Advertisement

“ನೌಕರರ ಏಳ್ಗೆಗೆ ಶ್ರಮಿಸುವೆ’

04:32 PM Oct 14, 2019 | |

ಮುದ್ದೇಬಿಹಾಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉತ್ತರ ಕರ್ನಾಟಕ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

Advertisement

ಈ ಹಿನ್ನೆಲೆ ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ನಡಹಳ್ಳಿ ಅವರಿಗೆ ಆದೇಶ ಪತ್ರ ಹಸ್ತಾಂತರಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ನಡಹಳ್ಳಿ, ಉಕದವರೇ ಹೆಚ್ಚಿನ ಪ್ರಮಾಣದಲ್ಲಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘಕ್ಕೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿ ಅತಿ ದೊಡ್ಡ ಜವಾಬ್ಧಾರಿ ವಹಿಸಿದ್ದು ಉಕ ನೌಕರರು ನನ್ನ ಮೇಲಿಟ್ಟಿರುವ ನಂಬಿಕೆ, ಭರವಸೆ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸುವುದಲ್ಲದೆ ಅವರ ಏಳ್ಗೆಗೆ ಶ್ರಮಿಸುವ ಭರವಸೆ ನೀಡಿದರು.

ಸಂಘದ ಸಂಸ್ಥಾಪಕ ಹಾಗೂ ಹಾಲಿ ಉಪಾಧ್ಯಕ್ಷ ಮುದ್ದೇಬಿಹಾಳ ತಾಲೂಕು ಜಮ್ಮಲದಿನ್ನಿ ಗ್ರಾಮದ ಸೋಮಶೇಖರ ಮೇಟಿ ಮಾತನಾಡಿ, ಸಂಘಕ್ಕೆ ಮೊದಲು ಧಾರವಾಡ ಜಿಲ್ಲೆ ಕುಂದಗೋಳ ಶಾಸಕ, ಆಗಿನ ಸಚಿವ ಸಿ.ಎಸ್‌. ಶಿವಳ್ಳಿ ಅಧ್ಯಕ್ಷರಾಗಿದ್ದರು.

ಅವರ ಅಕಾಲಿಕ ನಿಧನದಿಂದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ನಡಹಳ್ಳಿ ಆ ಸ್ಥಾನಕ್ಕೆ ಸೂಕ್ತ ಎಂದು ಒಮ್ಮತದ ಅಭಿಪ್ರಾಯ ಮೂಡಿದ್ದರಿಂದ ಅವರನ್ನು ಈ ಸ್ಥಾನಕ್ಕೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದರು.

Advertisement

8-10 ವರ್ಷಗಳ ಹಿಂದೆಯೇ ಅಸ್ತಿತ್ವಕ್ಕೆ ಬಂದಿರುವ ಸಂಘಕ್ಕೆ ಜೆಡಿಎಸ್‌ ನಾಯಕ ಮಾಜಿ ಸಚಿವ ಬಸವರಾಜ ಹೊರಟ್ಟಿ ಗೌರವಾಧ್ಯಕ್ಷರಾಗಿದ್ದರೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಹಾಪೋಷಕರಾಗಿದ್ದಾರೆ. ಜೇವರಗಿ ಶಾಸಕ ಅಜಯ್‌ಕುಮಾರ ಸಿಂಗ್‌ರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಂಸ್ಥೆ ನೌಕರರಾಗಿರುವ ಗದಗ ಜಿಲ್ಲೆಯ ಗುರುನಾಥಗೌಡ ಗೌಡರ ಪ್ರಧಾನ ಕಾರ್ಯದರ್ಶಿಯಾಗಿ, ಹಾವೇರಿ ಜಿಲ್ಲೆಯ ಶಿವಬಸಪ್ಪ ಹುಬ್ಬಳ್ಳಿ ಖಜಾಂಚಿಯಾಗಿ ಕೆಲಸ ಮಾಡುತ್ತಿದ್ದಾರೆ.

ಸಂಘವನ್ನು ಪಕ್ಷಾತೀತವಾಗಿ ರಚಿಸಲಾಗಿದ್ದು ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗದ ಜನಪ್ರತಿನಿ ಧಿಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ತಿಳಿಸಿದರು.

ಶಾಸಕ ನಡಹಳ್ಳಿ ಅವರು ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಸರ್ಕಾರದೊಂದಿಗೆ ಒಳ್ಳೆ ಸಂಬಂಧ ಇದೆ. ಹೀಗಾಗಿ ನಮ್ಮ ಬೇಡಿಕೆ ಈಡೇರಿಸುವ ಜವಾಬ್ದಾರಿ ನಡಹಳ್ಳಿ ಅವರ ಹೆಗಲಿಗೇರಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next