Advertisement
ಮುದಗಲ್ಲದಿಂದ ಕೇವಲ ಎರಡು ಕಿಮೀ ದೂರದಲ್ಲಿ ಸುಮಾರು ಹದಿನೈದಕ್ಕೂ ಹೆಚ್ಚು ಗ್ರಾನೈಟ್ ಕ್ವಾರಿಗಳಿವೆ. ಈ ಕಂಪನಿಗಳು ಶ್ವೇತ ಮತ್ತು ಗೆù ಗ್ರಾನೈಟ್ ಶಿಲೆಯನ್ನು ಹೊರತೆಗೆದು ಹೊರ ರಾಷ್ಟ್ರಗಳಿಗೆ ರಫ್ತು ಮಾಡುವ ಮೂಲಕ ಲಕ್ಷಾಂತರ ರೂ.ಆದಾಯ ಗಳಿಸುವ ಪ್ರಮುಖ ಕ್ವಾರಿಗಳಾಗಿವೆ. ಮುದಗಲ್ಲ ಭಾಗದಲ್ಲಿ ದೊರೆಯುವ ಎಂಡಿ-5 (ಮುದಗಲ್ ಗ್ರೈ), ಬೆಕ್ಕಿನ ಕಣ್ಣು (ಕ್ಯಾಟ್ ಐ) ಮತ್ತು ಹಿಮಾಲಯ ಬ್ಲೂ ಎಂಬ ಹೆಸರಿನ ಗ್ರಾನೈಟ್ ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಪ್ರತಿ ತಿಂಗಳು ತೈವಾನ್, ಚೀನ, ಜಪಾನ್‌ದಿಂದ ಖರೀದಿದಾರರು (ಬಯರ್) ಬಂದು ಸಾವಿರಾರು ಘನ ಮೀಟರ್ ಗ್ರಾನೈಟ್ ಖರಿದಿಸುತ್ತಾರೆ. ಆದರೆ ಚೀನದಲ್ಲಿ ನೂರಾರು ಜನರ ಸಾವಿಗೆ ಕಾರಣವಾಗಿರುವ ಕೋವಿಡ್ ವೈರಸ್‌ದಿಂದಾಗಿ ಯಾವುದೇ ವಿದೇಶಿ ಖರೀದಿದಾರರು ಬಾರದೆ ಲಕ್ಷಾಂತರ ರೂ. ಬೆಲೆಯ ಕಲ್ಲು ದಿಮ್ಮಿಗಳು ಹಾಗೆ ಬಿದ್ದಿವೆ. ಇದರಿಂದ ಲಕ್ಷಾಂತರ ರೂ. ಕಳೆದುಕೊಂಡಿರುವ ಕ್ವಾರಿ ಮಾಲೀಕರು ಅನೇಕ ಕಾರ್ಮಿಕರಿಗೆ ರಜೆ ನೀಡಿ ಕ್ವಾರಿಯನ್ನು ಸ್ತಬ್ಧ ಮಾಡಿದ್ದಾರೆ. ಕಳೆದ ಆರೇಳು ವರ್ಷಗಳ ಹಿಂದೆ ಮುದಗಲ್ಲ ಭಾಗದ ಗ್ರಾನೈಟ್ ಬೆಲೆ ಒಂದು ಘನ ಮೀಟರ್‌ಗೆ 1000 ದಿಂದ 1100 ಡಾಲರ್‌ಗೆ ಮಾರಾಟವಾಗುತ್ತಿತ್ತು. ನಂತರ ಕೆಲ ಮಾರುಕಟ್ಟೆಯಲ್ಲಿ ಕಾಂಪಿಟೇಷನ್‌ದಿಂದಾಗಿ 800 ಡಾಲರ್‌ಗೆ ಕುಸಿತ ಕಂಡಿತ್ತು. ಆದರೆ ಇತ್ತೀಚೆಗೆ ಗ್ರಾನೈಟ್ ವಿದೇಶಕ್ಕೆ ಮಾರಾಟವಾಗದಿರುವುದರಿಂದ ಸಾವಿರ ರೂಪಾಯಿಗೂ ಮಾರಾಟವಾಗದೆ ನಷ್ಟ ಅನುಭವಿಸುವಂತಾಗಿದೆ ಎಂಬುದು ಗ್ರಾನೈಟ್ ಮಾಲೀಕರ ಅಳಲಾಗಿದೆ.
Related Articles
Advertisement
– ದೇವಪ್ಪ ರಾಠೋಡ