Advertisement

ಅಮೆರಿಕದಲ್ಲಿ ಬಾಕ್ಸರ್‌ ಅಲಿ ಮಗನಿಗೆ ಅವಮಾನ?

12:29 AM Mar 14, 2017 | Team Udayavani |

ವಾಷಿಂಗ್ಟನ್‌: ಅಮೆರಿಕದ ಬಾಕ್ಸಿಂಗ್‌ ದಂತಕತೆ ಮೊಹಮ್ಮದ್‌ ಅಲಿ ಪುತ್ರ ಮೊಹಮ್ಮದ್‌ ಅಲಿ ಜೂನಿಯರ್‌ ಅವರನ್ನು ಅಮೆರಿಕದ ವಿಮಾನ ನಿಲ್ದಾಣದಲ್ಲಿ ಮತ್ತೆ ಬಂಧಿಸಲಾಗಿದೆ ಎನ್ನಲಾಗಿದೆ.  ಆದರೆ ಈ ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ.
 
ವಾಷಿಂಗ್ಟನ್‌ ದೇಶೀಯ ವಿಮಾನ ನಿಲ್ದಾಣದಲ್ಲಿ ಅಲಿ ಜೂನಿಯರ್‌ ಜೆಟ್‌ ಬ್ಲೂ ಏರ್‌ವೇಸ್‌ನಿಂದ ಫ್ಲೋರಿಡಾಗೆ ತೆರಳುವವರಿದ್ದರು. ಈ ಸಮಯದಲ್ಲಿ ಅವರನ್ನು ಭದ್ರತಾ ಸಿಬಂದಿಗಳು ಬಂಧಿಸಿ ಸುಮಾರು 20 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಇದು ಮೊಹಮ್ಮದ್‌ ಅಲಿ ಜೂನಿಯರ್‌ ಅವರಿಗೆ ಅಮೆರಿಕ ವಿಮಾನ ನಿಲ್ದಾಣದಲ್ಲಿ ಆಗುತ್ತಿರುವ ಎರಡನೇ ಅವಮಾನ. ಇದಕ್ಕೂ ಮುನ್ನ ಫೆ.7ರಂದು ಅಲಿ ಜೂನಿಯರ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದು ದೊಡ್ಡ ಸುದ್ದಿಯಾಗಿತ್ತು. ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಸರಕಾರ ಆಡಳಿತಕ್ಕೆ ಬಂದ ಅನಂತರ ಮುಸ್ಲಿಂ ಹೆಸರುಳ್ಳ ವ್ಯಕ್ತಿಗಳನ್ನು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next