ನವದೆಹಲಿ: ಇನ್ನು ಮುಂದೆ ಇಶಾ ಅಂಬಾನಿ ರಿಲಯನ್ಸ್ ರಿಟೇಲ್ ಕಂಪನಿಯ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಕೇಶ್ ಅಂಬಾನಿ ಸೋಮವಾರ (ಆಗಸ್ಟ್ 29) ಘೋಷಿಸಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಾಜಕೀಯದಲ್ಲಿ ಇರದಿದ್ರೆ…ಬಿಜೆಪಿಯವರ ನಾಲಿಗೆ ಸೀಳುತ್ತಿದ್ದೆ: ಮಮತಾ ಬ್ಯಾನರ್ಜಿ
ಜೂನ್ ತಿಂಗಳಿನಲ್ಲಿ ರಿಲಯನ್ಸ್ ಜಿಯೋದ ಟೆಲಿಕಾಂ ಸಂಸ್ಥೆಗೆ ಆಕಾಶ್ ಅಂಬಾನಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ ಎಂದು ಮೂಲಗಳು ವಿವರಿಸಿವೆ.
ರಿಲಯನ್ಸ್ ಇಂಡಸ್ಟ್ರೀಸ್ ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ರಿಟೇಲ್ ಗೆ ಮುಖ್ಯಸ್ಥೆ ಎಂದು ಘೋಷಣೆಯಾದ ನಂತರ ಮಾತನಾಡಿದ ಇಶಾ ಅಂಬಾನಿ, ವಾಟ್ಸಪ್ ಬಳಸಿಕೊಂಡು ಆನ್ ಲೈನ್ ನಲ್ಲಿ ದಿನಬಳಕೆ ವಸ್ತುಗಳನ್ನು ಆರ್ಡರ್ ಮಾಡುವ ಬಗ್ಗೆ ಮತ್ತು ಪಾವತಿ ಮಾಡುವುದು ಹೇಗೆ ಎಂಬ ಬಗ್ಗೆ ಮಾಹಿತಿ ನೀಡಿದ್ದರು.
ಅಷ್ಟೇ ಅಲ್ಲ ರಿಲಯನ್ಸ್ ರಿಟೇಲ್ ಶೀಘ್ರದಲ್ಲೇ ಎಫ್ ಎಂಸಿಜಿ (ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ವ್ಯವಹಾರವನ್ನು ಪ್ರಾರಂಭಿಸಲಿದೆ ಎಂದು ಈ ಸಂದರ್ಭದಲ್ಲಿ ಇಶಾ ಅಂಬಾನಿ ಹೇಳಿದರು.
ಉತ್ತಮ ಗುಣಮಟ್ಟದ ವಸ್ತುಗಳನ್ನು ಕೈಗೆಟಕುವ ಬೆಲೆಯಲ್ಲಿ ನೀಡುವ ಮೂಲಕ ಪ್ರತಿಯೊಬ್ಬ ಭಾರತೀಯರ ದಿನಬಳಕೆ ವಸ್ತುಗಳ ಅಗತ್ಯತೆಗಳ ಸಮಸ್ಯೆ ನಿವಾರಿಸುವುದು ನಮ್ಮ ಮುಖ್ಯ ಆದ್ಯತೆಯಾಗಿದೆ ಎಂದು ಇಶಾ ತಿಳಿಸಿದ್ದಾರೆ.