Advertisement

ಪ್ರತಿಯೊಬ್ಬರು ಮತದಾನ ಹಕ್ಕು ಚಲಾಯಿಸಿ: ಹನುಮಂತಪ್ಪ

05:24 PM Apr 14, 2019 | Naveen |

ಮೂಡಿಗೆರೆ: ಮತದಾನ ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಅದನ್ನು ಪಾಲಿಸದಿದ್ದವರು ಸಮಾಜದಲ್ಲಿ ತಿರಸ್ಕೃತರಾದಂತೆ ಎಂದು ತೋಟಗಾರಿಕಾ ಮಹಾ ವಿದ್ಯಾಲಯದ ಡೀನ್‌ ಎಂ. ಹನುಮಂತಪ್ಪ ತಿಳಿಸಿದರು.

Advertisement

ಪಟ್ಟಣದ ಜೇಸಿ ಭವನದಲ್ಲಿ ಜೆಸಿಐ ಸಂಸ್ಥೆ, ಚುನಾವಣಾ ಆಯೋಗ, ತೋಟಗಾರಿಕಾ ಮಹಾ ವಿದ್ಯಾಲಯ ರಾಷ್ಟ್ರೀಯ ಸೇವಾ
ಯೋಜನೆ ಘಟಕ ಆಶ್ರಯದಲ್ಲಿ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ದೇಶವನ್ನು ಸಮೃದ್ಧವಾಗಿ ಕಟ್ಟಲು ಮುಂದಾಗಬೇಕು ಎಂದರು.
ತಾಪಂ ಇಒ ಎಂ. ವೆಂಕಟೇಶ್‌ ಮಾತನಾಡಿ, ಏ. 18ರಂದು ಮತದಾನ ನಡೆಯಲಿದ್ದು, ಅಂದು ಪ್ರಜೆಗಳು ಮತದಾನ ಮಾಡುವ ಮೂಲಕ ತಮ್ಮ ಪರಮಾಧಿಕಾರ ಚಲಾಯಿಸಬೇಕು. ಇದನ್ನು ಅನುಸರಿಸದವರು ದೇಶದ ಮತ್ತು ಸಮಾಜದ ಬಗ್ಗೆ ಗೌರವ ಇಲ್ಲದಂತಹ ವ್ಯಕ್ತಿಗಳೆಂದು ಪರಿಗಣಿಸಬಹುದು ಎಂದು
ಹೇಳಿದರು.

ಮತದಾನ ಮಾನಸಿಕ ಸ್ಥಿರತೆಯುಳ್ಳ ಪ್ರತಿಯೊಬ್ಬ ವಯಸ್ಕ ಪ್ರಜೆಯ ಹಕ್ಕು ಮತ್ತು ಕರ್ತವ್ಯವಾಗಿದೆ. ಹಾಗಾಗಿ ಎಲ್ಲರೂ
ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಜಾಗೃತ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಜೀಸಿ ಅಧ್ಯಕ್ಷ ಎಚ್‌.ಕೆ. ಯೋಗೇಶ್‌ ಮಾತನಾಡಿ, ಭವ್ಯಭಾರತಕ್ಕಾಗಿ ಸ್ವಯಂ ಪ್ರೇರಿತರಾಗಿ ಜನತೆ ಮತ ಚಲಾಯಿಸಬೇಕು. ಇತ್ತೀಚಿನ ವರ್ಷಗಳಲ್ಲಿ ಹಣ, ಹೆಂಡಕ್ಕಾಗಿ ಮತ ಮಾರಾಟ ಮಾಡುವರೆಂದು ಕೇಳಿ ತಿಳಿದಿದ್ದೇವೆ. ಮತದಾನ ಎಂಬುವುದು ದೇಶಕ್ಕಾಗಿ ನಾವು ಚಲಾಯಿಸುವ ದಾನವಾಗಿದೆ. ಇದನ್ನು ಮಾರಾಟ ಮಾಡಿದರೆ
ದೇಶವನ್ನೇ ಮಾರಾಟ ಮಾಡಿದಂತೆ. ಹಾಗಾಗಿ ಮತ ಚಲಾವಣೆ ನಮ್ಮ ಹಕ್ಕು ಎಂದು ತಿಳಿದು ಸ್ವಯಂ ಪ್ರೇರಿತರಾಗಿ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

Advertisement

ಮೂಡಿಗೆರೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಜಾಥಾ ಸಾಗಿತು. ತಾಪಂ ಉಪ ನಿರ್ದೇಶಕ ಡಿ.ಡಿ. ಪ್ರಕಾಶ್‌,
ಎನ್ನೆಸ್ಸೆಸ್‌ ಕೋಡಿನೇಟರ್‌ ಎಚ್‌.ಎಸ್‌. ಎಲ್ಲೇಶ್‌ ಕುಮಾರ್‌, ಕಾರ್ಯಕ್ರಮದ ನಿರ್ದೇಶಕರಾದ ಜೇಸಿ ಸಂಸ್ಥೆಯ ಸುಪ್ರೀತ್‌, ನಝೀಮ್‌, ಚಂದ್ರಶೇಖರ್‌, ರೋಹಿತ್‌ ಇತರರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next