Advertisement
ನೀರಿನಿಂದ ಪ್ರಜ್ವಲಿಸುವ ದೀಪ: ಗ್ರಾಮದ ಸಂಗಮೇಶ್ವರ ದೇವಸ್ಥಾನದ ಬಾವಿಯಲ್ಲಿನ ನೀರು ಬಿಂದಿಗೆಯಲ್ಲಿ ತಂದು ದರ್ಗಾದಲ್ಲಿನ ದೀಪಗಳಿಗೆ ನೀರು ಹಾಕಿ ದೀಪ ಬೆಳಗಿಸುತ್ತಾರೆ. ದೇಸಾಯಿಯವರ ಮನೆಯಿಂದ ಗಂಧ ತಂದು ದೇವರಿಗೆ ಅರ್ಪಣೆ ಮಾಡಿ ಪ್ರಾರಂಭವಾಗುವ ಈ ಹಬ್ಬದಲ್ಲಿ ಸಾಕಷ್ಟು ವಿಶೇಷ ಆಚರಣೆಗಳು ನಡೆಯುತ್ತವೆ.
Related Articles
Advertisement
ಇದನ್ನೂ ಓದಿ: ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ
ಆದರೆ ಕಳೆದ ಎರೆಡು ವರ್ಷಗಳಿಂದ ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಸರ್ಕಾರದ ನಿಯಮ ಪಾಲನೆ ಮಾಡುವ ಉದ್ದೇಶದಿಂದ ಕಮಿಟಿಯವರು ಮೊಹರಂ ಆಚರಣೆ ರದ್ದು ಮಾಡಿದ್ದರು. ಸರ್ಕಾರದ ಆದೇಶದಂತೆ ಸರಳ ರೀತಿಯಲ್ಲಿ ಮೊಹರಂ ಆಚರಣೆ ಮಾಡಿದ ಭಕ್ತರು, ಈ ಬಾರಿ ಸಂಭ್ರಮದಿಂದ ಹಬ್ಬ ಆಚರಣೆ ಮಾಡಿದರು.
ಕಮಿಟಿಯ ಸಂಚಾಲಕರಾದ ಲಾಲಸಾಬ ಜಾಲಿಹಾಳ ಅಜ್ಜನವರು, ಮೈಬುಸಾಬ ಚಿಕ್ಕೊಪ್ಪ, ರಂಜಾನ್‌ಸಾಬ ನರಗುಂದ, ಸೈಪುದ್ದಿನ್ ನರಗುಂದ, ಡಿ ಎನ್ ಪಾಟೀಲ, ವಿಠಲಗೌಡ್ರ ಪಾಟೀಲ, ದ್ಯಾಮನಗೌಡ ಪಾಟೀಲ್, ಸಿದ್ದಪ್ಪ ಗಂಜೆಪ್ಪನವರ, ಖಾಜಾಅಮೀನ್ ಬಹದ್ದೂರಖಾನ್, ಲಾಲಸಾಬ ನರಗುಂದ, ತಾಸಿಮ್‌ಸಾಬ ಚಿಕ್ಕೊಪ್ಪ ಸೇರಿದಂತೆ ಗ್ರಾಮದ ಪ್ರಮುಖರು ಇದ್ದರು. ಗೋವಾ, ಪುಣೆ, ಮಹಾರಾಷ್ಟ ಸೇರಿದಂತೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿದ್ದರು.