Advertisement

Mudhol: ಪ್ರತಿಯೊಂದರಲ್ಲೂ ರಾಜಕೀಯ ಸರಿಯಲ್ಲ: ಸಚಿವ ಆರ್.ಬಿ. ತಿಮ್ಮಾಪುರ

05:20 PM Sep 30, 2024 | Team Udayavani |

ಮುಧೋಳ: ನಗರದ ಸರ್ವಾಂಗೀಣ ಅಭಿವೃದ್ದಿಗಾಗಿ ಎಲ್ಲ ಸದಸ್ಯರು ಒಟ್ಟಾಗಿ ಕಾರ್ಯನಿರ್ವಹಿಸುವುದು ಅಗತ್ಯ. ಯಾವುದೋ ಕುಂಟು ನೆಪವಿಟ್ಟಕೊಂಡು‌‌ ಸಭೆ ಬಹಿಷ್ಕರಿಸಿ ಹೊರನಡೆಯುವುದು ಸರಿಯಾದ ಕ್ರಮವಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಬೇಸರ ವ್ಯಕ್ತಪಡಿಸಿದರು.

Advertisement

ಸೋಮವಾರ ನಗರಸಭೆ ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ತೆರಳಿದ್ದ ಬಿಜೆಪಿ ಸದಸ್ಯರ‌ ನಡೆಗೆ ಸ್ಪಷ್ಟೀಕರಣ ನೀಡಿದ ಸಚಿವರು, ಜಿಲ್ಲಾ‌ ಉಸ್ತುವಾರಿ ಸಚಿವನಾಗಿ ಹತ್ತಾರು ಕೆಲಸಕಾರ್ಯಗಳಿರುತ್ತವೆ. ನೂರಾರು ಜನರು ಸಮಸ್ಯೆ ಹೇಳಿಕೊಳ್ಳಲೆಂದು ಆಗಮಿಸುತ್ತಾರೆ. ಅದನ್ನೆಲ್ಲ ನಿಭಾಯಿಸಿ ಬರಲು ಸಮಯದಲ್ಲಿ ಸ್ವಲ್ಪ‌ವ್ಯತ್ಯಾಸವಾಗಿದ್ದು‌ ನಿಜ. ಆದರೆ ಅದನ್ನೆ ದೊಡ್ಡ ವಿಷಯವನ್ನಾಗಿಸಿ ನಗರದ ಅಭಿವೃದ್ದಿ‌ ಕುರಿತಾದ ಸಭೆಯನ್ನು ಬಹಿಷ್ಕರಿಸಿ ನಿಮ್ಮ ವಾರ್ಡ್ ಜನರಿಗೆ ಮೋಸ‌ ಮಾಡಿದಂತಾಗುತ್ತದೆ ಎಂದು ಮಾತಿನ ಮೂಲಕ ತಿವಿದರು.

ರಾಜಕಾರಣ ಮಾಡುವ ವಿಷಯ ಬಂದಾಗ ರಾಜಕಾರಣ ಮಾಡೋಣ ಆದರೆ ನಗರದ ಅಭಿವೃದ್ದಿಗೆ ಎಲ್ಲರೂ ಒಕ್ಕೊರಲಿನಿಂದ‌ ನಡೆಯುವುದು ಅತ್ಯವಶ್ಯ. ಅದನ್ನು ಬಿಟ್ಟು ಸಣ್ಣಪುಟ್ಟ ವಿಷಯಕ್ಕೆಲ್ಲ‌ ಸಭೆ ಬಹಿಷ್ಕರಿಸುವುದು ಸೂಕ್ತವಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next