Advertisement

27 ವಲಸಿಗ ಕೂಲಿ ಕಾರ್ಮಿಕರ ಕ್ವಾರಂಟೈನ್‌ನಲ್ಲಿರಿಸಲು ಕ್ರಮ

05:20 PM May 14, 2020 | Naveen |

ಮುದ್ದೇಬಿಹಾಳ: ವಿಜಯಪುರ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕನಮಡಿಯ ಮಹಾರಾಷ್ಟ್ರ ಗಡಿ ಚೆಕ್‌ಪೋಸ್ಟ್‌ನಲ್ಲಿ ಸಿಲುಕಿದ್ದ ಮುದ್ದೇಬಿಹಾಳ, ತಾಳಿಕೋಟೆ ತಾಲೂಕುಗಳ ಗಡಿಸೋಮನಾಳ, ಗೊಟಗುಣಕಿ, ಚವನಭಾವಿ, ಮಾವನಭಾವಿ, ಖ್ಯಾತನಾಳ ಗ್ರಾಮಗಳ 27 ವಲಸೆ ಕಾರ್ಮಿಕರರನ್ನು ಬುಧವಾರ ಕರೆತಂದು ಸಾಂಸ್ಥಿಕ ಕ್ವಾರಂಟೈನ್‌ಗಳಲ್ಲಿ ಇರಿಸಲು ಕ್ರಮ ಕೈಕೊಂಡಿದ್ದಾರೆ.

Advertisement

ಇವರೆಲ್ಲ ಮಹಾರಾಷ್ಟ್ರಕ್ಕೆ ದುಡಿಯಲು ವಲಸೆ ಹೋಗಿದ್ದರು. ಲಾಕ್‌ಡೌನ್‌ನಿಂದ ತೊಂದರೆಗೊಳಗಾಗಿ ತಮ್ಮೂರಿಗೆ ಬರಬೇಕೆಂದು ಗಡಿಭಾಗದ ಕನಮಡಿ ಚೆಕ್‌ಪೋಸ್ಟ್‌ವರೆಗೂ ಮಂಗಳವಾರ ಸಂಜೆ ಆಗಮಿಸಿದ್ದರು. ಆದರೆ ಅಲ್ಲಿ ಬಂದೋಬಸ್ತ್ ಇದ್ದುದರಿಂದ ಕರ್ನಾಟಕ ಗಡಿ ಪ್ರವೇಶಿಸಲು ಅವಕಾಶ ಸಿಕ್ಕಿರಲಿಲ್ಲ. ಇದನ್ನು ಪ್ರಭುಗೌಡರ ಗಮನಕ್ಕೆ ತಂದು ತಮ್ಮನ್ನು ಕರೆದೊಯ್ಯುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಪ್ರಭುಗೌಡರು ಆ ಭಾಗದ ಜಿಪಂ ಸದಸ್ಯ ಸಾಬು ಮಾಶ್ಯಾಳ ಅವರೊಂದಿಗೆ ಚರ್ಚಿಸಿ ಗಡಿಭಾಗದ ಹೊಲವೊಂದರ ಶೆಡ್‌ನ‌ಲ್ಲಿ ಇವರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಿದ್ದರು.

ಬುಧವಾರ ತಾವೇ ಗಡಿಭಾಗಕ್ಕೆ ತೆರಳಿ ಜಿಲ್ಲಾಡಳಿತದೊಂದಿಗೆ ಸಂಪರ್ಕ ಸಾಧಿ ಸಿ, ಸೇವಾಸಿಂಧು ಆ್ಯಪ್‌ನಲ್ಲಿ ಎಲ್ಲರ ಹೆಸರು ದಾಖಲಾಗುವಂತೆ ನೋಡಿಕೊಂಡರು. ನಂತರ ಗಡಿಭಾಗದಲ್ಲಿ ಸ್ಕ್ರೀನಿಂಗ್‌ಗೊಳಪಡಿಸಿ ಎಲ್ಲರನ್ನೂ ಅವರವರ ಊರುಗಳಿಗೆ ಕಳಿಸಲು ವ್ಯವಸ್ಥೆ ಮಾಡಿದರು. ಇಲ್ಲಿಗೆ ಬಂದ ಮೇಲೆ ಇವರನ್ನು ಸಂಬಂಧಿ ಸಿದ ಸ್ಥಳಗಳಲ್ಲಿ ಸಾಂಸ್ಥಿಕ ಕ್ವಾರೆಂಟೈನ್‌ಗೆ ಒಳಪಡಿಸಲು ಮುದ್ದೇಬಿಹಾಳ, ತಾಳಿಕೋಟೆ ತಾಲೂಕಾಡಳಿತ ಕ್ರಮ ಕೈಕೊಂಡಿವೆ. ಜಿಪಂ ಸದಸ್ಯ ಸಾಬೂ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಿದ್ದು ಹೆಬ್ಟಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next