Advertisement

ಮೂಡಿಗೆರೆ ಚರ್ಚ್‌ ಅದ್ಧೂರಿ ವಾರ್ಷಿಕ ಹಬ್ಬ

07:28 PM Feb 06, 2020 | Team Udayavani |

ಮೂಡಿಗೆರೆ: ಪಟ್ಟಣದ ಮೂಡಿಗೆರೆ ಚ ರ್ಚ್ ನಲ್ಲಿ ವಾರ್ಷಿಕ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಚರ್ಚ್‌ ವತಿಯಿಂದ ಸಂತ ಜೋಸೆಫರ ಮೂರ್ತಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದ ಭವ್ಯ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

Advertisement

ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕ್ರೆ„ಸ್ತ ಸಮುದಾಯದವರು ಮೇಣದ ಬತ್ತಿ ದೀಪಗಳನ್ನು ಹಿಡಿದು ಪಾಲ್ಗೊಂಡಿದ್ದರು. ಬ್ಯಾಂಡ್‌ ವಾದಗಳು, ಪಟಾಕಿಗಳ ಸಂಭ್ರಮದೊಂದಿಗೆ ನಡೆದ ಮೆರವಣಿಗೆ ಚರ್ಚ್‌ನಲ್ಲಿ ಕೊನೆಗೊಂಡಿತು.

ಮೆರವಣಿಗೆಗೂ ಮುನ್ನ ಚರ್ಚ್‌ನಲ್ಲಿ ಧರ್ಮಗುರು ಪೌಲ್‌ ಮಾಂಚೆದೋ ಅವರ ಸಮ್ಮುಖದಲ್ಲಿ ಭಕ್ತರು ಬಲಿ ಪೂಜೆ ನೆರವೇರಿಸಿದರು. ನಂತರ ನೆರದಿದ್ದ ಸಮುದಾಯದವರನ್ನು ಉದ್ದೇಶಿಸಿ ಪ್ರವಚನ ನೀಡಿದ ಧರ್ಮಗುರುಗಳು, ಸಂತ ಜೋಸೆಫರು ತಮ್ಮ ಜೀವನದಲ್ಲಿ ಯೇಸು ಸ್ವಾಮಿಯನ್ನು ಆದರ್ಶವನ್ನಾಗಿಟ್ಟುಕೊಂಡು ಅವರಂತೆ ಪರರಿಗಾಗಿ ತಮ್ಮ ಜೀವನ ಸಾಗಿಸಿದರು. ದೇವರು ತಮಗೆ ನೀಡಿದ ಅಭೂತಪೂರ್ವ ಪವಾಡ ಶಕ್ತಿಯಿಂದ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರಿಗೆ ಬೇಕಾದ ಅನುಕೂಲತೆಗಳನ್ನು ಮಾಡಿದ ಮಹಾಪುರುಷ ಎಂದರು.

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದು ಎಂದರೆ ದೇವರಿಗೆ ಸಹಾಯ ಮಾಡುವುದು ಎನ್ನುವುದು ಅವರ ಅನಿಸಿಕೆಯಾಗಿತ್ತು. ಶತಮಾನಗಳು ಕಳೆದರೂ ಅವರ ಅದ್ವಿತೀಯ ಶಕ್ತಿ ನಮ್ಮೆಲ್ಲರನ್ನು ಕಾಪಾಡುತ್ತಿದೆ. ಒಳ್ಳೆಯ ಮನೋಭಾವದಿಂದ ಉತ್ತಮ ಕಾರ್ಯಗಳನ್ನು ಮಾಡಿದಲ್ಲಿ ದೇವರನ್ನು ಕಾಣಲು ಸಾಧ್ಯ. ಇದನ್ನು ಎಲ್ಲರೂ ಅರ್ಥೈಸಿಕೊಂಡು ಎಲ್ಲರೂ ಒಟ್ಟಾಗಿ ಸಂತಸದಿಂದ ಬಾಳ್ಳೋಣ ಎಂದು ಕರೆ ನೀಡಿದರು.

ಮೂಡಿಗೆರೆ ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next