ಬೆಂಗಳೂರು: ಭಾರತ “ಎ’ ಮತ್ತು ನ್ಯೂಜಿಲ್ಯಾಂಡ್ “ಎ’ ನಡುವೆ ಗುರುವಾರ ಬೆಂಗಳೂರಿನಲ್ಲಿ ಮೊದಲ್ಗೊಂಡ ಮೊದಲ ಅನಧಿಕೃತ ಚತುರ್ದಿನ ಟೆಸ್ಟ್ ಪಂದ್ಯಕ್ಕೆ ಮಳೆ ಹಾಗೂ ಮಂದಬೆಳಕಿನಿಂದ ಅಡಚಣೆಯಾಗಿದೆ. ದಿನದಾಟ 61 ಓವರ್‌ಗಳಿಗೆ ಕೊನೆಗೊಂಡಾಗ ಕಿವೀಸ್ 5 ವಿಕೆಟ್ ನಷ್ಟಕ್ಕೆ 156 ರನ್ ಮಾಡಿತ್ತು.
ಬಂಗಾಲದ ಸೀಮರ್ ಮುಕೇಶ್ ಕುಮಾರ್ 3 ವಿಕೆಟ್ ಕಿತ್ತು ಗಮನ ಸೆಳೆದರು. ಉಳಿದೆರಡು ವಿಕೆಟ್ ಯಶ್ ದಯಾಳ್ ಮತ್ತು ಅರ್ಜಾನ್ ನಗ್ವಸ್ವಾಲಾ ಪಾಲಾಯಿತು.
ವನ್‌ಡೌನ್ ಬ್ಯಾಟರ್ ಜೋ ಕಾರ್ಟರ್ ಅಜೇಯ 73 ರನ್ ಬಾರಿಸಿ ನ್ಯೂಜಿಲ್ಯಾಂಡ್ ತಂಡದ ನೆರವಿಗೆ ನಿಂತಿದ್ದಾರೆ. ನಾಯಕ ರಾಬರ್ಟ್ ಓ’ಡೊನೆಲ್ 24 ರನ್ ಮಾಡಿದರು.
ಪ್ರಸಿದ್ಧ್ ಗಾಯಾಳು :
ಭಾರತ “ಎ’ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಬೆನ್ನುನೋವಿನ ಸಮಸ್ಯೆಯಿಂದಾಗಿ ಈ ಸರಣಿಯಿಂದ ಬೇರ್ಪಟ್ಟರು. ಮೊದಲ ಪಂದ್ಯದಲ್ಲಿ ಅವರು ಕಾಣಿಸಿಕೊಂಡಿರಲಿಲ್ಲ.