Advertisement

ಮಕ್ಕಳಿಗಿನ್ನೂ ಇಲ್ಲ ಶೂ-ಸಾಕ್ಸ್‌ ಭಾಗ್ಯ

11:27 AM Aug 26, 2019 | Naveen |

ಮುದಗಲ್ಲ: ಶಾಲೆಗಳು ಆರಂಭವಾಗಿ ಮೂರು ತಿಂಗಳಾದರೂ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್‌ ಭಾಗ್ಯ ಇಲ್ಲದಾಗಿದೆ.

Advertisement

ತಾಲೂಕಿನ 26 ಕ್ಲಸ್ಟರ್‌ಗಳಲ್ಲಿ 318 ಸರಕಾರಿ ಪ್ರಾಥಮಿಕ ಶಾಲೆ, 44 ಸರಕಾರಿ ಪ್ರೌಢ ಶಾಲೆಗಳಿವೆ. 1ರಿಂದ 10ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್‌ ವಿತರಣೆಗೆ ಸರ್ಕಾರ ಆದೇಶಿಸಿದೆ. ಸುಮಾರು 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಶೂ ಮತ್ತು ಸಾಕ್ಸ್‌ಗೆ ತರಗತಿವಾರು ದರ ನಿಗದಿಪಡಿಸಲಾಗಿದೆ. 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ. 6ರಿಂದ8 ನೇ ತರಗತಿವರೆಗೆ 295 ರೂ. ಹಾಗೂ 9ರಿಂದ10ನೇ ತರಗತಿವರೆಗೆ 325 ರೂ. ನಿಗದಿಪಡಿಸಿದೆ. ಈ ಹಣದಲ್ಲಿ ಪ್ರತಿ ವಿದ್ಯಾರ್ಥಿಗೆ ಶೂ ಮತ್ತು 2 ಜೊತೆ ಸಾಕ್ಸ್‌ಗಳನ್ನು ಖರೀದಿಸುವಂತೆ ಸೂಚಿಸಿ ಶಿಕ್ಷಣ ಇಲಾಖೆ ಆಯಾ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಗೆ ಅನುದಾನ ವರ್ಗಾವಣೆ ಮಾಡಿದೆ. ಆದರೆ ಹಣ ಜಮೆಯಾಗಿ 20 ದಿನ ಗತಿಸಿದರೂ ವಿದ್ಯಾರ್ಥಿಗಳಿಗೆ ಶೂ-ಸಾಕ್ಸ್‌ ಭಾಗ್ಯ ದೊರೆಯದಿರುವುದು ಬಡ ಮಕ್ಕಳ ಆಶೆಗೆ ತಣ್ಣೀರು ಎರಚಿದಂತಾಗಿದೆ. ಹಣ ಜಮೆಯಾದ ತಕ್ಷಣವೇ ಶಾಲೆಗಳ ಎಸ್‌ಡಿಎಂಸಿ ಸಭೆ ಕರೆದು ಠರಾವು ಪಾಸ್‌ ಮಾಡಬೇಕು. ನಂತರದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು-ಮುಖ್ಯಗುರು ಹಾಗೂ 5 ಜನ ಸಮಿತಿ ಸದಸ್ಯರು ಸೇರಿ ಶೂ-ಸಾಕ್ಸ್‌ ಖರೀದಿಸಬೇಕು. ಆದರೆ ಶೈಕ್ಷಣಿಕ ವರ್ಷ ಆರಂಭದ ಜೂನ್‌ ಕೊನೆಯಲ್ಲಿ ಮಕ್ಕಳಿಗೆ ಶೂ-ಸಾಕ್ಸ್‌, ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ವಿತರಿಸಬೇಕು. ಆದರೆ ಶೈಕ್ಷಣಿಕ ವರ್ಷದ ಮೂರು ತಿಂಗಳು ಗತಿಸಿದರೂ ಮಕ್ಕಳಿಗೆ ಸೌಲಭ್ಯ ಕಲ್ಪಿಸದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿವೆ.

ಶಂಕೆ: ಶಾಲಾ ಮಕ್ಕಳ ಶೂ-ಸಾಕ್ಸ್‌ ಖರೀದಿಗೆ ಆಯಾ ವಲಯವಾರು ಸಿಆರ್‌ಪಿ, ಬಿಆರ್‌ಪಿ ಮತ್ತು ಶಿಕ್ಷಣ ಸಂಯೋಜಕರು ಅನುಮತಿ ಪಡೆಯುವ ಜತೆಗೆ ಅವರು ಸೂಚಿಸಿದ ಅಂಗಡಿಗಳಲ್ಲಿಯೇ ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಶೂ-ಸಾಕ್ಸ್‌ ಖರೀದಿಸಬೇಕೆಂಬ ನಿಯಮ ಹೇರಲಾಗುತ್ತಿದೆ. ಇದೇ ಆ ಕಾರಣದಿಂದ ಶೂ, ಸಾಕ್ಸ್‌ ಖರೀದಿ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಇಲಾಖೆ ನಿಯಮನುಸಾರ ರಚಿಸಲಾದ ಸಮಿತಿಗಳು ಪಾರದರ್ಶಕವಾಗಿ ಶೂ-ಸಾಕ್ಸ್‌ ಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ವಿತರಣೆಗೆ ಮುಂದಾಗಬೇಕೆಂಬುದು ಶಿಕ್ಷಣ ಪ್ರೇಮಿಗಳು, ಪಾಲಕರ ಆಶಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next