ಮಸ್ಕಿ: ಮೊಹರಂ ಹಬ್ಬದ ನಿಮಿತ್ತ ಮಸ್ಕಿ ಪೊಲೀಸ್ ಠಾಣೆಯಲ್ಲಿ ಜು. 21ರ ಶುಕ್ರವಾರ ಶಾಂತಿ ಸಭೆ ನಡೆಯಿತು.
ಮುಖಂಡ ಬಸನಗೌಡ ಪೊ.ಪಾ. ಮಾತನಾಡಿ, ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತ. ಹಿಂದೂ-ಮುಸ್ಲೀಂ ಸೇರಿ ಎಲ್ಲ ಜನಾಂಗದವರು ಒಟ್ಟುಗೂಡಿ ಆಚರಿಸಿಕೊಂಡ ಬಂದ ಹಿನ್ನೆಲೆ ಇದೆ ಎಂದರು.
ಆದರೆ ಇತ್ತೀಚೆಗೆ ಕೋಮು-ಭಾವನೆ ಕೆರಳಿಸಿ ದೈವಿಕ ಸಂಪ್ರದಾಯಕ್ಕೆ ಚ್ಯುತಿ ತರುವ ಕೆಲಸಗಳು ಆಗುತ್ತಿವೆ. ಇಂತಹ ಅಹಿತಕರ ಘಟನೆಗೆ ಯಾರು ಅವಕಾಶ ಕೊಡಬಾರದು. ಅಲಾಯಿ ಆಡುವ ಸಂದರ್ಭದಲ್ಲಿ ಏನೇ ಸಣ್ಣ-ಪುಟ್ಟ ವಾಗ್ವಾದ ನಡೆದರೂ ಹಿರಿಯರು ಅದನ್ನು ಅಲ್ಲಿಯೇ ಸರಿಪಡಿಸಬೇಕು ಎಂದು ಹೇಳಿದರು.
ಸಿಪಿಐ ಸಂಜೀವ್ ಕುಮಾರ ಬಳಿಗಾರ ಮಾತನಾಡಿ, ಹಬ್ಬದ ನೆಪದಲ್ಲಿ ಯಾರೂ ಶಾಂತಿ ಕದಡುವ ಕೆಲಸ ಮಾಡಬಾರದು. ಕೋಮು ಪ್ರಚೋದನೆ ಸೇರಿ ಶಾಂತಿಯುತ ಹಬ್ಬಕ್ಕೆ ಏನಾದರೂ ಧಕ್ಕೆ ತಂದರೆ ಅಂತಹ ವ್ಯಕ್ತಿಗಳ ವಿರುದ್ದ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಮೊಬೈಲ್ ಸೇರಿ ಸಮಾಜಿಕ ಜಾಲತಾಣಗಳು ಪ್ರಚೋದನೆಗೆ ಕಾರವಾಗುತ್ತವೆ. ಅಂತಹವುಗಳಿಗೆ ಕಿವಿಗೊಡದೇ ಮಾದರಿಯಾಗಿ ಹಬ್ಬ ಆಚರಿಸಬೇಕು ಎಂದು ಹೇಳಿದರು.
ಮುಸ್ಲಿಂ ಸಮಾಜದ ಖಾಜಿ ಜಿಲಾನಿ, ಮುಖಂಡ ಅಬ್ದುಲ್ ಗನಿಸಾಬ, ಅಶೋಕ ಮುರಾರಿ, ಪಿಎಸ್ಐ ಸಿದ್ರಾಮ ಬಿದರಾಣಿ ಮಾತನಾಡಿದರು.