ನವದೆಹಲಿ: ನೂತನ ಕಾನೂನು ಸಚಿವ ಕಾರ್ತಿಕೇಯಾ ಸಿಂಗ್ ವಿರುದ್ಧ ವಾರಂಟ್ ಜಾರಿಯಾಗಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ (ಆಗಸ್ಟ್ 17) ತಿಳಿಸಿದ್ದಾರೆ.
ಇದನ್ನೂ ಓದಿ:ಹೈಕಮಾಂಡ್ ತಂತ್ರ: ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ BSYಗೆ ಸ್ಥಾನ
ವಾರಂಟ್ ಜಾರಿಯಾದ ಬಗ್ಗೆ ನನಗೇನೂ ಗೊತ್ತಿಲ್ಲ, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡದ್ದಾರೆ.
ಕಾರ್ತಿಕೇಯಾ ವಿರುದ್ಧ ವಾರಂಟ್ ಜಾರಿಯಾಗಿದ್ದು, ಕೂಡಲೇ ಸಂಪುಟದಿಂದ ಸಿಂಗ್ ಅವರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಹಿರಿಯ ಮುಖಂಡ ಸುಶೀಲ್ ಕುಮಾರ್ ಮೋದಿ ಆಗ್ರಹಿಸಿದ್ದರು. ಒಂದು ವೇಳೆ ನಿತೀಶ್ ಕುಮಾರ್ ಅವರು ಬಿಹಾರವನ್ನು ಲಾಲು ಪ್ರಸಾದ್ ಯಾದವ್ ಕಾಲಕ್ಕೆ ಕೊಂಡೊಯ್ಯಲು ಬಯಸಿರಬೇಕು ಎಂದು ಸುಶೀಲ್ ಕುಮಾರ್ ವ್ಯಂಗ್ಯವಾಡಿರುವುದಾಗಿ ವರದಿ ಹೇಳಿದೆ.
ಒಂದು ವೇಳೆ ಕಾರ್ತಿಕೆಯಾ ವಿರುದ್ಧ ವಾರಂಟ್ ಜಾರಿಯಾಗಿದ್ದರೆ, ಕೂಡಲೇ ಕಾರ್ತಿಕೆಯಾ ಪೊಲೀಸರಿಗೆ ಶರಣಾಗಲಿ. ನಿತೀಶ್ ಕುಮಾರ್ ಕೂಡಲೇ ಕಾನೂನು ಸಚಿವ ಸ್ಥಾನದಿಂದ ಕಾರ್ತಿಕೆಯಾನನ್ನು ವಜಾಗೊಳಿಸಲಿ ಎಂದು ಸುಶೀಲ್ ಮೋದಿ ಒತ್ತಾಯಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.