Advertisement

ಮುಜುಂಗಾವು: ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

05:51 PM Feb 26, 2017 | Harsha Rao |

ಮುಜುಂಗಾವು: ಕಲೆ,ಸಾಹಿತ್ಯ, ಸಾಂಸ್ಕೃತಿಕ ರಂಗಗಳನ್ನು ಅಭಿವೃದ್ಧಿಗೊಳಿಸಿ ತನ್ಮೂಲಕ ಹಿರಿಯ ಕಿರಿಯರೆನ್ನದೆ ಅವರೊಳಗೆ ಸುಪ್ತವಾಗಿರುವ ಪ್ರತಿಭೆ ಅನಾವರಣಗೊಳಿಸುವ ಉದ್ದೇಶದಿಂದ ಮುಜುಂಗಾವು ಶ್ರೀ ಪಾರ್ಥ ಸಾರಥಿ ಶ್ರೀ ಕೃಷ್ಣ ದೇವಾಲಯದ ವಠಾರದಲ್ಲಿ ಎಸ್‌.ಎಸ್‌.ಎಸ್‌. ಗ್ರೂಪ್‌ (ಸತ್ಯ, ಸನ್ಮಾನ್ಯ, ಶ್ರೇಯಸ್‌ ಗ್ರೂಪ್‌) ಐ.ಸಿ. ರೋಡ್‌, ನಾಯ್ಕಪು ಎಂಬ ಹೆಸರಿನ ನೂತನ ಸಾಂಸ್ಕೃತಿಕ ವೇದಿಕೆ ಉದ್ಘಾಟನೆಗೊಂಡಿತು.

Advertisement

ಶ್ರೀ ಕ್ಷೇತ್ರದ ಮುಂಭಾಗದಲ್ಲಿ ಜರಗಿದ ಸಭೆಯಲ್ಲಿ ಕರ್ನಾಟಕ ಜಾನಪದ ಪರಿಷತ್‌ ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಉಪಾಧ್ಯಕ್ಷರಾದ ಬಿ. ಬಾಲಕೃಷ್ಣ ಅಗ್ಗಿತ್ತಾಯ ಅವರು ಉದ್ಘಾಟಿಸಿದರು. 

ನಿವೃತ್ತ ಅಧ್ಯಾಪಕ ಬಾಲಕೃಷ್ಣ ಶರ್ಮ ನಾಯ್ಕಪು ಅಧ್ಯಕ್ಷತೆ ವಹಿಸಿದರು. ಕುಂಬಳೆ ಪೊಲೀಸ್‌ ಸಬ್‌
ಇನ್‌ಸ್ಪೆಕ್ಟರ್‌ ಸೋಮಯ್ಯ, ಕರ್ನಾಟಕ ಜಾನಪದ ಪರಿಷತ್‌ ಕೇರಳ ಗಡಿನಾಡ ಘಟಕ ಅಧ್ಯಕ್ಷ ಕೇಶವ ಪ್ರಸಾದ್‌ ನಾಣಿತ್ತಿಲು, ಸಾಮಾಜಿಕ ಕಾರ್ಯಕರ್ತರಾದ ಎನ್‌. ನಾರಾಯಣ, ಗೋಪಾಲ ಪೆರ್ಣೆ ಮೊದಲಾದವರು ಶುಭಹಾರೈಸಿದರು.

ವಿವಿಧ ಅಂಗನವಾಡಿಗಳಲ್ಲಿ ಶಿಕ್ಷಕಿಯಾಗಿ ಹಾಗು ಸಹಾಯಕರಾಗಿ ದುಡಿಯುತ್ತಿರುವವರ ಸೇವೆಯನ್ನು ಪರಿಗಣಿಸಿ ಶಾಲು ಹೊದೆಸಿ ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಸದಸ್ಯ ಸತ್ಯಶಂಕರ ಭಟ್‌, ಕುಂಬಳೆ ಗ್ರಾಮ ಪಂಚಾಯತ್‌ ಸದಸ್ಯರಾದ ಹರೀಶ್‌ ಗಟ್ಟಿ, ಮುರಳೀಧರ ಯಾದವ್‌, ಸಂಘಟನೆಯ ಸ್ಥಾಪಕಾಧ್ಯಕ್ಷ ಮಜಲು ಗೋಪಾಲಕೃಷ್ಣ ಭಟ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜಯಲಕ್ಷ್ಮೀ ಜಿ.ಕೆ. ಭಟ್‌ ಮಜಲು ಸ್ವಾಗತಿಸಿದರು. ಶಂಕರ ಪ್ರಸಾದ್‌ ಮಜಲು ವಂದಿಸಿದರು. ಅಪ್ಪಣ್ಣ ಪೆರ್ಣೆ ಕಾರ್ಯಕ್ರಮ ನಿರೂಪಿಸಿದರು. ಚಿಕ್ಕಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರದವು.

Advertisement

Udayavani is now on Telegram. Click here to join our channel and stay updated with the latest news.

Next