ಮುಂಬೈ: ಮುಂದಿನ ಐದು ವರ್ಷಗಳ ಅವಧಿಯ ಐಪಿಎಲ್ ಕೂಟದ ನೇರಪ್ರಸಾರದ ಹಕ್ಕು ಪಡೆಯಲು ಮುಂಬೈನಲ್ಲಿ ಹರಾಜು ನಡೆಸಲಾಗಿತ್ತು. ಐಪಿಎಲ್ ಕೂಟದ ಡಿಜಿಟಲ್ ಪ್ರಸಾರ ರೈಟ್ಸ್ ನ್ನು ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಒಡೆತನದ ವಯಕಾಮ್ಸ್ 18 ಪಡೆದುಕೊಂಡಿದೆ ಎಂದು ವರದಿಯಾಗಿದೆ.
ವಾಲ್ಟ್ ಡಿಸ್ನಿ, ಸೋನಿ ಗ್ರೂಪ್ ಕಾರ್ಪೊರೇಷನ್ ಸೇರಿ ದೈತ್ಯ ಕಂಪನಿಗಳನ್ನು ಮೀರಿಸಿದ ವಯಕಾಮ್ಸ್ 18 ಸಂಸ್ಥೆ ಹರಾಜು ಗೆದ್ದುಕೊಂಡಿದೆ ಎಂದು ಮೂಲಗಳು ತಿಳಿಸಿದೆ. ಆದರೆ ಬಿಸಿಸಿಐನಿಂದ ಇದುವರೆಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ವಿಶ್ವದ ಶ್ರೀಮಂತ ಕ್ರಿಕೆಟ್ ಪಂದ್ಯಾವಳಿಯ ಆನ್‌ಲೈನ್ ಹಕ್ಕುಗಳನ್ನು ಪ್ಯಾರಾಮೌಂಟ್ ಗ್ಲೋಬಲ್ ಮತ್ತು ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಡುವಿನ ಜಂಟಿ ಉದ್ಯಮವಾದ ವಯಕಾಮ್ಸ್ 18 ಮೀಡಿಯಾ ಪ್ರೈವೇಟ್‌ಗೆ ನೀಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ:ಜುಲೈ 8ಕ್ಕೆ ಪೃಥ್ವಿ ಅಂಬಾರ್ ನಟನೆಯ ‘ಶುಗರ್‌ಲೆಸ್’ ರಿಲೀಸ್
20,500 ಕೋಟಿ ರೂ.ಗಳಿಗೆ ಪ್ರಸಾರದ ಹಕ್ಕುಗಳನ್ನು ಬಿಡ್ ಮಾಡಲಾಗಿದೆ. ಇಲ್ಲಿ ಪ್ರತಿ ಪಂದ್ಯದಿಂದ ಬಿಸಿಸಿಐ 50 ಕೋಟಿ ರೂ. ಆದಾಯ ಗಳಿಸಲಿದೆ. ಈ ಹಕ್ಕುಗಳನ್ನು ವಯಕಾಮ್ಸ್ 18, ಖರೀದಿಸಿದೆ.
ಹಾಗೆಯೇ, ಪ್ಯಾಕೇಜ್ ಸಿ ಮೇಲೆಯೂ ವಯಕಾಮ್18 ಕಣ್ಣಿಟ್ಟಿದೆ ಎಂದು ಹೇಳಲಾಗಿದ್ದು, ಯಾವುದೇ ಕಾರಣಕ್ಕೂ ಜಾಹೀರಾತು ಮೂಲಗಳನ್ನು ಸೋರಿಕೆಯಾಗಲು ಬಿಡದಿರಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.