ಮೂಡಿಗೆರೆ: ಮೂಡಿಗೆರೆ ಪಟ್ಟಣ ಪಂಚಾಯತ್ 11 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ 6 ಆರು ಸ್ಥಾನ ಪಡೆಯುವ ಮೂಲಕ ಬಿಜೆಪಿ ಮೇಲುಗೈ ಸಾಧಿಸಿದೆ.
11 ವಾರ್ಡ್‌ಗಳಲ್ಲಿ ಒಟ್ಟು 37 ಅಭ್ಯರ್ಥಿಗಳು ಕಣದಲ್ಲಿದ್ದರು. ನಾಲ್ಕು ಸ್ಥಾನ ಕಾಂಗ್ರೆಸ್, ಆರು ಸ್ಥಾನ ಬಿಜೆಪಿ ಹಾಗೂ 1 ಸ್ಥಾನ ಜೆಡಿಎಸ್‌ಗೆ ಲಭಿಸಿದೆ.
1ನೇ ವಾರ್ಡ್‌ನಲ್ಲಿ ಬಿಜೆಪಿ ಕಮಲಾಕ್ಷಿ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಗೀತಾ ಅವರನ್ನು 53 ಮತಗಳ ಅಂತರದಲ್ಲಿ ಪರಾಭವಗೊಳಿಸಿದರು. 2ನೇ ವಾರ್ಡ್‌ನಲ್ಲಿ ಬಿಜೆಪಿಯ ಅನುಕುಮಾರ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಇಮ್ತಿಯಾಜ್‌ನ್ನು 135 ಮತಗಳಿಂದ ಪರಾಭವಗೊಳಿಸಿದರು. 3ನೇ ವಾರ್ಡ್‌ನಲ್ಲಿ ಬಿಜೆಪಿಯ ಧರ್ಮಪಾಲ್ ಕಾಂಗ್ರೆಸ್‌ನ ಜಿಯಾವುಲ್ಲಾ ವಿರುದ್ಧ 164 ಮತಗಳಿಂದ ಜಯಗಳಿಸುವುದರೊಂದಿಗೆ 3ನೇ ಬಾರಿ ಪಪಂಗೆ ಆಯ್ಕೆಯಾಗಿದ್ದಾರೆ.
4ನೇ ವಾರ್ಡ್‌ನಲ್ಲಿ ಬಿಜೆಪಿಯ ಸುಧಿಧೀರ್ ತನ್ನ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಇರ್ಷಾದ್ ಅಹಮ್ಮದ್‌ರನ್ನು 182 ಮತಗಳಿಂದ ಪರಾಭವಗೊಳಿಸಿದ್ದಾರೆ. 5ನೇ ವಾರ್ಡ್‌ನಲ್ಲಿ ಬಿಜೆಪಿಯ ಮನೋಜ್ ಜೆಡಿಎಸ್‌ನ ರಾಗಿಣಿಯವರನ್ನು 91 ಮತಗಳಿಂದ ಪರಾಭವಗೊಳಿಸಿದ್ದಾರೆ. 6ನೇ ವಾರ್ಡ್ ನಲ್ಲಿ ಜೆಡಿಎಸ್‌ನ ಸಿ.ಎಂ.ಗೀತಾ ಕಾಂಗ್ರೆಸ್‌ನ ಜಯಮ್ಮ ವಿರುದ್ದ 168 ಮತಗಳ ಅಂತರದಿಂದ ಜಯಗಳಿಸಿದ್ದಾರೆ. 7ನೇ ವಾರ್ಡ್ ನಲ್ಲಿ ಕಾಂಗ್ರೆಸ್‌ನ ಕೆ.ವೆಂಕಟೇಶ್ ಬಿಜೆಪಿ ಅಭ್ಯರ್ಥಿ ಸಂದರ್ಶ ವಿರುದ್ಧ 19 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 8ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎಚ್.ಪಿ.ರಮೇಶ್ ಬಿಜೆಪಿಯ ಸುಶೀಲ ವಿರುದ್ಧ ಕೇವಲ 11 ಮತಗಳಿಂದ ಜಯ ಸಾಧಿಸಿದ್ದಾರೆ. 9ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಎಂ.ಎ.ಹಂಜಾ ಬಿಜೆಪಿಯ ಲತಾ ಲಕ್ಷ್ಮ್ಮಣ್ ಅವರನ್ನು 60 ಮತಗಳಿಂದ ಪರಾಭವಗೊಳಿಸಿದರು. 10ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಖುರ್ಷಿದ್‌ಬಾನು ಪಕ್ಷೇತರ ಅಭ್ಯರ್ಥಿ ಸೈಯಿದಾ ಅಂಜುಂ ವಿರುದ್ದ 35 ಮತಗಳ ಅಂತರದಿಂದ ಜಯಗಳಿಸಿದರು. 11ನೇ ವಾರ್ಡ್‌ನಲ್ಲಿ ಬಿಜೆಪಿಯ ಆಶಾ ಮೋಹನ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಶುಭಾ ವಿರುದ್ಧ 159 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಮತ ಎಣಿಕೆಯು ಶುಕ್ರವಾರ ಬೆಳಗ್ಗೆ ತಾಲೂಕು ಕಚೇರಿಯಲ್ಲಿ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿ 10.30ರ ಸುಮಾರಿಗೆ ಸಂಪೂರ್ಣ ಫಲಿತಾಂಶ ಲಭಿಸಿತು. 7ನೇ ವಾರ್ಡಿನಲ್ಲಿ ಕೇವಲ 19 ಮತಗಳಿಂದ ಪರಾಭವಗೊಂಡ ಅಭ್ಯರ್ಥಿಯನ್ನು ಬಿಜೆಪಿಯ ಕಾರ್ಯಕರ್ತರು ಹೂಮಾಲೆ ಹಾಕಿ ಹೆಗಲ ಮೇಲೆ ಹೊತ್ತು ಜಯಘೋಷಣೆಯೊಂದಿಗೆ ಮೆರವಣಿಗೆ ನಡೆಸಿದರು.