Advertisement

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

08:24 PM Apr 23, 2024 | Team Udayavani |

ಶಿರ್ವ: ಭಗವಂತನ ಅನುಗ್ರಹದ ಚಿಂತನೆಯೊಂದಿಗೆ ಬದುಕಿದಾಗ ಬದುಕು ಸಾರ್ಥಕವಾಗುತ್ತದೆ. ಮನುಷ್ಯನ ದೇಹ ಮತ್ತು ಮನಸ್ಸು ಆನ್ಯೋನ್ಯ ಸಂಬಂಧ ಹೊಂದಿದ್ದು,ದೇಹದ ಆರೋಗ್ಯದಲ್ಲಿ ಮನಸ್ಸು ಪ್ರಧಾನ ಪಾತ್ರ ವಹಿಸುತ್ತದೆ. ಮನಸ್ಸನ್ನು ನಿಯಂತ್ರಿಸುವ ಮಹಾರುದ್ರ ದೇವರ ಉಪಾಸನೆಯಿಂದ ಸಕಲ ಸಂಪತ್ತು, ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಉಡುಪಿ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಹೇಳಿದರು.

Advertisement

ಅವರು ಎ. 23 ರಂದು ಸುಮಾರು 7 ಕೋ. ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಮೂಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇವಸ್ಥಾನದ ಶಿಲಾಮಯ ಗರ್ಭಗೃಹದ ನೂತನ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕದ ಧಾರ್ಮಿಕ ಸಭೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇಗುಲದ ಪವಿತ್ರಪಾಣಿ ರಾಮಮೂರ್ತಿ ಹೆಬ್ಟಾರ್‌ ದಂಪತಿ ಕಾಣಿಯೂರು ಶ್ರೀಗಳ ಪಾದಪೂಜೆ ನೆರವೇರಿಸಿದರು.

ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನಾ ಕುರ್ಕಿಲ್‌ಬೆಟ್ಟು ಬಾಳಿಕೆ, ಉದ್ಯಮಿಗಳಾದ ಕೆ.ಕೆ. ಶೆಟ್ಟಿ ದಂಪತಿ ಅಹಮದ್‌ನಗರ ಮತ್ತು ವಿಶ್ವನಾಥ‌ ಶೆಟ್ಟಿ ಪೊಸ್ರಾಲ್‌ ದಂಪತಿಯನ್ನು ದಾನಿಗಳ ಪರವಾಗಿ ಸಮ್ಮಾನಿಸಲಾಯಿತು. ದೇಗುಲದ ತಾಂತ್ರಿಕ ವಿನ್ಯಾಸಗಾರ ಕುತ್ಯಾರು ಪ್ರಸಾದ್‌ ಶೆಟ್ಟಿ, ವಾಸ್ತು ತಂತ್ರಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ, ಉದ್ಯಮಿ ಹೃಷಿಕೇಶ್‌ ಹೆಗ್ಡೆ ಮತ್ತು ಧನಸಹಾಯ ನೀಡಿದ ದಾನಿಗಳನ್ನು ಗೌರವಿಸಲಾಯಿತು. ಶಿಕ್ಷಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಸಮ್ಮಾನಿತರ ಪರಿಚಯ ಮಾಡಿದರು.

ವಿದ್ವಾನ್‌ ಡಾ|ರಾಮನಾಥ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡಿದರು. ಕುತ್ಯಾರು ಪ್ರಸಾದ್‌ ಶೆಟ್ಟಿ, ಗುಂಡಿಬೈಲು ಸುಬ್ರಹ್ಮಣ್ಯ ಅವಧಾನಿ ಮತ್ತು ಸಂತೋಷ್‌ ಶೆಟ್ಟಿ ಇನ್ನಾ ಮಾತನಾಡಿದರು. ಮೊಕ್ತೇಸರ/ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಡಾ|ಹೆಚ್‌.ಬಿ.ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಆನುವಂಶಿಕ ಮೊಕ್ತೇಸರರಾದ ಬೆಳ್ಳೆ ಮೇಲ್ಮನೆ ವಸಂತ ಶೆಟ್ಟಿ,ಬೆಳ್ಳೆ ಕೆಳಮನೆ ಡಾ| ರಾಮರತನ್‌ ರೈ,ಸಮಿತಿಯ ಉಪಾಧ್ಯಕ್ಷ ಬೆಳ್ಳೆ ಮೇಲ್ಮನೆ ಉದಯ ಶೆಟ್ಟಿ, ಮುಂಬೈ ಸಮಿತಿಯ ಅಧ್ಯಕ್ಷ ವಿನಯ ಶೆಟ್ಟಿ ಪಾಲೆಮಾರ್‌, ಉದ್ಯಮಿಗಳಾದ ಎಡೆರು ಬಡಗುಮನೆ ಶುಭಕರ ಶೆಟ್ಟಿ,ನಾರಾಯಣ ಶೆಟ್ಟಿ ಪುಣೆ, ತಜ್ಞ ವೈದ್ಯ ಡಾ| ಜಯಪ್ರಕಾಶ್‌ ಬೆಳ್ಳೆ, ಕಟ್ಟಿಂಗೇರಿ ದೇಗುಲದ ಧರ್ಮದರ್ಶಿ ದೇವದಾಸ ಹೆಬ್ಟಾರ್‌,ನಿವೃತ್ತ ಉಪನ್ಯಾಸಕ ಪಟ್ಲ ದಯಾನಂದ ಕಾಮತ್‌, ಬೆಳ್ಳೆ ರವೀಂದ್ರನಾಥ ರಾವ್‌, ಸಮಿತಿಯ ಕಾರ್ಯದರ್ಶಿ ರಾಜೇಂದ್ರ ಶೆಟ್ಟಿ ವೇದಿಕೆಯಲ್ಲಿದ್ದರು.

ಜತೆ ಕಾರ್ಯದರ್ಶಿ ಬೆಳ್ಳೆ ನಿರಂಜನ ರಾವ್‌ಪ್ರಸ್ತಾವನೆಗೈದರು. ಭಾಗ್ಯಶ್ರೀ ಐತಾಳ್‌ ಸ್ವಾಗತಿಸಿ,ನಿರೂಪಿಸಿದರು. ಕೋಶಾಧಿಕಾರಿ ಬೆಳ್ಳೆ ಚಂದ್ರಕಾಂತ ರಾವ್‌ ವಂದಿಸಿದರು. ಬಳಿಕ ಕಲ್ಲಡ್ಕ ವಿಟ್ಠಲ ನಾಯಕ್‌ ಅವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next