Advertisement
ಕರ್ನಾಟಕ-ಮಹಾರಾಷ್ಟ್ರ ಗಡಿಗೆ ಹತ್ತಿರ ಇರುವ ಉಮರಜ್‌ಗೆ 4-5 ತಿಂಗಳ ಹಿಂದೆ ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ, ತಾಳಿಕೋಟೆ ತಾಲೂಕಿನ ಭಂಟನೂರ ಗ್ರಾಮದ 11 ಕುಟುಂಬಗಳ ಮಕ್ಕಳು, ಮಹಿಳೆಯರು ಸೇರಿ ಸುಮಾರು 60 ಜನರು ಕೂಲಿ ಅರಸಿ ಹೋಗಿದ್ದರು. ಅಲ್ಲಿನ ಇಟ್ಟಂಗಿ ಭಟ್ಟಿಯಲ್ಲಿ ಇವರಿಗೆ ಕೆಲಸ ಸಿಕ್ಕಿತ್ತು. ಅಲ್ಲೇ ಗುಡಿಸಲು ಹಾಕಿಕೊಂಡು ಕುಟುಂಬ ಸಮೇತ ವಾಸವಾಗಿದ್ದರು. ಲಾಕ್‌ಡೌನ್‌ನಿಂದಾಗಿ ಇಟ್ಟಂಗಿ ಭಟ್ಟಿ ಬಂದ್ ಆಗಿದೆ. ಕೆಲ ದಿನ ಹೇಗೋ ಕಾಲ ಕಳೆದರು. ಬಳಿಕ ಲಾಕ್ ಡೌನ್ ವಿಸ್ತರಣೆ ಆಗಿದ್ದು, ಇವರ ಪಾಲಿಗೆ ಶಾಪವಾಗಿ ಪರಿಣಮಿಸಿತು. ಗ್ರಾಮದ ಹೊಲವೊಂದರಲ್ಲಿ ವಾಸವಾಗಿದ್ದಾರೆ. ಅಲ್ಲಿನ ತಾಲೂಕಾಡಳಿತ, ಜಿಲ್ಲಾಡಳಿತ ತಮ್ಮ ಸಮಸ್ಯೆ, ಕೂಗು ಪರಿಗಣಿಸುತ್ತಲೇ ಇಲ್ಲ ಎಂದು ಹಲವರು ದೂರವಾಣಿ ಮೂಲಕ ಇಲ್ಲಿನ ತಮ್ಮ ಬಂಧುಗಳ ಬಳಿ ಸಂಕಟ ಹಂಚಿಕೊಂಡಿದ್ದಾರೆ.
ಜಮಾದಾರ ಕುಟುಂಬಗಳ 38 ಜನ, ಭಂಟನೂರಿನ ಸಿದ್ದನಗೌಡ ಸಾಸನೂರ, ಬಾಲಪ್ಪ ರತ್ನಾಗಿರಿ, ಜಟ್ಟೆಪ್ಪ ತಳವಾರ, ಬಸವರಾಜ ಪಾಲ್ಕೇಕರ್ ಕುಟುಂಬಗಳ 18 ಜನ ಸಹಿತ ಮಹಿಳೆಯರು, ಮಕ್ಕಳು ಸೇರಿ ಒಟ್ಟು 56 ಜನರು ತೀವ್ರ ಸಂಕಷ್ಟದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.