Advertisement

ಮುಖ್ಯಪೇದೆ, ಎಎಸ್‌ಐಗೆ ಚಾರ್ಜ್‌ಶೀಟ್‌ ಹೊಣೆ

12:25 PM Apr 11, 2017 | Team Udayavani |

ಬೆಂಗಳೂರು: ರಾಜ್ಯ ಪೊಲೀಸ್‌ ಮಹಾನಿರ್ದೇಶಕ ರೂಪಕ್‌ ಕುಮಾರ್‌ ದತ್ತಾ ಅವರು ಸೋಮವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು, ಎಎಸ್‌ಐ ಹಾಗೂ ಹೆಡ್‌ಕಾನ್‌ಸ್ಟೆಬಲ್‌ಗ‌ಳಿಗೂ ಎಫ್ಐಆರ್‌ ದಾಖಲಿಸುವದರ ಜತೆಗೆ ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸುವ ಹೊಣೆ ನೀಡಿದ್ದಾರೆ. 

Advertisement

ಈ ಹಿಂದೆ ಸಬ್‌ಇನ್ಸ್‌ಪೆಕ್ಟರ್‌ ಮತ್ತು ಅವರಿಗೂ ಮೇಲ್ಪಟ್ಟ ಅಧಿಕಾರಿಗಳಿಗೆ ಮಾತ್ರ ಚಾರ್ಜ್‌ಶೀಟ್‌ ಸಲ್ಲಿಸುವ ಅಧಿಕಾರವಿತ್ತು. ಸದ್ಯದ ಆದೇಶದ ಪ್ರಕಾರ ಠಾಣೆಯ ಎಎಸ್‌ಐ ಹಾಗೂ ಹೆಡ್‌ಕಾನ್‌ಸ್ಟೆಬಲ್‌ ಕೂಡ ಸಾಧಾರಣ ರಸ್ತೆ ಅಪಘಾತ ಹಾಗೂ ಸಣ್ಣ-ಪುಟ್ಟ ಹಲ್ಲೆ ಪ್ರಕರಣಗಳ ಪ್ರಾಥಮಿಕ ತನಿಖಾ ವರದಿ ಸಿದ್ಧಪಡಿಸಿ, ಚಾರ್ಜ್‌ಶೀಟ್‌ ಸಲ್ಲಿಸಬಹುದು. 

ಹಿರಿಯ ಅಧಿಕಾರಿಗಳ ಮೇಲೆನ ಹೊರೆ ಇಳಿಕೆ: ರಾಜ್ಯ ಪೊಲೀಸ್‌ ಇಲಾಖೆಯ ಇತಿಹಾಸದಲ್ಲೇ ಇದೊಂದು ಮಹತ್ತರ ನಿರ್ಧಾರಾಗಿದ್ದು, ಈ ಕ್ರಮದಿಂದ ಹಿರಿಯ ಅಧಿಕಾರಿಗಳ ಮೇಲಿನ ಕೆಲಸ­ದೊತ್ತಡ ಕಡಿಮೆಯಾ­ಗಲಿದೆ. ಪೊಲೀಸ್‌ ಇಲಾಖೆಯಲ್ಲಿರುವ ಶೇ.90ರಷ್ಟು ಮಂದಿ ಎಎಸ್‌ಐ ಮತ್ತು ಹೆಡ್‌ಕಾನ್‌ಸ್ಟೆಬಲ್‌ಗ‌ಳು ಪದವಿಧರರಾ­ಗಿದ್ದು, ಅವರಲ್ಲಿರುವ ಜ್ಞಾನವನ್ನು ಈ ಮೂಲಕ ಬಳಸಿಕೊಳ್ಳಲು ಸಾಧ್ಯವಿದೆ.

ಜತೆಗೆ ಹಿರಿಯ ಅಧಿಕಾರಿಗಳ ನಡುವಿನ ಅಧಿಕಾರದ ಅಂತರ ಕಡಿಮೆ ಮಾಡಲು ಮತ್ತು ಪ್ರಕರಣಗಳನ್ನು ನಿರ್ವಹಿಸುವ ಅನುಭವವನ್ನು ಹೆಚ್ಚಿಸುವ ಸಲುವಾಗಿ ಈ ನಿರ್ಧಾರಕೈಗೊಳ್ಳಲಾಗಿದೆ. ಈ ರೀತಿ ಸಿಬ್ಬಂದಿಯಲ್ಲಿ ಉತ್ತೇಜನ ನೀಡುವುದ­ರಿಂದ ಮುಂದಿನ ದಿನಗಳಲ್ಲಿ ಇಲಾಖೆ­ಯಲ್ಲಿ ದಕ್ಷ ಹಾಗೂ ಉತ್ತಮ ಅಧಿಕಾರಿ­ಗಳ ಸೇವೆ ಇಲಾಖೆಗೆ ದೊರೆಯಲಿದೆ ಎಂದು ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತಾ ಉದಯವಾಣಿಗೆ ತಿಳಿಸಿದರು.

ಯ್ನಾವ್ಯಾವ ಪ್ರಕರಣಗಳು?: ಸಾಧಾರಣ ರಸ್ತೆ ಅಪಘಾತ(ಐಪಿಸಿ 279, 377). ಹಲ್ಲೆ, ದರೋಡೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ಅವರೇ ಚಾರ್ಜ್‌ಶೀಟ್‌ ಸಲ್ಲಿಸಬಹುದಾಗಿದೆ. ಇದಕ್ಕೆ ಹಿರಿಯ ಅಧಿಕಾರಿಗಳ ಮಾಗದರ್ಶನವು ಇರಲಿದೆ. 

Advertisement

ಸಿಬ್ಬಂದಿಯ ಪ್ರೋತ್ಸಾಹಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳ ಮಾರ್ಗ­ದರ್ಶ­ನದಲ್ಲಿ ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್‌ಗ‌ಳು ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿ­ಸಬಹುದು. ಇದರಿಂದ ಭವಿಷ್ಯ­ದಲ್ಲಿ ಇಲಾಖೆ ಬಹಳ ಉಪ­ಯೋಗವಾಗಲಿದೆ.
-ಆರ್‌.ಕೆ.ದತ್ತಾ, ಪೊಲೀಸ್‌ ಮಹಾನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next