Advertisement
ಕಾರಣಿಕ ಕ್ಷೇತ್ರ
Related Articles
Advertisement
ಧಾರ್ಮಿಕ ಕಾರ್ಯಕ್ರಮಗಳು
ಎ. 18ರಂದು ಸಾಯಂಕಾಲ ಋತ್ವಿಜರ ಸ್ವಾಗತದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭ ಗೊಳ್ಳಲಿದ್ದು, ಎ. 21ರಂದು ಬೆಳಗ್ಗೆ 5-50ಕ್ಕೆ ಶ್ರೀ ಮಹಾಲಿಂಗೇಶ್ವರ, ಶ್ರೀ ಸೂರ್ಯನಾರಾಯಣ ಹಾಗೂ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಕಲಶಾಭಿಷೇಕ, ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ 109 ಕಲಶಾಭಿಷೇಕ, ಶ್ರೀ ಧೂಮಾವತಿ ಮತ್ತು ಬಂಟ ದೈವ ಪ್ರತಿಷ್ಠೆ, ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ ನಡೆಯಲಿದೆ.
ಎ. 23 ರಂದು ಶ್ರೀ ಸೂರ್ಯನಾರಾಯಣ ದೇವರಿಗೆ 109 ಕಲಶಾಭಿಷೇಕ, ಶ್ರೀ ಮಹಾಲಿಂಗೇಶ್ವರ ದೇವರಿಗೆ ತತ್ವಕಲಶಾಭಿಷೇಕ, ಎ.24 ರಂದು ಬೆಳಗ್ಗೆ 10-10ಕ್ಕೆ 1008 ಕಲಶ ಸಹಿತ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ಎ. 25 ರಂದು ಬೆಳಗ್ಗೆ ಧ್ವಜಾರೋಹಣ, ಎ. 27 ರಂದು ವಾರ್ಷಿಕ ಮಹೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕವಾಟಬಂಧನ, ಶಯನೋತ್ಸವ, ಎ. 28 ರಂದು ಕವಾಟೋದ್ಘಾಟನೆ, ತುಲಾಭಾರ ಸೇವೆ, ಅವಭೃಥೋತ್ಸವ, ಧ್ವಜಾವರೋಹಣ, ರಾತ್ರಿ ಶ್ರೀ ಧೂಮಾವತಿ ಬಂಟ ದೈವದ ಕೋಲ ಹಾಗೂ ಎ. 29 ರಂದು ಬೆಳಗ್ಗೆ ಮಹಾ ಸಂಪ್ರೋಕ್ಷಣೆ, ಮಹಾಮಂತ್ರಾಕ್ಷತೆ ನಡೆಯಲಿದೆ.
ಧಾರ್ಮಿಕ ಸಭಾ ಕಾರ್ಯಕ್ರಮ
ಎ.23ರಂದು ಸಂಜೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ದೀಪ ಪ್ರಜ್ವಲನೆ ಮಾಡಲಿರುವರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ|ಹೆಚ್.ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳ ಉಪಸ್ಥಿತಿಯಲ್ಲಿ ವಿದ್ವಾನ್ ರವೀಂದ್ರನಾಥ್ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡುವರು.
ಸಾಂಸ್ಕೃತಿಕ ಕಾರ್ಯಕ್ರಮ
ಸಾಂಸðತಿಕ ಕಾರ್ಯಕ್ರಮದ ಅಂಗವಾಗಿ ಎ. 21 ರಂದು ಸಂಜೆ ಮೂಡುಶೆಡ್ಡೆ ಗೀತಾ ನರ್ತನ ತಂಡದಿಂದ ಪೌರಾಣಿಕ ಗೀತ ರೂಪಕ ಭಗವದ್ಭಕ್ತಿ ಪಾರಮ್ಯ, ಎ. 22 ರಂದು ಸಾಲಿಗ್ರಾಮ ಮೇಳದವರಿಂದ ಶ್ರೀ ಶನೀಶ್ವರ ಮಹಾತ್ಮೆ, ಕಾಲಮಿತಿ ಯಕ್ಷಗಾನ, ಎ. 23 ರಂದು ಕಲ್ಲಡ್ಕ ವಿಟ್ಠಲ ನಾಯಕ್ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಎ. 24 ರಂದು ಬೆಳಗ್ಗೆ ಪುತ್ತೂರು ಜಗದೀಶ ಆಚಾರ್ಯ ಅವರಿಂದ ಗಾಯನ ಭಜನೆ, ಅಪರಾಹ್ನ ಪಾವಂಜೆ ಮೇಳದವರಿಂದ ಶ್ರೀ ಮಹಾದೇವಿ ಲಲಿತೋಪಾಖ್ಯಾನ ಕಾಲಮಿತಿ ಯಕ್ಷಗಾನ, ಎ 27 ರಂದು ಬೆಳಗ್ಗೆ ವಿಜಯ ಶೆಟ್ಟಿ ಮುಂಬೈ ಅವರಿಂದ ಭಕ್ತಿಗೀತೆ, ಭಜನೆ, ರಾತ್ರಿ ಕಿನ್ನಿಗೋಳಿ ವಿಜಯಾ ಕಲಾವಿದರಿಂದ ಪಿರಾವುಡು ಒರಿ ಉಲ್ಲೆ ತುಳು ನಾಟಕ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಮತ್ತು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.