Advertisement

ಕಂಬಳಬೆಟ್ಟುವಿನಲ್ಲಿ ಮುದ್ದು ಕೃಷ್ಣರು!

12:23 PM Aug 23, 2018 | Team Udayavani |

ಕೋಸ್ಟಲ್‌ವುಡ್‌ನ‌ಲ್ಲಿ ಬಹಳಷ್ಟು ನಿರೀಕ್ಷೆ ಮೂಡಿಸಿದ ‘ಕಂಬಳಬೆಟ್ಟು ಭಟ್ರೆನ ಮಗಲ್‌’ ಸಿನೆಮಾ ಇನ್ನೇನು ರಿಲೀಸ್‌ನ ಹೊಸ್ತಿಲಲ್ಲಿದೆ. ಅದಕ್ಕೂ ಮೊದಲು ಆಡಿಯೋ ಬಿಡುಗಡೆಯನ್ನು ವಿಭಿನ್ನವಾಗಿ ಮಾಡಬೇಕು ಎಂಬ ಇರಾದೆಯಿಂದ ಚಿತ್ರತಂಡ ಹೊಸ ಐಡಿಯಾ ಮಾಡಿದೆ.

Advertisement

ಅದರಂತೆ ಆಡಿಯೋ ಲಾಂಚ್‌ ಸಂದರ್ಭದಲ್ಲಿ ‘ಮುದ್ದು ಕೃಷ್ಣ ಸ್ಪರ್ಧೆ’ ಆಯೋಜಿಸಲಾಗಿದೆ. 10 ವರ್ಷದೊಳಗಿನ ಮಕ್ಕಳಿಗೆ ಈ ಸ್ಪರ್ಧೆ ಇರಲಿದೆ. ಸೆ. 2ರಂದು ಬೆಳಗ್ಗೆ 9.30ಕ್ಕೆ ಮಂಗಳೂರು ಪುರಭವನದಲ್ಲಿ ಆಡಿಯೋ ರಿಲೀಸ್‌ ಆಗುವ ವೇದಿಕೆಯಲ್ಲಿಯೇ ಮುದ್ದು ಕೃಷ್ಣ ಸ್ಪರ್ಧೆ ಸಂಘಟಿಸಲಾಗಿದೆ. ಇದರ ಜತೆಗೆ ‘ಫ್ಯಾಮಿಲಿ ಸೆಲ್ಫಿ ಸ್ಪರ್ಧೆ’ ಕೂಡ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next