Advertisement

“ಮುಗುಳು ನಗೆ’ಹಾಡುಗಳು ಗಣೇಶ್‌ ಹುಟ್ಟುಹಬ್ಬಕ್ಕೆ

12:10 PM Jun 15, 2017 | |

ಗಣೇಶ್‌ ಅಭಿನಯದ “ಮುಗುಳು ನಗೆ’ ಚಿತ್ರದ ಚಿತ್ರೀಕರಣ ಮುಗಿದಿದೆ. ಡಬ್ಬಿಂಗ್‌ ಸಹ ಆಗಿದೆ. ಈ ಮಧ್ಯೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡ ಹೊರಟಿದೆ. ಮೂಲಗಳ ಪ್ರಕಾರ, ಮುಂಬರುವ ಜುಲೈ 2ರಂದು (ಅಂದು ಗಣೇಶ್‌ ಹುಟ್ಟುಹಬ್ಬ) ಚಿತ್ರಕ್ಕೆ ವಿ. ಹರಿಕೃಷ್ಣ ಸಂಯೋಜಿಸಿರುವ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ.

Advertisement

“ಮುಗುಳು ನಗೆ’ ಚಿತ್ರವನ್ನು ಎಸ್‌.ಎಸ್‌. ಫಿಲಂಸ್‌, ಗೋಲ್ಡನ್‌ ಮೂವೀಸ್‌ ಮತ್ತು ಯೋಗರಾಜ್‌ ಸಿನಿಮಾಸ್‌ ಬ್ಯಾನರ್‌ಗಳಡಿ ನಿರ್ಮಾಣವಾಗಿದ್ದು, ಸೈಯದ್‌ ಸಲಾಂ ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆಯುವುದರ ಜೊತೆಗೆ ನಿರ್ದೇಶನ ಮಾಡಿದ್ದಾರೆ ಯೋಗರಾಜ್‌ ಭಟ್‌. ಚಿತ್ರದಲ್ಲಿ ಗಣೇಶ್‌ ಜೊತೆಗೆ ಅಪೂರ್ವ ಅರೋರಾ, ಅಮೂಲ್ಯ, ನಿಖೀತಾ ನಾರಾಯಣ್‌, ಆಶಿಕಾ, ರಂಗಾಯಣ ರಘು, ಅನಂತ್‌ ನಾಗ್‌ ಮುಂತಾದವರು ನಟಿಸಿದ್ದು, ಸುಜ್ಞಾನ್‌ ಛಾಯಾಗ್ರಹಣ ಮಾಡಿದ್ದಾರೆ. ಅಂದಹಾಗೆ, ಜುಲೈ ಎರಡರಂದೇ “ವೀಕೆಂಡ್‌ ವಿಥ್‌ ರಮೇಶ್‌’ನಲ್ಲಿ ಗಣೇಶ್‌ ಭಾಗವಹಿಸಿರುವ ಎಪಿಸೋಡು ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next