Advertisement

ಮುಕೇಶ್‌ ಅಂಬಾನಿ 4.3 ಲಕ್ಷ ಕೋಟಿ ರೂ.ಒಡೆಯ

10:06 AM Dec 25, 2019 | Team Udayavani |

ನವದೆಹಲಿ: ಏಷ್ಯಾದ ಅತಿ ಶ್ರೀಮಂತ ಉದ್ಯಮಿಯಾಗಿರುವ ಮುಕೇಶ್‌ ಅಂಬಾನಿ ಈ ವರ್ಷ 1.6 ಲಕ್ಷ ಕೋಟಿ ರೂ. (17 ಬಿಲಿಯನ್‌ ಡಾಲರ್‌) ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟಾರೆ 4.3 ಲಕ್ಷ ಕೋಟಿ ರೂ.ಒಡೆಯರಾಗಿದ್ದಾರೆ. ಆಲಿಬಾಬಾ ಗ್ರೂಫ್ ಸಂಸ್ಥಾಪಕ ಜಾಕ್‌ ಮಾ ಅವರು 11.3 ಬಿಲಿಯನ್‌ ಡಾಲರ್‌ ಹಾಗೂ ಜೆಫ್ ಬೆಜೋ ಅವರು 13.1 ಬಿಲಿಯನ್‌ ಡಾಲರ್‌ ಆದಾಯ ಹೆಚ್ಚಿಸಿಕೊಂಡಿದ್ದಾರೆ ಎಂದು ಬ್ಲೂಮ್‌ಬರ್ಗ್‌ನ ಬಿಲೇನಿಯರ್‌ ಇಂಡೆಕ್ಸ್‌ ತಿಳಿಸಿದೆ.

Advertisement

ಮುಕೇಶ್‌ ಅಂಬಾನಿ ಅವರ ರಿಲಯನ್ಸ್‌ ಇಂಡಸ್ಟ್ರಿ ಲಿಮಿಟೆನ್‌ ಷೇರು ಈ ವರ್ಷ ಶೇ.38 ರಷ್ಟು ವೃದ್ಧಿಯಾಗಿದೆ. ರಿಲಯನ್ಸ್‌ ಇಂಡಸ್ಟ್ರಿಯು ತೈಲ, ಗ್ಯಾಸ್‌ ಅಲ್ಲದೇ ಟೆಲಿಕಾಂ, ರಿಟೈಲ್‌ ಕ್ಷೇತ್ರದಲ್ಲೂ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದೆ. ಅತಿ ಶೀಘ್ರದಲ್ಲೇ ಇ-ಕಾಮರ್ಸ್‌ನಲ್ಲೂ ದಾಪುಗಾಲು ಇಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next