Advertisement

ಮುಧೋಳ-ದೇಶಸೇವೆಗಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ: ಹಲಗಲಿ

05:52 PM Mar 15, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಜಗತ್ತಿನಲ್ಲಿ ಸೈನಿಕ ಹುದ್ದೆಗಿಂತ ಬೇರೆ ಯಾವ ಹುದ್ದೆಯೂ ಶ್ರೇಷ್ಠವಲ್ಲ. ತ್ಯಾಗ, ಬಲಿದಾನ, ದೇಶಕ್ಕಾಗಿ ಸಮರ್ಪಣಾ
ಮನೋಭಾವ ಬೆಳೆಯುವುದು ಸೈನ್ಯದಲ್ಲಿ ಮಾತ್ರ ಎಂದು ಭಾರತೀಯ ಸೇನೆಯ ಮಾಜಿ ಉಪ ಮುಖ್ಯಸ್ಥ ರಮೇಶ ಹಲಗಲಿ ಹೇಳಿದರು.

Advertisement

ನಗರದಲ್ಲಿ ಸಪ್ತಸ್ವರ ಸಂಗೀತ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ನೆಪ ಹೇಳುವುದನ್ನು ಬಿಟ್ಟು ನಿರಂತರ ಪ್ರಯತ್ನಶೀಲರಾದಾಗ ಮಾತ್ರ ಅಂದುಕೊಂಡಿರುವ ಗುರಿ ಸಾಧನೆ ಸಾಧ್ಯ ಎಂದರು.

ಜೀವನದಲ್ಲಿ ತಾಯಿಗಿಂತ ಬೇರೆ ದೇವರಲ್ಲಿ ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ತ್ಯಾಗಿಗಾಗಿ ನಾವು ದುಡಿಯಬೇಕು. ದುಡಿದು ದೇಶದ ಕೀರ್ತಿ ಬೆಳಗಬೇಕು ಎಂದು ಹೇಳಿದರು. ರಾಜ್ಯದಲ್ಲಿ ಮುಧೋಳ ನಗರ ನಾಗಾಲೋಟದಲ್ಲಿ ಬೆಳೆಯುತ್ತಿದ್ದು, ಎಲ್ಲ ರಂಗದಲ್ಲಿಯೂ ತನ್ನದೇಯಾದ ಛಾಪು ಮೂಡಿಸುತ್ತಿರುವ ಮುಧೋಳ ತನ್ನದೇಯಾದ ಭವ್ಯ ಇತಿಹಾಸವಿದೆ. ಮುಂದಿನ ದಿನಮಾನದಲ್ಲಿ ದೇಶವೇ ಹಿಂದುರುಗಿ ನೋಡುವಂತೆ ಮುಧೋಳ ನಗರ ಬೆಳೆಯಲಿದೆ ಎಂದು ಭವಿಷ್ಯ ನುಡಿದರು.

ಸಪ್ತಸ್ವರ ಸಂಘಟನೆಯ ಸನ್ಮಾನ ಸ್ವೀಕರಿಸಿ ಮಾತನಾಡಿದ ನೂತನ ನ್ಯಾಯಾಧೀಶೆ ಶೃತಿ ತೇಲಿ ಮಾತನಾಡಿ, ಮಹಿಳಾ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸುವುದು ಮಹಿಳಾ ದಿನಾಚರಣೆ ಮುಖ್ಯ ಉದ್ದೇಶವಾಗಿದೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಮಾಡುತ್ತಿರುವ ಸಪ್ತಸ್ವರ ಸಂಘಟನೆ ಕಾರ್ಯ ಸ್ಮರಣೀಯವಾಗಿದೆ ಎಂದು ನೂತನ ನ್ಯಾಯಾಧೀಶೆ ಹೇಳಿದರು.

Advertisement

ಸಪ್ತಸ್ವರ ಸಂಸ್ಥೆ ಮುಖ್ಯಸ್ಥೆ ಜ್ಯೋತಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೈಲಾ ಲಿಂಗದ ಅಧ್ಯಕ್ಷತೆ ವಹಿಸಿದ್ದರು. ಮಾಲಾ ಪಾಟೀಲ, ನಿರ್ಮಲಾ ಮಲಘಾಣ, ವಿಜಯಾ ಹಂಗರಗಿ, ಸ್ಯಾಮಯೆಲ್‌ ಸಂಸ್ಥಾಪಕ ಅಧ್ಯಕ್ಷೆ ಮಾರ್ಗರೇಟ್‌ ಗೌಡರ, ಸುನಿತಾ ಮಲಘಾಣ, ಶಬಾನಾ ಜಮಾದಾರ, ಭಾರತಿ ಕತ್ತಿ, ಡಾ| ಪಾರ್ವತಿ ನಾಯ್ಕ, ಡಾ| ವೀಣಾ ಕಕರಡ್ಡಿ, ಸುಜಾತಾ ವಸ್ತ್ರದ, ಶಬಾನಾ ಜಮಾದಾರ, ಸುವರ್ಣಾ ಅವಟಿ, ವಿಭಾ ಕೋಲಾರ, ರನ್‌ ಟಿವಿ ಮುಖ್ಯಸ್ಥ ಚಂದ್ರಶೇಖರ ಪಮ್ಮಾರ ಸೇರಿದಂತೆ ಇತರರು ಇದ್ದರು. ಶೃತಿ ನಿಗಡೆ, ಮಹಾಂತೇಶ ಹಿರೇಮಠ ನಿರೂಪಿಸಿ, ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next