ನಾಲತವಾಡ: ಹಬ್ಬ ಹರಿದಿನಗಳನ್ನು ಶಾಂತಿ ಹಾಗೂ ಸಹೋದರತೆಯಿಂದ ಆಚರಿಸಿಕೊಂಡು ಬಂದ ಐತಿಹಾಸಿಕ ಹಿನ್ನಲೆ ಹೊಂದಿದ್ದ ಪಟ್ಟಣದಲ್ಲಿ ಇದೇ ಪದ್ದತಿಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಪಿಎಸ್‌ಐ ಸಂಜಯ್ ತಿಪ್ಪಾರಡ್ಡಿ ಹೇಳಿದರು.
ಇಲ್ಲಿಯ ಪೋಲೀಸ್ ಹೊರ ವಲಯದಲ್ಲಿ ಪಟ್ಟಣದಲ್ಲಿ ಮೊಹರಂ ಆಚರಿಸುವ ಹಿನ್ನಲೆಯಲ್ಲಿ ಕರೆಯಲಾದ ಹಿಂದೂ ಮುಸ್ಲಿಂ ಬಾಂಧವರ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನೂರಾರು ವರ್ಷಗಳಿಂದಲೂ ಪಟ್ಟಣದಲ್ಲಿ ಆಚರಿಸುತ್ತೀರುವ ಪ್ರತಿಯೊಂದು ಕಾರ್ಯಕ್ರಮಗಳ ಗೌರವ ಉಳಿಸುವ ಕಾರ್ಯ ಮಾಡಿದ್ದೀರಿ, ಆಚರಣೆಗಳಲ್ಲಿ ಸಣ್ಣ ಪುಟ್ಟ ತಪ್ಪುಗಳಿದ್ದರೂ ಸರಿ, ಯಾವದೇ ಕಾರಣಕ್ಕೂ ಮೊಬೈಲ್ ಮೂಲಕ ಹರಿಬಿಡದೇ ಪಟ್ಟಣದ ನೆಮ್ಮದಿ ಕಾಪಾಡಿಕೊಳ್ಳಬೇಕು, ಮೊಹರಂ ಮಸೀದಿಗಳಲ್ಲಿ ಆಚರಿಸುವ ಹಗಲಿರುಳು ರಿವಾಯತ್, ಹೆಜ್ಜೆ ಕುಣ ತದಂತೆ, ಡಿಜೆ ನಾನಾ ಕಾರ್ಯಕ್ರಮಗಳು ಧರ್ಮಗಳಲ್ಲಿ ಭಾತೃತ್ವ ಬೀರುವಂತಿರಲಿ, ಪ್ರಚೋದನಾಕಾರಿ ಘಟನೆಗಳಿಗೆ ಆಸ್ಪದ ಕೊಡಬೇಡಿ ಎಂದರು.
ಮೊಹರಂ ಕೊನೆಯ ದಿನ ಮದ್ಯಾಹ್ನ ಮತ್ತು ರಾತ್ರಿ ನಡೆಯುವ ಸಾಮೂಹಿಕ ಅಲಾಯಿ ದೇವರುಗಳ ಮೆರವಣಗೆ ವೇಳೆ ಶಾಂತಿ ಕಾಪಾಡಿಕೊಳ್ಳಬೇಕು, ಯಾವದೇ ಕಾರಣಕ್ಕೂ ವೈಯಕ್ತಿಕ ದ್ವೇಷ ಸಾಧಿಸುವ ಮನೋಭಾವನೆ ಇಟ್ಟುಕೊಳ್ಳಬೇಡಿ, ಅಂದು ನಮ್ಮ ಇಲಾಖೆಯಿಂದ ಸೂಕ್ತ ಬಂದೋ ಬಸ್ತ್ ಒದಗಿಸುವ ಎಲ್ಲಾ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಪ್ರಮುಖರಾದ ಬಾಲಚಂದ್ರ ಗದಗಿನ ಮಾತನಾಡಿದರು.
ಸಭೆಯಲ್ಲಿ ಮುಖ್ಯ ಪೇದೆ, ಪಿ.ಎಸ್.ಪಾಟೀಲ, ಹನಮಂತ ಹೆಬ್ಬುಲಿ, ಬಸವರಾಜ ಹಿಪ್ಪರಗಿ, ಬಸವರಾಜ ಚಿಂಚೋಳಿ, ಚಿದಾನಂದ, ಮತ್ತು ಸಿಕ್ಕಲಗಾರ, ಅವಟಿ, ಖಾಜಿ, ಹವೇಲಿ, ನಾಡಗೌಡ, ಬಾರಪೇಟ, ತಳಗಿನ ಮಸೀದ್, ಜಾಲಗಾರ ಓಣ ಯ ಮಸೀದಿಯ ಪ್ರಮುಖರಿದ್ದರು.