ಹೆಬ್ರಿ: ಬಾಲ್ಯದಲ್ಲಿ ಮಕ್ಕಳಿಗೆ ಸಾಹಿತ್ಯದ ಪೂರಕ-ಪ್ರೇರಕವಾದ ವಾತಾವರಣ ನಿರ್ಮಿಸಿದರೆ ಅವರು ಮುಂದೆ ಸಮಾಜ ಒಪ್ಪುವ ಕವಿ-ಸಾಹಿತಿ-ಸಹೃದಯ ಓದುಗರಾಗಬಲ್ಲರು ಎಂದು ಮುದ್ರಾಡಿ ಸ.ಮಾ.ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಎ. ಚಂದ್ರಕಾಂತ್ ಹೇಳಿದರು.
ಜು. 13ರಂದು ಮುದ್ರಾಡಿ ಸ.ಮಾ. ಹಿ.ಪ್ರಾ.ಶಾಲೆಯಲ್ಲಿ ಹೆಬ್ರಿ ತಾ| ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡ ಸಾಹಿತ್ಯ ಚಿಗುರು ಸರಣಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕ.ಸಾ.ಪ. ಅಧ್ಯಕ್ಷ ಪಿ.ವಿ. ಆನಂದ್ ಸಾಲಿಗ್ರಾಮ ಅಧ್ಯಕ್ಷತೆ ವಹಿಸಿದ್ದರು. ಸ್ವರಚಿತ ಕವನ ಸ್ಪರ್ಧೆಯಲ್ಲಿ ವಿಜೇತರಾದ ಸುಧೀಕ್ಷಾ, ಅಧಿತಿ, ಮಂದಾರ ಹಾಗೂ ಕಥಾ ಸ್ಪರ್ಧೆಯಲ್ಲಿ ವಿಜೇತರಾದ ಪೂಜಾ, ಸಾಕ್ಷಿ, ರಕ್ಷಾ ಅವರಿಗೆ ಬಹುಮಾನ ವಿತರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಂದರ ಪೂಜಾರಿ, ವಿದ್ಯಾರ್ಥಿ ನಾಯಕ ಶೋಧನ್ ಉಪಸ್ಥಿತರಿದ್ದರು.
ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಬಲ್ಲಾಡಿ ಚಂದ್ರಶೇಖರ್ ಭಟ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಪರಿಷತ್‌ನ ಸಂಘಟನ ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಹಿರಿಯ ಸಹಶಿಕ್ಷಕಿ ಪೂರ್ಣಿಮಾ ಅವರು ವಂದಿಸಿದರು.