Advertisement

Mudhol: ಕುಸ್ತಿಗೆ ಪ್ರೋತ್ಸಾಹ ನಿರಂತರವಾಗಿರಲಿ: ತಿಮ್ಮಾಪುರ

03:00 PM Sep 13, 2023 | Team Udayavani |

ಮುಧೋಳ: ಕವಿಚಕ್ರವರ್ತಿ ರನ್ನನ ನಾಡಿನಲ್ಲಿ ಕುಸ್ತಿಗೆ ತನ್ನದೆಯಾದ ಇತಿಹಾಸವಿದೆ. ಘೋರ್ಪಡೆ ಮಹಾರಾಜರ ಕಾಲದಿಂದಲೂ ಇಲ್ಲಿನ ಕುಸ್ತಿ ಕಲಿಗಳನ್ನು ಬೆಳೆಸುವ ಕಾರ್ಯ ನಿರಂತರವಾಗಿ ಸಾಗಿಬಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ನಗರದ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯ ಎರಡನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹಿರಿಯರ ಮಾರ್ಗದರ್ಶನದಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿದ್ದ ಇಲ್ಲಿನ ಕ್ರೀಡಾಳುಗಳು ರಾಷ್ಟ್ರ-ಅಂತಾರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದು ತಿಳಿಸಿದರು.

ನಮ್ಮ ನಾಡಿನ ಯುವಕರು ವಿದೇಶಿ ನೆಲದಲ್ಲಿ ಗೆದ್ದು ಬೀಗಿ ರಾಷ್ಟ್ರಧ್ವಜವನ್ನು ಹೊದ್ದು ಸಂಭ್ರಮಿಸುತ್ತಿರುವ ದೃಶ್ಯ ಕಂಡರೆ ರೋಮಾಂಚನವಾಗುತ್ತದೆ. ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ  ಕ್ರೀಡಾಪಟುವಿನ ಜೀವನವೂ ಉಜ್ವಲವಾಗಲಿ ಎಂದು ಹಾರೈಸಿದರು.

ಮುಧೋಳದಲ್ಲಿ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ಕುಸ್ತಿ ಪಂದ್ಯಾವಳಿಗೆ ನಾಡಿನಾದ್ಯಂತ ಮಕ್ಕಳು ಆಗಮಿಸಿ
ಪಾಲ್ಗೊಂಡಿರುವುದು ಸಂತಸ ತಂದಿದೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯ ಎಲ್ಲವನ್ನೂ ಸಮಾನ ಮನಸ್ಸಿನಿಂದ ಸ್ವೀಕರಿಸುವ ಗುಣದೊಂದಿಗೆ ಕ್ರೀಡಾಮನೋಭಾವದೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಇಲ್ಲಿನ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ಮಕ್ಕಳು ಆಗಮಿಸಿದ್ದಾರೆ. 1100 ಕ್ಕೂ ಹೆಚ್ಚು ಸ್ಪರ್ಧಾಳುಗಳ ಪೈಕಿ ಮುಧೋಳದ 150 ಜನ ಮಕ್ಕಳು ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿ. ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜನೆಗೆ ಸಹಕಾರ ನೀಡಿದ ತಾಲೂಕಿನ ಉದ್ಯಮಿಗಳು, ಸಾರ್ವಜನಿಕರು, ಸರ್ಕಾರಿ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದರು.

Advertisement

ಹಿರಿಯ ಕುಸ್ತಿಪಟು ಕಲ್ಮೇಶ ಹನಮೋಜಿ ಪ್ರಾಸ್ತಾವಿಕವಾಗಿ ಮಾತನಾಡಿ, 22 ವರ್ಷಗಳ ಬಳಿಕ ರನ್ನ ನಗರದಲ್ಲಿ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಅವರು ನಾಡಿನ ಕ್ರೀಡಾ ಮನಗಳ ಬೆಸುಗೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಧರೆಪ್ಪ ಸಾಂಗ್ಲಿಕರ, ಅಶೋಕ ಕಿವಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಗಪ್ಪ ಇಮ್ಮಣ್ಣವರ, ಗಿರೀಶ ಲಕ್ಷಾಣಿ, ಸಂದೀಪ ಕಾಟೆ, ಅನಿಲ ಘೋರ್ಪಡೆ, ಗೋವಿಂದಪ್ಪ ಗುಜ್ಜನ್ನವರ, ಮಂಜು ಕುಮಕಾಲೆ, ಉದಯಸಿಂಗ ಪಡತಾರೆ, ಲಿಂಗನಗೌಡ ಮಂಟೂರ, ಸದುಗೌಡ ಪಾಟೀಲ, ಆನಂದ ಮಾನೆ, ರಾಜೇಸಾಬ ಸೌದಾಗಾರ, ಗೋಪಾಲಗೌಡ ಪಾಟೀಲ, ಸುಭಾಷ ಚಿತ್ತರಗಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ಡಿಡಿಪಿಐ ಬಿ.ಕೆ. ನಂದನೂರ, ತಹಶೀಲ್ದಾರ್‌ ವಿನೋದ ಹತ್ತಳ್ಳಿ, ನಗರಸಭೆ ಆಯುಕ್ತ ಶಿವಪ್ಪ ಅಂಬಿಗೇರ, ಬಿಇಒ ಎಸ್‌.ಎಂ. ಮುಲ್ಲಾ, ಅರಣ್ಯ ಇಲಾಖೆ ಅಧಿಕಾರಿ ಶಿವಪುತ್ರ ತಳವಾರ, ಬಿಆರ್ಸಿ ಸಂಗಮೇಶ ನೀಲಗುಂದ, ತಮ್ಮಣ್ಣ ಮೀಸಿ ಇತರರು ಹಾಜರಿದ್ದರು.

ಗಾಯಗೊಂಡ ಮಕ್ಕಳ ಭೇಟಿ ಕುಸ್ತಿ ಪಂದ್ಯಾವಳಿ ವೇಳೆ ಗಾಯಗೊಂಡಿದ್ದ ಶಿರಸಿಯ ವಿದ್ಯಾರ್ಥಿನಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮಾಪುರ ಯೋಗಕ್ಷೇಮ ವಿಚಾರಿಸಿದರು. ಸ್ಥಳದಲ್ಲಿದ್ದ ವೈದ್ಯರಿಗೆ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು.

ಕುಸ್ತಿ ಮೈದಾನದಲ್ಲಿ ನಗರದ ನಿವೃತ್ತ ಕುಸ್ತಿ ತರಬೇತುದಾರ ಶಂಕ್ರಪ್ಪ ಸರ್‌ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಅವರು ಸನ್ಮಾನಿಸಿದರು. ಧಾರವಾಡದ ಸಾಯಿ ಕ್ರೀಡಾಶಾಲೆಯಲ್ಲಿ ತರಬೇತುದಾರರಾಗಿದ್ದ ಶಂಕ್ರಪ್ಪ ಸರ್‌ ಅವರ ನಿವೃತ್ತಿ ಹೊಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next