Advertisement

Mudigere ಸುಮಾರು 5 ಕಿ.ಮೀ. ಹೊತ್ತು, ಮರದಿಂದ ಮರಕ್ಕೆ ಹಗ್ಗ ಕಟ್ಟಿ ಟೆಕ್ಕಿ ಮೃತದೇಹ ತಂದ್ರು!

08:12 PM Dec 10, 2023 | Team Udayavani |

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ರಾಣಿಝರಿ ಜಲಪಾತದ ಬಳಿ ಸುಮಾರು 4 ಸಾವಿರ ಅಡಿ ಪ್ರಪಾತದಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಬೆಂಗಳೂರು ಮೂಲದ ಟೆಕ್ಕಿ ಭರತ್ ಮೃತದೇಹವನ್ನ ಪ್ರಪಾತದಿಂದ ಮೇಲಕ್ಕೆ ತರಲಾಗಿದೆ.

Advertisement

ನಿನ್ನೆ ಸಂಜೆ ವೇಳೆಯೇ ಮೃತದೇಹ ಪತ್ತೆಯಾಗಿದ್ದರೂ ದಟ್ಟಕಾನನ, ಕಾಡುಪ್ರಾಣಿಗಳ ಕಾಟ, ಕತ್ತಲಲ್ಲಿ 4 ಸಾವಿರ ಅಡಿ ಪ್ರಪಾತದಿಂದ ಮೃತದೇಹ ಹೊರತರೋದು ಕಷ್ಟಸಾಧ್ಯ ಎಂದು ಪೊಲೀಸರು, ಅರಣ್ಯ ಸಿಬ್ಬಂದಿಗಳು ಸೇರಿದಂತೆ ಸ್ಥಳಿಯರು ಕಾರ್ಯಾಚರಣೆಯನ್ನ ನಿಲ್ಲಿಸಿದ್ದರು.

ಇಂದು ರಾಣಿಝರಿ ಜಲಪಾತದ ಕಡೆಯಿಂದ ಪ್ರಪಾತಕ್ಕೆ ಇಳಿದ 25 ಜನರ ತಂಡ ಹರಸಾಹಸಪಟ್ಟು ಮೃತದೇಹವನ್ನು ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿಯ ಪ್ರಪಾತದಿಂದ ಮೃತದೇಹವನ್ನ ತರೋದು ಅಷ್ಟು ಸುಲಭವಲ್ಲ. ಆದ್ರೆ, 25 ಜನರ ತಂಡ ಸುಮಾರು 5 ಕಿ.ಮೀ. ಮೃತದೇಹವನ್ನ ಹೊತ್ತು ತಂದು ತೀರಾ ಕಡಿದಾದ ಪ್ರದೇಶದಲ್ಲಿ ಮರದಿಂದ ಮರಕ್ಕೆ ಹಗ್ಗ ಕಟ್ಟಿಕೊಂಡು ಮೃತದೇಹ ಹೊತ್ತುಕೊಂಡು ಹಗ್ಗದ ಮೂಲಕ ಬೆಟ್ಟ ಹತ್ತಿದ್ದಾರೆ.

ರಾಣಿಝರಿ ವ್ಯೂ ಪಾಯಿಂಟ್‍ನಿಂದ ಮೃತದೇಹವಿದ್ದ 4 ಸಾವಿರ ಅಡಿ ಪ್ರಪಾತಕ್ಕೆ ಸುಮಾರು 14 ಕಿ.ಮೀ. ಆಗಲಿದೆ. ಸ್ಥಳಿಯರು, ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ಮೇತದೇಹವನ್ನ ಹರಸಾಹಸಪಟ್ಟು ಮೇಲಕ್ಕೆ ತಂದಿದ್ದಾರೆ. 4 ಸಾವಿರ ಅಡಿ ಪ್ರಪಾತದಿಂದ ಬಿದ್ದ ರಭಸಕ್ಕೆ ಭರತ್ ಮೃತದೇಹ ಸಂಪೂರ್ಣ ಛಿದ್ರವಾಗಿತ್ತು. ಸಾಲದ್ದಕ್ಕೆ ದಟ್ಟಕಾನನ ತಂಪಾದ ವಾತಾವರಣಕ್ಕೆ ಕೊಳೆತು ಹೋಗಿತ್ತು. ಆದರೂ, ಮೃತದೇಹವನ್ನ ಹೊತ್ತುಕೊಂಡು ಬೆಟ್ಟ ಹತ್ತಿ ಮೃತದೇಹವನ್ನ ಮೇಲಕ್ಕೆ ತಂದಿದ್ದಾರೆ.

ಡಿಸೆಂಬರ್ 6ರಂದು ಚಿಕ್ಕಮಗಳೂರು ಜಿಲ್ಲೆಯ ರಾಣಿಝರಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ಯುವಕ ತನ್ನ ಮೊಬೈಲ್, ಬೈಕ್, ಐಡಿ ಕಾರ್ಡ್, ಬಟ್ಟೆಯನ್ನ ಗುಡ್ಡದ ತುದಿಯಲ್ಲಿ ಬಿಟ್ಟು ನಾಪತ್ತೆಯಾಗಿದ್ದ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಮೂರು ದಿನಗಳ ಬಳಿಕ ಅವರ ಕುಟುಂಬಸ್ಥರು ಪ್ರಕರಣ ದಾಖಲಿಸಿ ಹುಡುಕಲು ಮುಂದಾಗಿದ್ದರು.

Advertisement

ಬೆಂಗಳೂರಿನಲ್ಲಿ ಎಂ.ಎನ್.ಸಿ.ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೆಲಸ ಕಳೆದುಕೊಂಡಿದ್ದಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ.

ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next