Advertisement
ವಾರದ ಸಂತೆ ನಡೆಯುವ ಶುಕ್ರವಾರ ವಂತೂ ಇಲ್ಲಿ ಜೀವ ಹಿಡಿದುಕೊಂಡೇ ಸಂತೆ ಯತ್ತ ಸಾಗಬೇಕಾದ ಭಯಾನಕ ಸನ್ನಿವೇಶ ಯಾವಾಗಲೂ ಕಂಡುಬರುತ್ತಲೇ ಇದೆ. ಇದಕ್ಕೆ ಸಜೀವ ಉದಾಹರಣೆ ಮಂಗಳ ವಾರ ವರದಿಗಾರರ ಎದುರೇ ಅಚಾನಕ್ ಆಗಿ ನಡೆದ ಘಟನೆ. ಸುಮಾರು ಹನ್ನೊಂದು ಗಂಟೆಗೆ ಪೇಟೆಯಿಂದ ಆಳ್ವಾಸ್ ಆಸ್ಪತ್ರೆ ಹಾದಿಯಾಗಿ ಬಂದ ಮಣಿಪುರದ ವಿದ್ಯಾ ರ್ಥಿಯೋರ್ವನ ಬೈಕ್ ಮತ್ತು ರಿಂಗ್ ರೋಡ್‌ನ ದಕ್ಷಿಣ ಭಾಗದಿಂದ ಬಂದ ಟೆಂಪೋ ವಾಹನ ಲಂಬಕೋನದಲ್ಲಿ ಢಿಕ್ಕಿ ಹೊಡೆದು ಬೈಕ್ ಅಡ್ಡ ಬಿತ್ತು. ಮಣಿ ಪುರದ ವಿದ್ಯಾರ್ಥಿ ಸಮರ ಕಲೆಗಳಲ್ಲಿ ನಿಷ್ಣಾತ ನಾಗಿದ್ದುದರಿಂದಲೋ ಏನೋ ಢಿಕ್ಕಿ ಹೊಡೆದ ತತ್‌ಕ್ಷಣ ಛಂಗನೆ ಜಿಗಿದು ಒಂದಷ್ಟು ದೂರ ಬಿದ್ದ ಪರಿನೋಡಿದರೆ ಒಮ್ಮೆ ನೋಟಕರ ಎದೆ ಝಲ್ಲೆನ್ನಿಸುವಂತಿತ್ತು. ಸುದೈವವಶಾತ್, ಟೆಂಪೋ ಸಾಧಾರಣ ವೇಗದಲ್ಲಿದ್ದುದರಿಂದ ಪ್ರಾಯಶಃ ಯಾವುದೇ ಜೀವಾಪಾಯ ಸಂಭವಿಸಲಿಲ್ಲ.
ಪುರಸಭೆ, ಪೊಲೀಸ್, ಪಿಡಬ್ಲ್ಯುಡಿ, ಲೋಕಾಯುಕ್ತ ಈ ವ್ಯವಸ್ಥೆಗಳೆಲ್ಲ ಈ ರಿಂಗ್ ರೋಡ್ ಸಮಸ್ಯೆಗಳ ಬಗ್ಗೆ ದಿವ್ಯ ಮೌನ ತಳೆದಿರುವಂತಿದ್ದು ಸಂತೆ ಬಾಗಿಲು, ಆಸ್ಪತ್ರೆ ತಿರುವು, ಬಿಎಸ್‌ಎನ್‌ಎಲ್ ಟವರ್, ಕನ್ನಡ ಭವನ, ಪಶ್ಚಿಮದತ್ತ ಸಾಗುವ ರಸ್ತೆ, ರಿಂಗ್ ಮುಂದುವರಿದ ಎಡಗಡೆ ಸಿಗುವ ಈಜುಕೊಳ ಮತ್ತಿತರ ಕಡೆಗಳಲ್ಲಿ ಸಂಭಾವ್ಯ ದುರಂತಗಳನ್ನು ತಡೆಯಲು ಏನು ಮಾಡಬಹುದೆಂದು ಮೌನವಾಗಿ ಚಿಂತಿಸುತ್ತಿವೆಯೋ ಎಂಬ ಗುಮಾನಿ ಹುಟ್ಟಿದರೆ ಆಚ್ಚರಿಇಲ್ಲ.