Advertisement

ಕಾಮಗಾರಿ ಅವ್ಯವಹಾರ ತನಿಖೆಗೆ ನಿರ್ಧಾರ

06:41 PM Sep 19, 2019 | Team Udayavani |

ಮೂಡಿಗೆರೆ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಊಟದ ಹಾಲ್ ಮೇಲ್ಭಾಗದ ಕಟ್ಟಡ ನಿರ್ಮಾಣ ಮತ್ತು ರೈತ ಭವನದ ಅನೇಕ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿವೆ ಎಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಸಮಗ್ರ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷೆ ಕೆ.ಪಿ.ಭಾರತಿ ಹೇಳಿದರು.

Advertisement

ಬುಧವಾರ ರೈತ ಭವನದಲ್ಲಿ ನಡೆದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷೆ ವಹಿಸಿ ಅವರು ಕೆ.ಪಿ.ಭಾರತಿ ಮಾತನಾಡಿದರು.

ಸಂಸ್ಥೆ ಮುಂಭಾಗದಲ್ಲಿ ಇಂಟರ್ಲಾಕ್‌ ಅಳವಡಿಕೆ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಿದ್ದರಿಂದ ಸಂಸ್ಥೆಗೆ ಶೇ.5ರಷ್ಟು ನಷ್ಟ ಉಂಟಾಗಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಮಿತಿ ಕೇಂದ್ರಕ್ಕೆ ಕೆಲಸ ನೀಡಬಾರದು. ಸಂಸ್ಥೆಯಿಂದಲೇ ನಿರ್ಮಾಣ ಮಾಡಬೇಕು. ಆಗಿರುವ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿಬಂದಿದ್ದರಿಂದ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಂಘಕ್ಕೆ ಈ ವರ್ಷ 19 ಲಕ್ಷ ರೂ. ನಿವ್ವಳ ಲಾಭ ಬಂದಿದ್ದು, ರೈತ ಭವನದ ಬಾಡಿಗೆ ಬೇರೆ ಎಲ್ಲಾ ಕಡೆಗಳಿಗಿಂತ ಕಡಿಮೆ ಇದೆ. ಈ ಕಾರಣದಿಂದ ಆದಾಯದಲ್ಲಿ 5ಲಕ್ಷ ರೂ. ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ರೈತ ಭವನವನ್ನು ಉಚಿತವಾಗಿ ನೀಡಬಾರದೆಂದು ನಿರ್ಣಯಿಸಲಾಗಿದೆ ಎಂದರು.

ಜನರೇಟರ್‌ ಸ್ವಯಂ ಚಾಲನೆಗೊಳ್ಳಲು 70 ಸಾವಿರ ರೂ. ಮತ್ತು ಸಸ್ಯಾಹಾರ ಊಟ ಮಾಡುವವರಿಗೆ ಸುಮಾರು 3ಲಕ್ಷ ರೂ. ವೆಚ್ಚದಲ್ಲಿ ಕುರ್ಚಿ ಮತ್ತು ಟೇಬಲ್ಗಳನ್ನು ಖರೀದಿಸಲಾಗಿದೆ. ಸಂಘದ ಮಳಿಗೆ ಸೋರುತ್ತಿದ್ದ ಕಾರಣ ಮೇಲ್ಚಾವಣಿ ನಿರ್ಮಿಸಿ 5 ಹೊಸ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆ ಕೊಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

Advertisement

ಸಂಘದ ವಾರ್ಷಿಕ ವ್ಯವಹಾರ, ಸಾಲ ವಿತರಣೆ, ಕಾಮಗಾರಿಗಳ ಆಯವ್ಯಯ, ಅಂದಾಜು ಪಟ್ಟಿಗಳ ಬಗ್ಗೆ ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.

ಈ ಹಿಂದೆ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ 523 ಹೊಸಬರಿಗೆ ಸಂಘದ ಸದಸ್ಯತ್ವ ನೀಡಲಾಗಿದ್ದು, ಇದು ಮುಂದಿನ ಚುನಾವಣೆಯಲ್ಲಿ ಪರಿಣಾಮ ಬೀರುವ ದೃಷ್ಟಿಯಿಂದ ವಿರೋಧ ಉಂಟಾಗಿತ್ತು. ಆದರೂ, ಸದಸ್ಯತ್ವ ನೋಂದಣಿಯಾಗಿದೆ. ಆದರೆ, ಮತದಾನದ ಹಕ್ಕನ್ನು ನಿರ್ಣಯಿಸುವ ಹಕ್ಕನ್ನು ಸಹಕಾರ ನಿಬಂಧಕರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಿ.ಇ.ಜಗನ್ನಾಥ್‌, ನಿರ್ದೇಶಕರಾದ ರಶ್ಮಿ ಸುಧೀರ್‌ ತಳವಾರ, ದಿನೇಶ್‌ ದೇವವೃಂದ, ವಿ.ಕೆ.ಶಿವೇಗೌಡ, ಗಜೇಂದ್ರ ತರುವೆ, ಎಂ.ವಿ.ಜಗದಿಧೀಶ್‌, ಎಂ.ಎನ್‌.ಅಶ್ವತ್ಥ್, ಕಸ್ತೂರಿ ಭೈರಪ್ಪಗೌಡ, ಎಸ್‌.ಎ.ವಿಜಯೇಂದ್ರ, ಒ.ಜಿ.ರವಿ, ಸಂಪತ್‌ ಮುಗ್ರಳ್ಳಿ, ಕೆ.ಎಂ.ರಾಜೇಂದ್ರ, ಎಚ್.ಕೆ.ದಯಾನಂದ್‌, ಕೇಶವ್‌ ಬಿಳುಗುಳ, ವ್ಯವಸ್ಥಾಪಕ ನಿರ್ದೇಶಕ ರಾಮಕೃಷ್ಣ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next