Advertisement

ಮುಧೋಳ: ಹಲಗಲಿಯಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಾಥ್‌

05:17 PM Nov 25, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಕಲಿತ ಶಾಲೆಗೊಂದು ಸಾಂಸ್ಕೃತಿಕ ಭವನ ನಿರ್ಮಿಸಬೇಕು ಎಂಬ ಹಳೆಯ ವಿದ್ಯಾರ್ಥಿಗಳ ಕನಸಿಗೆ ನೀರೆರೆದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆರ್ಥಿಕ ನೆರವು ನೀಡುವ ಮೂಲಕ ಶಾಲಾ ಅಭಿವೃದ್ಧಿಗೆ ಕೈ ಜೋಡಿಸಿದೆ.
ತಾಲೂಕಿನ ಹಲಗಲಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಛಾವಣಿಯಲ್ಲಿ ನಿರ್ಮಿಸುತ್ತಿರುವ ಸಾಂಸ್ಕೃತಿಕ ಭವನ ಆರ್ಥಿಕ ಸಂಕಷ್ಟದಿಂದ ಅರ್ಧಕ್ಕೆ ಸ್ಥಗಿತಗೊಂಡಿತ್ತು.

Advertisement

ಹಳೆಯ ವಿದ್ಯಾರ್ಥಿಗಳ ಪ್ರಯತ್ನದಿಂದ ಕ್ರೂಢೀಕರಣಗೊಂಡಿದ್ದ ಹಣವೆಲ್ಲ ಖರ್ಚಾಗಿದ್ದರೂ ಸಮುದಾಯ ಭವನ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ವೇಳೆ ನೆರವಿಗೆ ಬಂದಿರುವ ಧರ್ಮ ಸ್ಥಳ ಸಂಸ್ಥೆ 75 ಸಾವಿರ ರೂ. ನೆರವು ನೀಡುವ ಮೂಲಕ ಸಾಂಸ್ಕೃತಿಕ ಭವನ ಕಾಮಗಾರಿಗೆ ಚಾಲನೆ ದೊರೆಯುವಂತೆ ಮಾಡಿದೆ.

ಅಂದಾಜು 3 ಲಕ್ಷ ರೂ.ಖರ್ಚು ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು, ಗ್ರಾಮದ ಹಿರಿಯರು ಶಿಕ್ಷಣ ಪ್ರೇಮಿಗಳ ಹಿತಾಸಕ್ತಿಯಿಂದ ಈಗಾಗಲೇ ಅಂದಾಜು 3ಲಕ್ಷ ರೂ. ಹಣ ಖರ್ಚು ಮಾಡಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಶಾಲೆಯ ಛಾವಣಿ ಮೇಲೆ ಭವನ ನಿರ್ಮಿಸಲಾಗುತ್ತಿತ್ತು ಆದರೆ ಕ್ರೂಢೀಕರಿಸಿದ್ದ ಹಣವೆಲ್ಲ ಖರ್ಚಾಗಿದ್ದರೂ ಸಮುದಾಯ ಭವನ ಪೂರ್ಣಗೊಂಡಿರಲಿಲ್ಲ. ಈ ವೇಳೆ ಸಂಘದಲ್ಲಿ ಸಹಾಯಧನ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಪ್ರೋತ್ಸಾಹಧನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಧರ್ಮಸ್ಥಳಕ್ಕೆಪ್ರಯಾಣ
ಸಂಘದ ಸ್ಥಳೀಯ ಯೋಜನಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರೋತ್ಸಾಹಧನಕ್ಕೆ ಅಗತ್ಯವಿರುವ ದಾಖಲೆಗಳನ್ನು ಹೊಂದಿಸಿದ ಹಳೆಯ ವಿದ್ಯಾರ್ಥಿಗಳು ಖುದ್ದಾಗಿ ಧರ್ಮಸ್ಥಳಕ್ಕೆ ತೆರಳಿ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ವಸ್ತುಸ್ಥಿತಿ ವಿವರಿಸಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ಕೊಡುಗೈ ದಾನಿಯೆನಿಸಿರುವ ಧರ್ಮಾ ಧಿಕಾರಿ ಡಾ|ವೀರೇಂದ್ರ ಹೆಗ್ಗಡೆಯವರು ಸಂಘದ ವತಿಯಿಂದ 75ಸಾವಿರ ಪ್ರೋತ್ಸಾಹಧನ ನೀಡಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ನೆರವಾಗಿದ್ದಾರೆ.

ಬೇಕಿದೆ ಹೆಚ್ಚಿನ ನೆರವು
ಸದ್ಯ ಧರ್ಮಸ್ಥಳ ಸಂಘದ ವತಿಯಿಂದ 75ಸಾವಿರ ಮಂಜೂರಾಗಿದ್ದರೂ ಭವನ ನಿರ್ಮಾಣಕ್ಕೆ ಇನ್ನೂ ಹಣದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಳೆಯ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ನೆರವು ನೀಡಿದರೆ ಮಕ್ಕಳಿಗಾಗಿ ನಿರ್ಮಾಣಗೊಳ್ಳುತ್ತಿರುವ ಸಾಂಸ್ಕೃತಿಕ ಭವನ ಶೀಘ್ರ ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಗ್ರಾಮಸ್ಥರು.

Advertisement

ನಮ್ಮ ಗ್ರಾಮದ ಸರ್ಕಾರಿ ಮಾದರಿ ಶಾಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಸಾಂಸ್ಕೃತಿಕ ಭವನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಸ್ಥೆಯಿಂದ 75ಸಾವಿರ ಸಹಾಯಧನ ದೊರೆತಿದೆ. ಸಂಘದ ನೆರವಿಗೆ ಧನ್ಯವಾದಗಳು. ಇದೇ ರೀತಿ ಶಿಕ್ಷಣ ಪ್ರೇಮಿಗಳು ಹೆಚ್ಚಿನ ಆರ್ಥಿಕ ನೆರವಿಗೆ ಮುಂದಾದರೆ ಸಾಂಸ್ಕೃತಿಕ ಭವನ ಶೀಘ್ರ ಪೂರ್ಣಗೊಳ್ಳಲಿದೆ.
*ಈರಪ್ಪ ವಾಬನ್ನವರ, ಎಸ್‌ ಡಿಎಂಸಿ ಸದಸ್ಯ,
ಸರ್ಕಾರಿ ಮಾದರಿ ಶಾಲೆ ಹಲಗಲಿ

ಹಲಗಲಿಯ ಸರ್ಕಾರಿ ಮಾದರಿ ಶಾಲೆಯ ಸಾಂಸ್ಕೃತಿಕ ಭವನಕ್ಕೆ ಸಂಘದಿಂದ ಸಹಾಯಧನ ನೀಡಲಾಗಿದೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ನಮ್ಮ ಸಂಘ ಬಡವರಿಗೆ ಹೆಚ್ಚು ನೆರವಾಗುತ್ತಿದೆ.
*ಸುಬ್ರಾಯ ಕೆ. ಬೀಳಗಿ,
ವಲಯ ಯೋಜನಾಧಿಕಾರಿ ಶ್ರೀಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ

*ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next