Advertisement

ಆಧಾರ್‌ ಕಾರ್ಡ್‌ ನೋಂದಣಿಗಾಗಿ ಜನರ ಪರದಾಟ

04:04 PM Jun 26, 2019 | Naveen |

ಮೂಡಿಗೆರೆ: ತಾಲೂಕಿನ ಜನತೆ ಆಧಾರ್‌ ಕಾರ್ಡ್‌ ನೋಂದಣಿಗಾಗಿ ಇನ್ನಿಲ್ಲದ ಪ್ರಯಾಸ ಪಡುತ್ತಿರುವ ದೃಶ್ಯ ಪಟ್ಟಣದಲ್ಲಿ ಪ್ರತಿನಿತ್ಯ ಕಂಡುಬರುತ್ತಿದೆ.

Advertisement

ಇಡೀ ತಾಲೂಕಿಗೆ ಒಂದೇ ಒಂದು ಆಧಾರ್‌ ನೋಂದಣಿ ಕೇಂದ್ರ ಪಟ್ಟಣದಲ್ಲಿ ಇರುವುದರಿಂದ ನಾಗರಿಕರು ನೋಂದಣಿಗಾಗಿ ಪರಿತಪಿಸುವಂತಾಗಿದೆ.

ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್‌ ಶಾಖೆಯಲ್ಲಿ ಹೊರಗುತ್ತಿಗೆ ಪಡೆದ ಏಜೆನ್ಸಿಯೊಂದು ಕೆಲವು ತಿಂಗಳ ಹಿಂದೆ ಆಧಾರ್‌ ಕೇಂದ್ರ ಪ್ರಾರಂಭಿಸಿದೆ. ಮೊದಮೊದಲು ಎಡಬಿಡದೇ ನೊಂದಣಿ, ತಿದ್ದುಪಡಿ ಕೆಲಸಗಳು ಸಾಂಗವಾಗಿ ನೆರವೇರಿದವು. ಆದರೆ, ಬರುಬರುತ್ತಾ ತಿದ್ದುಪಡಿ ಮಾಡಿಸುವ ಜನರ ಸಂಖ್ಯೆ ಅಧಿಕಗೊಂಡಿದೆ. ಅದಕ್ಕೆ ತಕ್ಕಂತೆ ಅವರ ಸರ್ವರ್‌ ಕೂಡ ಆಗಾಗ ನಿಷ್ಕ್ರಿಯಗೊಂಡು, ದಿನವಿಡೀ ಕೆಲಸ ಮಾಡಲಾಗದ ಪರಿಸ್ಥಿತಿ ಎದುರಾಗುತ್ತದೆ. ಇದರಿಂದಾಗಿ ಜನರ ಸಾಲು ಉದ್ದವಾಗುತ್ತಲೇ ಹೋಗುತ್ತಿದೆ. ಜನರ ಸಾಲು ಎಷ್ಟೇ ಉದ್ದವಿದ್ದರೂ ದಿನವೊಂದಕ್ಕೆ 20-25 ಜನರಿಗೆ ಮಾತ್ರ ಟೋಕನ್‌ ಕೊಡುತ್ತಾರೆ. ಮಿಕ್ಕವರು ಮರುದಿನ ಬಂದು ಮತ್ತೆ ಕ್ಯೂ ನಿಲ್ಲಲೇಬೇಕು.

ಹಾಗೆ ಮರುದಿನ ಬಂದರೂ ಅವರಿಗೆ ಮೊದಲ ಪ್ರಾಶಸ್ತ್ಯವೇನೂ ಇಲ್ಲ. ಪಟ್ಟಣದ ಅಕ್ಕಪಕ್ಕದ ಗ್ರಾಮಗಳಿಂದ ಬಹಳಷ್ಟು ಮಂದಿ ಬೆಳಗ್ಗೆ 6ಗಂಟೆಗೇ ಬ್ಯಾಂಕ್‌ ಆವರಣಕ್ಕೆ ಬಂದು ಜಮಾಯಿಸುತ್ತಾರೆ. ಜನರು ಎಷ್ಟೇ ಹೊತ್ತಿಗೆ ಬಂದರೂ ಟೋಕನ್‌ ಕೊಡುವುದು ಬೆಳಗ್ಗೆ 10ರ ನಂತರವೇ. ಕಷ್ಟಪಟ್ಟು ಸಾಲಿನಲ್ಲಿ ನಿಂತು ಟೋಕನ್‌ ಪಡೆದರೂ ಅಂದೇ ಅವರ ಕೆಲಸ ಮುಗಿಯುವುದಿಲ್ಲ. ಟೋಕನ್‌ ಪಡೆದವರು ಆಧಾರ್‌ ಸೆಂಟರ್‌ ಸಿಬ್ಬಂದಿ ನಿಗದಿಪಡಿಸಿದ ದಿನದಂದು ಪುನಃ ಬಂದು ತಮ್ಮ ಕೆಲಸ ಮಾಡಿಸಿಕೊಳ್ಳಬೇಕು. ಹೀಗಾಗಿ, ಒಬ್ಬ ಆಧಾರ್‌ ಕಾರ್ಡ್‌ ಸೇವೆ ಪಡೆಯಲು ಕನಿಷ್ಠ 2ದಿನ ಬರಲೇಬೇಕು. ಸಮಸ್ಯೆಯ ಗಂಭೀರತೆಯ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪರಿಹಾರ ಕಂಡುಬಂದಿಲ್ಲ. ಇಡೀ ತಾಲೂಕಿಗೆ ಒಂದೇ ಆಧಾರ್‌ ನೋಂದಣಿ ಕೇಂದ್ರವಿರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ ಎಂಬುದು ಜನರ ವಾದ. ಇದಕ್ಕೆ ಪರಿಹಾರವೇ ಇಲ್ಲ ಎಂದೇನೂ ಅನಿಸಲ್ಲ. ಆದರೆ, ನಮ್ಮ ಜನನಾಯಕರಿಗೆ ಇಚ್ಛಾಶಕ್ತಿ ಬೇಕು. ಪಟ್ಟಣದಲ್ಲಿ ಕನಿಷ್ಠ 2ನೋಂದಣಿ ಕೇಂದ್ರಗಳಿದ್ದರೆ ಸಮಸ್ಯೆ ತಂತಾನೇ ಪರಿಹಾರವಾಗುತ್ತದೆ. ಬ್ಯಾಂಕ್‌ಶಾಖೆಗಳಲ್ಲೇ ನೋಂದಣಿ ಕೇಂದ್ರವಿರಬೇ ಕೆಂಬ ಕಟ್ಟಳೆಯಿದ್ದರೆ ಪಟ್ಟಣದ ಹೊರವಲಯದಲ್ಲಿನ ವಿಜಯಾ ಬ್ಯಾಂಕ್‌ನಲ್ಲಿ ಹೊಸ ತೊಂದು ಕೇಂದ್ರ ತೆರೆಯ ಬಹುದು. ನಗರದ ಅಂಚೆ ಕಚೇರಿಯಲ್ಲಿ ಇಲ್ಲವೇ ಪಟ್ಟಣ ಪಂಚಾಯಿತಿಯಲ್ಲಿ ಮತ್ತೂಂದು ನೋಂದಣಿ ಕೇಂದ್ರ ಪ್ರಾರಂಭಿಸಿದರೆ ಸಮಸ್ಯೆ ಬಹು ಸುಲಭವಾಗಿ ಬಗೆಹರಿಯುತ್ತದೆ.

ಇನ್ನಾದರೂ ನಮ್ಮ ಜನನಾಯಕರು ಈ ಬಗ್ಗೆ ಮುತುವರ್ಜಿ ವಹಿಸಿ ಮತ್ತೂಂದು ಆಧಾರ್‌ ಕಾರ್ಡ್‌ ನೋಂದಣಿ ಕೇಂದ್ರ ತೆರೆದು ಸಮಸ್ಯೆ ಪರಿಹರಿಸಲು ಆಸಕ್ತಿ ವಹಿಸುವರೇ ಕಾದುನೋಡಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next