Advertisement
ಸಮೀಪದ ಮುದೇನೂರು ಗ್ರಾಮದ ಉಮಾಚಂದ್ರಮೌಳೇಶ್ವರ ಜಾತ್ರೋತ್ಸವ ಗುರುವಾರದಿಂದ ಆರಂಭವಾಗಿದ್ದು. ಗುರುವಾರ ಉಮಾಚಂದ್ರಮೌಳೇಶ್ವರ ರಥೋತ್ಸವಕ್ಕೆ ಹಂಪಸಾಗರ ಷ.ಬ್ರ ಅಭಿವನ ಶಿವಲಿಂಗೇಶ್ವರ ರುದ್ರಮುನಿಸ್ವಾಮಿ ಚಾಲನೆ ನೀಡುವ ಮೂಲಕ ಮೂರುದಿನಗಳ ಕಾಲ ನಡೆಯುವು ಜಾತ್ರೆ ಆರಂಭವಾಯಿತು. ಮೊದಲ ದಿನ ಪುರುಷರು ರಥೋತ್ಸವ, ಎರಡನೇ ದಿನ ಮಹಿಳಾ ರಥೋತ್ಸವ ಹಾಗೂ ಕೊನೆ ಮೂರನೇ ದಿನ ಮಕ್ಕಳಿಂದ ರಥೋತ್ಸವ ನಡೆಯುತ್ತಾ ಬಂದಿದೆ.
Related Articles
Advertisement
ಸಾಮಾನ್ಯವಾಗಿ ಕೆಲವು ಕಡೆಗಳಲ್ಲಿ ಒಂದೇ ದಿನ ರಥೋತ್ಸವ ನಡೆಯುತದೇ. ಆದರೇ ಇಲ್ಲಿ ಮೂರು ದಿನಗಳ ಕಾಲ ರಥೋತ್ಸವ ನಡೆಯುವತ್ತದೆ. ಇದರಲ್ಲಿ ಒಂದು ದಿನ ಮಹಿಳೆಯರು ತೆರೆಮರೆಯಲ್ಲಿ ಇರುತ್ತಾರೆ. ಶಿವರಾತ್ರಿಯ ಅಮವಾಸ್ಯೆಯಾದ ಮೊದಲ ದಿನ ಪುರುಷರು ರಥೋತ್ಸವ ನಡೆಯಿತು. ಎರಡನೇ ದಿನ ಗ್ರಾಮದ ಹಾಗೂ ಸುತ್ತಮುತ್ತಲ್ಲ ಗ್ರಾಮಗಳಿಂದ ಆಗಮಿಸಿದ ಸುಮಂಗಲಿಯರೆಲ್ಲರಿಗೂ ಮುತ್ತೆö್ಯದೆಯರು ಉಡಿ ತುಂಬಿವ ಕಾರ್ಯಕ್ರಮ ನಡೆಯುವದು. ಸಂಜೆ 6ಗಂಟೆಗೆ ದೇವಸ್ಥಾನದ ಮುಂದೆ ಹೆಂಗಳೆಯರು ಕೈಯಲ್ಲಿ ಬಣ್ಣ ಬಣ್ಣದ ಕೋಲು ಹಿಡಿದು ಸ್ವಾಮಿಗಳ ಹಾಡುವ ಹಾಡಿಗೆ ಹೆಜ್ಜೆ ಹಾಕುತ್ತಾರೆ. ‘ಹರ ಹರ ಮಹಾದೇವ’ ಎನ್ನುತ್ತಾ ವೀರಗಚ್ಚೆ ಹಾಕಿದ ನೂರಾರು ಮಹಿಳೆಯರು ರಥ ಎಳೆಯುತ್ತಾರೆ. ಅವರಿಗೆ ದಾರಿ ದೀಪವಾಗಿ ಉಳಿದ ಹೆಂಗಳೆಯರು ದೀವಟಿಗೆ ಹಿಡಿದು ಮುಂದೆ ಮುಂದೆ ಸಾಗುತ್ತಾರೆ. ರಥ ಉಮಾ ಚಂದ್ರಮೌಳೇಶ್ವರ ಮಠದಿಂದ ಸಾಗಿ. ಪಾದಕಟ್ಟಿ ಸ್ಥಳವನ್ನು ಮುಟ್ಟಿ ಬೆಳದಿಂಗಳಲ್ಲಿ ಮರಳುವಾಗ ರಥ ಎಳೆದ ಸಂತಸದ ನಗೆ ಮಹಿಳೆಯರ ಕಂಡುಬಂತು.
ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ