ಸಮಿತಿಯ ವಾಸುದೇವ ಹೆಬಸೂರ, ರಾಜು ಹಂಚಾಟೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next